ನವದೆಹಲಿ: ಅರಿಶಿನವನ್ನು ಭಾರತೀಯ ಅಡುಗೆಮನೆಯ ನೆಚ್ಚಿನ ಮಸಾಲೆ ಎಂದು ಕರೆದರೆ ತಪ್ಪಾಗಲಾರದು. ಆಹಾರದ ರುಚಿಗಾಗಿ ಬಳಸುವ ಅರಿಶಿನವು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಪ್ರಯೋಜನಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿರುತ್ತದೆ. ಇದು ನಮ್ಮ ಚರ್ಮಕ್ಕೆ ಪ್ರಯೋಜನ ನೀಡುತ್ತದೆ, ಆದ್ದರಿಂದ ಅರಿಶಿನವನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.


COMMERCIAL BREAK
SCROLL TO CONTINUE READING

ಅರಿಶಿನವು ಯಾವುದೇ ಆಯುರ್ವೇದ ಔಷಧಿಗಿಂತಲೂ ಕಡಿಮೆ ಇಲ್ಲ. ಅರಿಶಿನವನ್ನು ನಾವು ಅನೇಕ ರೀತಿ ಬಳಸುತ್ತೇವೆ. ಮನೆಯ ಅಡುಗೆಯಿಂದ ಹಿಡಿದು ನಮ್ಮ ದೇಹದಲ್ಲಿ ಆಗುವ ಗಾಯಕ್ಕೆ ಔಷಧಿಯಾಗಿಯೂ ಅರಿಶಿನವನ್ನು ಬಳಸುತ್ತೇವೆ. ಸೀಮಿತ ಪ್ರಮಾಣದಲ್ಲಿ ಅರಿಶಿನ ಬಳಸಿದರೆ ತೊಂದರೆಯಿಲ್ಲ, ಆದರೆ ‘ಅತಿಯಾದರೆ ಅಮೃತವೂ ವಿಷ’ ಎಂಬ ಮಾತಿನಂತೆ ಅತಿಯಾಗಿ ಅರಿಶಿನದ ಬಳಕೆ ನಮಗೆ ವಿವಿಧ ರೀತಿಯ ಸಮಸ್ಯೆಗಳಿಗೆ ಕಾಣವಾಗುತ್ತದೆ.


ಇದನ್ನೂ ಓದಿ: ಇಂಥವರನ್ನು ಡಯಾಬಿಟೀಸ್ ಅಪಾಯ ಕಾಡುವ ಸಾಧ್ಯತೆ ಹೆಚ್ಚು.! ನಿಮ್ಮನ್ನೊಮ್ಮೆ ಪರೀಕ್ಷಿಸಿಕೊಳ್ಳಿ


ಎಂದಿಗೂ ಅತಿಯಾಗಿ ಅರಿಶಿನ ಸೇವಿಸಬಾರದು


ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಆಹಾರ ತಜ್ಞ ಡಾ.ಆಯುಷಿ ಯಾದವ್ ಪ್ರಕಾರ, ‘ಅರಿಶಿನವು ಔಷಧೀಯ ಗುಣಗಳನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಅತಿಯಾದ ಇದನ್ನು ಸೇವಿಸಿದರೆ ಹಾನಿಯನ್ನುಂಟಾಗುತ್ತದೆ’ ಎಂದು ಹೇಳಿದ್ದಾರೆ. ಅದೇ ರೀತಿ ಅರಿಶಿನವನ್ನು ಏಕೆ ಅತಿಯಾಗಿ ಸೇವಿಸಬಾರದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಅರಿಶಿನವನ್ನು ಎಷ್ಟು ತಿನ್ನುವುದು ಹಾನಿಕಾರಕವಲ್ಲ?


ಅರಿಶಿನದಲ್ಲಿ ಉರಿಯೂತ ನಿವಾರಕ ಮತ್ತು ಆ್ಯಂಟಿ-ಆಕ್ಸಿಡೆಂಟ್ ಗುಣಗಳಿದ್ದು, ಇದರ ಮೂಲಕ ನೀವು ಅನೇಕ ರೋಗಗಳಿಂದ ರಕ್ಷಿಸಲ್ಪಡುತ್ತೀರಿ. ಆದರೆ ನೀವು ಇದನ್ನು ಹೆಚ್ಚು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ತಲೆತಿರುಗುವಿಕೆ ಉಂಟಾಗುತ್ತದೆ. ಆರೋಗ್ಯವಂತ ವಯಸ್ಕನು ದಿನಕ್ಕೆ ಒಂದಕ್ಕಿಂತ ಹೆಚ್ಚು ಟೀಚಮಚ ಅರಿಶಿನವನ್ನು ಸೇವಿಸಬಾರದು.


ಇದನ್ನೂ ಓದಿ: Study: ಟೀ ಪ್ರಿಯರಿಗೆ ಬೇಗ ಸಾವು ಬರುವುದಿಲ್ಲವಂತೆ! ಈ ಸುದ್ದಿ ಓದಿ


ಹೆಚ್ಚು ಅರಿಶಿನ ತಿನ್ನುವ ಅನಾನುಕೂಲಗಳು


1. ಕಿಡ್ನಿ ಸ್ಟೋನ್


ಅರಿಶಿನದ ಹೆಚ್ಚಿನ ಸೇವನೆಯು ನಮ್ಮ ಮೂತ್ರಪಿಂಡದಲ್ಲಿ ಸಮಸ್ಯೆ ಉಂಟುಮಾಡಬಹುದು. ಏಕೆಂದರೆ ಆಕ್ಸಲೇಟ್ ಎಂಬ ವಸ್ತುವು ಈ ಮಸಾಲೆಯಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಕರಗುವಲ್ಲಿ ಅಡಚಣೆ ಉಂಟುಮಾಡುತ್ತದೆ. ನಂತರ ಅದು ಗಟ್ಟಿಯಾಗುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.


2. ವಾಂತಿ ಮತ್ತು ಭೇದಿ


ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ವಸ್ತುವಿದ್ದು, ಇದು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟುಮಾಡುತ್ತದೆ. ಹೊಟ್ಟೆನೋವು ಇದ್ದಲ್ಲಿ ವಾಂತಿ ಮತ್ತು ಭೇದಿ ಉಂಟಾಗಬಹುದು. ಆದ್ದರಿಂದ ಇತಿಮಿತಿಯಲ್ಲಿ ಅರಿಶಿನ ಸೇವಿಸುವುದು ಉತ್ತಮ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.