ನವದೆಹಲಿ: ಅರಿಶಿನವು (Turmeric) ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಭಾರತದಲ್ಲಿನ ಪ್ರತಿಯೊಂದು ಪಾಕವಿಧಾನದಲ್ಲಿ ಅರಿಶಿನ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಅರಿಶಿನ ಪುಡಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. 


COMMERCIAL BREAK
SCROLL TO CONTINUE READING

ಅರಿಶಿನ ಹಾಲು (Turmeric Milk) ಆಯುರ್ವೇದದ ಶಿಫಾರಸುಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಅನೇಕ ಜನರು ಪ್ರತಿನಿತ್ಯ ಸೇವಿಸುತ್ತಾರೆ. ಸೂಪರ್‌ಫುಡ್‌ನಂತೆ ಅದರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ. 


ಇದನ್ನೂ ಓದಿ: Omicron Variant: ಆಯುರ್ವೇದಲ್ಲಿ ಹೇಳಿರುವ ಈ 5 ವಿಷಯಗಳು ಕೊರೊನಾದಿಂದ ರಕ್ಷಿಸುತ್ತವೆ, ಏನೆಂದು ತಿಳಿಯಿರಿ


ಆಯುರ್ವೇದದ ಪ್ರಕಾರ, ಮಲಗುವ ಮೊದಲು ಬೆಚ್ಚಗಿನ ಹಾಲನ್ನು ಕುಡಿಯುವುದು ನಿದ್ರಾಹೀನತೆಯ ವಿರುದ್ಧ ಸಹಾಯ ಮಾಡುತ್ತದೆ. ಅರಿಶಿನವನ್ನು ಸೇರಿಸುವ ಮೂಲಕ ಇದನ್ನು ಮತ್ತಷ್ಟು ಆರೋಗ್ಯಕರವಾಗಿಸಬಹುದು. ಅಲ್ಲದೆ ಇದು ಖಿನ್ನತೆ (Dipression) ವಿರುದ್ಧ ಹೋರಾಡಲು ಸಹ ಸಹಾಯಕವಾಗಿದೆ.


ಅರಿಶಿನವು ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದೆ. ಆದರೆ ಆಯುರ್ವೇದದ ಜತೆ ನಂಟಿರುವ ಭಾರತೀಯರಾದ ನಾವು ಯಾವಾಗಲೂ ಗಿಡಮೂಲಿಕೆಗಳು/ಸಾಂಬಾರ ಪದಾರ್ಥಗಳ ಚಿಕಿತ್ಸಕ ಗುಣಗಳನ್ನು ತಿಳಿದಿದ್ದೇವೆ. ಅನೇಕ ಕಾಯಿಲೆಗಳಿಗೆ ಅಡುಗೆ ಮನೆಯಲ್ಲಿಯೇ ಔಷಧಿ ಇರುತ್ತದೆ. 


ಅರಿಶಿನ ಮತ್ತು ಹಾಲಿನ ಈ ಸಂಯೋಜನೆಯು ಶೀತ, ಕೆಮ್ಮು (Cough) ಇತ್ಯಾದಿಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಇದು ಮತ್ತಷ್ಟು ಸೋಂಕು ಅಥವಾ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೊರೊನಾ ಸಮಯದಲ್ಲಿ ಈ ಅರಿಶಿನ ಹಾಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ವೈರಸ್ ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.


ನಿಮ್ಮ ರಾತ್ರಿ ವೇಳೆ ಹಾಲಿಗೆ ಅರಿಶಿನವನ್ನು ಸೇರಿಸಿ ಕುಡಿಯುವುದು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಸುಲಭವಾದ ಮಾರ್ಗವಾಗಿದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬುವುದು ಮತ್ತು ಎದೆ ಉರಿಯುವಿಕೆಯನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ: Benefits Of Ghee-Coffee: ತುಪ್ಪ ಬೆರೆಸಿದ ಕಾಫಿ ಸೇವನೆಯಿಂದ ನಿಮ್ಮ ದಿನ ಆರಂಭಿಸಿ, ಸಿಗಲಿವೆ ಹಲವು ಲಾಭಗಳು


ಇದು ಶೀತ ಮತ್ತು ಕೆಮ್ಮಿನ ಮೇಲೆ ತಕ್ಷಣದ ಫಲಿತಾಂಶಗಳನ್ನು ನೀಡುತ್ತದೆ. ಏಕೆಂದರೆ ಇದು ದೇಹದಿಂದ ಹೆಚ್ಚುವರಿ ಕಫವನ್ನು ತೆಗೆದುಹಾಕುತ್ತದೆ ಮತ್ತು ಸೈನಟಿಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ.


ಅರಿಶಿನ ಹಾಲು ತಯಾರಿಸುವುದು ಹೇಗೆ?


ಅರಿಶಿನ ಹಾಲನ್ನು ತಯಾರಿಸುವ ಮೂಲ ವಿಧಾನವೆಂದರೆ ಹಾಲನ್ನು ಬಿಸಿ ಮಾಡುವುದು, ಅದಕ್ಕೆ ಒಂದು ಟೀ-ಚಮಚ ಪುಡಿಮಾಡಿದ ಅರಿಶಿನವನ್ನು ಸೇರಿಸಿ ಮತ್ತು ನೀವು ಸಿಹಿ ಬಯಸಿದರೆ ಅದಕ್ಕೆ ಸಕ್ಕರೆ (Sugar) ಬೆರೆಸಿ ಕುಡಿಯಿರಿ. ಇದರ ಉತ್ತಮ ಪ್ರಯೋಜನಗಳನ್ನು ಪಡೆಯಲು, ಬೆಲ್ಲ ಅಥವಾ ಸಕ್ಕರೆ ಇಲ್ಲದೆ ಅದನ್ನು ಸೇವಿಸುವುದು ಉತ್ತಮ.  


(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.