Turmeric for Skin : ಕೈ ಮತ್ತು ಪಾದಗಳಲ್ಲಿ ಬಿಳಿ ಕಲೆಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸಬಹುದು. ಆದರೆ, ಈ ಬಿಳಿ ಕಲೆಗಳ ಸಮಸ್ಯೆ ಮುಖದವರೆಗೂ  ತಲುಪಿದರೆ, ಮುಜುಗರವನ್ನು ಉಂಟು ಮಾಡುತ್ತದೆ. ಚರ್ಮದ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುವ ಹಿಂದೆ ಅನೇಕ ಕಾರಣಗಳಿವೆ. ವಿಟಲಿಗೋ, ಬಿಳಿ ಕುಷ್ಠರೋಗ ಮತ್ತು ಲ್ಯುಕೋಡರ್ಮಾ ಕಾರಣಗಳಿಂದ ಚರ್ಮದ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ಆಟೋ ಇಮ್ಯುನ್ ಕಂಡಿಶನ್ ಕಾರಣದಿಂದ ಉಂಟಾಗುವ ಸಮಸ್ಯೆಯಾಗಿದೆ. ಈ ಸ್ಥಿತಿಯಲ್ಲಿ ಚರ್ಮದ ವರ್ಣದ್ರವ್ಯವನ್ನು ಉತ್ಪಾದಿಸುವ ಕೋಶಗಳು ನಾಶವಾಗುತ್ತವೆ. ಈ ಸಮಸ್ಯೆಯನ್ನು ತಡೆಗಟ್ಟಲು  ವೈದ್ಯರನ್ನು ಸಂಪರ್ಕಿಸಬೇಕು. ಇನ್ನು ಈ ಬಿಳಿ ಕಲೆಗಳ ಸಮಸ್ಯೆಯನ್ನು ತೊಡೆದುಹಾಕಲು ಕೆಲವು ಮನೆ ಮದ್ದುಗಳನ್ನು ಕೂಡಾ ಪ್ರಯತ್ನಿಸಬಹುದು. 


COMMERCIAL BREAK
SCROLL TO CONTINUE READING

ಇಂಥ ಮನೆ ಮದ್ದುಗಳಲ್ಲಿ ಅರಿಶಿನ ತುಂಬಾ ಪರಿಣಾಮಕಾರಿಯಾಗಿದೆ. ಅರಿಶಿನ ಚರ್ಮದ ಬಿಳಿ ಕಲೆಗಳ ಸಮಸ್ಯೆಯನ್ನು ಬಹಳಷ್ಟು ಮಟ್ಟಿಗೆ ನಿವಾರಿಸುತ್ತದೆ. ಬಿಳಿ  ಕಲೆಗಳ ಸಮಸ್ಯೆಯನ್ನು ಹೋಗಲಾಡಿಸಲು ಅರಿಶಿನವನ್ನು ಹೇಗೆ ಬಳಸಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳ ಸೇವಸಿದರೆ ತಪ್ಪಿದ್ದಲ್ಲ ಸಮಸ್ಯೆ


ಅರಿಶಿನ ಮತ್ತು ಎಣ್ಣೆಯಿಂದ ಬಿಳಿ ಕಲೆಗಳಿಗೆ ಪರಿಹಾರ : 
ಮುಖ ಅಥವಾ ಚರ್ಮದ ಯಾವುದೇ ಭಾಗದಲ್ಲಿ ಬಿಳಿ ಕಲೆಗಳ ಸಮಸ್ಯೆಯನ್ನು ಹೋಗಲಾಡಿಸಲು ಅರಿಶಿನವನ್ನು ಬಳಸಬಹುದು. ಅರಶಿನ ಉತ್ಕರ್ಷಣ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದಿಂದ ಬಿಳಿ ಕಲೆಗಳನ್ನು ತೆಗೆದುಹಾಕುವಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿದೆ.


ಬಿಳಿ ಕಲೆಯ ನಿವಾರಣೆಗೆ ಅರಿಶಿನವನ್ನು ಬಳಸಲು, 1 ಚಮಚ ಅರಿಶಿನ ಪುಡಿಯನ್ನು ತೆಗೆದುಕೊಳ್ಳಿ. ಅದರಲ್ಲಿ ಸುಮಾರು 2 ಚಮಚ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಬಿಳಿ ಕಲೆಗಳ ಮೇಲೆ  ಹಚ್ಚಿ ಸುಮಾರು 15 ನಿಮಿಷಗಳ ಕಾಲ ಬಿಡಿ. ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಬಿಳಿ ಕಲೆಗಳ ಸಮಸ್ಯೆಯನ್ನು ಹೋಗಲಾಡಿಸಬಹುದು.


ಇದನ್ನೂ ಓದಿ : ಕಾಲಿನಲ್ಲಿ ಕಂಡು ಬರುವ ಈ ನಾಲ್ಕು ಲಕ್ಷಣ ಹೇಳುತ್ತದೆ ರಕ್ತ ನಾಳಗಳಲ್ಲಿ ತುಂಬಿ ಹೋಗಿದೆ ಕೊಲೆಸ್ಟ್ರಾಲ್


ದೇಸಿ ತುಪ್ಪ ಮತ್ತು ಅರಿಶಿನ ಮಿಶ್ರಣ : 
ಚರ್ಮದ ಮೇಲಿನ ಬಿಳಿ ಕಲೆಗಳನ್ನು ಹೋಗಲಾಡಿಸಲು, ದೇಸಿ ತುಪ್ಪ ಮತ್ತು ಅರಿಶಿನವನ್ನು ಬಳಸಬಹುದು. ಈ  ಮಿಶ್ರಣ ಕೂಡಾ ಕೆಲವೇ ದಿನಗಳಲ್ಲಿ ಬಿಳಿ ಕಲೆಗಳನ್ನು ಕಡಿಮೆ ಮಾಡುತ್ತದೆ. ಈ ಮಿಶ್ರಣ ತಯಾರಿಸಲು ಸುಮಾರು 10 ಗ್ರಾಂ ತುಪ್ಪವನ್ನು ತೆಗೆದುಕೊಳ್ಳಿ. ಈ ತುಪ್ಪಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಮಿಶ್ರಣವನ್ನು  ಬಿಳಿ ಕಲೆಯಿರುವ ಜಾಗಕ್ಕೆ ಹಚ್ಚಿ. ಹೀಗೆ ಮಾಡುತ್ತಾ ಬಂದರೆ ಚರ್ಮದ ಮೇಲಿನ ಬಿಳಿ ಕಲೆಗಳು ಕೆಲವೇ ದಿನಗಳಲ್ಲಿ ಕಡಿಮೆಯಾಗಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.