ಹೃದ್ರೋಗ: ಇತ್ತೀಚೆಗೆ, ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಹೃದಯಾಘಾತದಿಂದ ನಿಧನರಾದರು. ಅಷ್ಟೇ ಅಲ್ಲ ನಟರಾದ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ, ಸಿದ್ಧಾರ್ಥ್ ಶುಕ್ಲಾ ಸೇರಿದಂತೆ ಹಲವು ಕಲಾವಿದರು ಹೃದಯಾಘಾತದಿಂದಾಗಿ ನಮ್ಮನ್ನು ಅಗಲಿದ್ದಾರೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ ನಮ್ಮ ಕುಟುಂಬದವರಾಗಿರಲಿ ಅಥವಾ ನಮ್ಮ ಸುತ್ತ-ಮುತ್ತಲು ಹಲವರು ಈ ಹಾರ್ಟ್ ಅಟ್ಯಾಕ್ ನಿಂದಾಗಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ನಾವು ನಿತ್ಯ ಕೇಳುತ್ತಲೇ ಇರುತ್ತೇವೆ. ಇದರಿಂದಾಗಿ ಹೃದ್ರೋಗವು ಸಾಮಾನ್ಯವಾಗಿ ಮಾರಣಾಂತಿಕವಾಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿಯೇ, ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ನಾವು ಹೃದಯಾಘಾತ, ಹೃದಯ ಸ್ತಂಭನ, ಹೃದಯ ವೈಫಲ್ಯ ಎಲ್ಲವನ್ನೂ ಒಂದೇ ಎಂದು ಭಾವಿಸುತ್ತೇವೆ. ಆದರೆ, ಹೃದ್ರೋಗದಲ್ಲಿ ಹಲವು ವಿಧಗಳಿದ್ದು ಅದರ ಬಗ್ಗೆ ಕೆಲವು ಮುಖ್ಯವಾದ ಮಾಹಿತಿಯನ್ನು ತಿಳಿದಿರುವುದು ಬಹಳ ಮುಖ್ಯ.


ಹೃದಯ ಕಾಯಿಲೆಗಳಲ್ಲಿನ ವ್ಯತ್ಯಾಸ: 
ಹೃದ್ರೋಗಗಳ ಬಗ್ಗೆ ಮಾತನಾಡಿದಾಗಲೆಲ್ಲ ಹೃದಯ ವೈಫಲ್ಯ, ಹೃದಯಾಘಾತ, ಹೃದಯ ಸ್ತಂಭನದ ಬಗ್ಗೆ ಕೇಳುತ್ತೇವೆ. ಆದರೆ, ಕೆಲವರು ಇವೆಲ್ಲವನ್ನೂ ಒಂದೇ ಎಂದುಕೊಳ್ಳುತ್ತಾರೆ. ಆದರೆ, ಈ ಕಾಯಿಲೆಗಳು ಒಂದೇ  ರೀತಿ ಧ್ವನಿಸಿದರೂ ಇವೆರಡರ ನಡುವೆ ವ್ಯತ್ಯಾಸಗಳಿವೆ. ಅವುಗಳ ಬಗ್ಗೆ ತಿಳಿಯೋಣ...


ಇದನ್ನೂ ಓದಿ- Jackfruit: ಹಲಸು ತಿಂದ ನಂತರ ಈ ಆಹಾರಗಳನ್ನು ಸೇವಿಸಲೇಬಾರದು


ಹೃದಯ ಸಂಬಂಧಿಸಿದ ಕಾಯಿಲೆಗಳು:
1. ಹೃದಯಾಘಾತ:

ಹೃದಯಾಘಾತವನ್ನು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಎಂದೂ ಕರೆಯುತ್ತಾರೆ. ಪರಿಧಮನಿಯ ಅಪಧಮನಿಯಲ್ಲಿ ಹಠಾತ್ ಅಡಚಣೆ ಉಂಟಾದಾಗ ಇದು ಸಂಭವಿಸುತ್ತದೆ. ಈ ಅಪಧಮನಿಯ ಸಹಾಯದಿಂದ, ರಕ್ತವು ಹೃದಯವನ್ನು ತಲುಪುತ್ತದೆ, ಹೃದಯಾಘಾತದಿಂದಾಗಿ, ಹೃದಯದೊಳಗೆ ಇರುವ ಕೆಲವು ಸ್ನಾಯುಗಳು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಆಂಜಿಯೋಪ್ಲ್ಯಾಸ್ಟಿ, ಸ್ಟಂಟಿಂಗ್ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆ ಸೇರಿದಂತೆ ಈ ಸಮಸ್ಯೆಯನ್ನು ನಿವಾರಿಸಲು ವಿವಿಧ ಚಿಕಿತ್ಸೆಗಳನ್ನು ಮಾಡಲಾಗುತ್ತದೆ.


2. ಹೃದಯ ವೈಫಲ್ಯ:
ದೇಹಕ್ಕೆ ಅಗತ್ಯವಿರುವ ಕೆಲಸವನ್ನು ಮಾಡಲು ಹೃದಯ ಸ್ನಾಯುಗಳು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದಯ ವೈಫಲ್ಯ ಸಂಭವಿಸುತ್ತದೆ. ಹೃದಯವು ದುರ್ಬಲಗೊಳ್ಳಲು ಪ್ರಾರಂಭಿಸಿದಾಗ ಇಂತಹ ಪರಿಸ್ಥಿತಿ ಬರುತ್ತದೆ. ಹೃದಯಾಘಾತವು ಸಾಮಾನ್ಯವಾಗಿ ಪರಿಧಮನಿಯ ಕಾಯಿಲೆ, ಅಧಿಕ ರಕ್ತದೊತ್ತಡ ಅಥವಾ ಕಾರ್ಡಿಯೊಮಿಯೊಪತಿಯಂತಹ ಸಮಸ್ಯೆಗಳಿಂದ ಉಂಟಾಗುತ್ತದೆ.


ಇದನ್ನೂ ಓದಿ- Diabetes Mellitus: ಸಕ್ಕರೆ ಕಾಯಿಲೆ ಇರುವವರಿಗೆ ಈ ನೀರು ಒಂದು ವರದಾನವೇ ಇದ್ದಂತೆ


3. ಹೃದಯ ಸ್ತಂಭನ:
ಹೃದಯದೊಳಗೆ ಕುಹರದ ಕಂಪನವು ಉಂಟಾಗಲು ಪ್ರಾರಂಭಿಸಿದಾಗ ಹೃದಯ ಸ್ತಂಭನದ ಸ್ಥಿತಿ ಬರುತ್ತದೆ, ಅಂದರೆ, ಹೃದಯದ ವಿವಿಧ ಭಾಗಗಳಲ್ಲಿ ಸಂವಹನ ಅಂತರವು ಉದ್ಭವಿಸಲು ಪ್ರಾರಂಭಿಸುತ್ತದೆ. ಇದು ಹೃದಯ ಬಡಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಸಮಸ್ಯೆಯು ಮಿತಿಯನ್ನು ಮೀರಿದರೆ, ನಂತರ ಹೃದಯ ಬಡಿತ ನಿಲ್ಲುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ವ್ಯಕ್ತಿಯ ಪ್ರಾಣಕ್ಕೂ ಅಪಾಯವಾಗಬಹುದು. ಹೃದಯ ಸ್ತಂಭನಕ್ಕೆ ಒಳಗಾದ ರೋಗಿಗಳಿಗೆ CPR ನೀಡಲಾಗುತ್ತದೆ ಇದರಿಂದ ಉಸಿರಾಟದ ತೊಂದರೆಗಳು ದೂರವಾಗುತ್ತವೆ. ಕೆಲವೊಮ್ಮೆ ಡಿಫಿಬ್ರಿಲೇಟರ್ ಹೊಂದಿರುವ ರೋಗಿಗಳಿಗೆ ಕರೆಂಟ್ ಶಾಕ್ ರೀತಿಯ ಚಿಕಿತ್ಸೆಯನ್ನೂ ನೀಡಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.