ಬೇಸಿಗೆಯಲ್ಲಿ ಹಾಗಲಕಾಯಿ ತಿನ್ನೋದು ಎಷ್ಟು ಉತ್ತಮ!

ಇನ್ನು ಬೇಸಿಗೆಯಲ್ಲಿ ಹಾಗಲಕಾಯಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದು ಸರಿಯೇ ಅಥವಾ ಹಾನಿಕಾರಕವೇ? ಎಂಬುದು ಕೆಲವರ ಗೊಂದಲ. ಹೀಗಾಗಿ ಇಂದು ಹಾಗಲಕಾಯಿಯ ಗುಣಗಳ ಜೊತೆಗೆ ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಮೊದಲು ಹಾಗಲಕಾಯಿಯ ಪ್ರಯೋಜನಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. 

Written by - Bhavishya Shetty | Last Updated : Jun 4, 2022, 11:41 AM IST
  • ಬೇಸಿಗೆಯಲ್ಲಿ ಹಾಗಲಕಾಯಿ ತಿನ್ನುವುದರಿಂದ ಆಗೋ ಪ್ರಯೋಜನಗಳು
  • ಹಾಗಲಕಾಯಿ ಸೇವನೆಯಿಂ ದೇಹ ತಂಪಾಗಿರುತ್ತದೆ
  • ಚರ್ಮ ಸಂಬಂಧಿತ ಅನೇಕ ಕಾಯಿಲೆಗಳಿಗೆ ಹಾಗಲಕಾಯಿ ಮದ್ದು
ಬೇಸಿಗೆಯಲ್ಲಿ ಹಾಗಲಕಾಯಿ ತಿನ್ನೋದು ಎಷ್ಟು ಉತ್ತಮ! title=
Bitter gourd benefits

ಜೂನ್ ತಿಂಗಳು ಬರುತ್ತಿದ್ದು, ಮಳೆ ಆಗಾಗ್ಗ ಬೀಳುತ್ತಿದ್ದರೂ ಸಹ ಬಿಸಿಲಿನ ತಾಪ ಮಾತ್ರ ಉತ್ತುಂಗಕ್ಕೇರುತ್ತಿದೆ. ಇದನ್ನು ತಪ್ಪಿಸಲು, ಜನರು ತಮ್ಮ ಆಹಾರ ಮತ್ತು ಪಾನೀಯ ಪದ್ಧತಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕರು ಹಾಗಲಕಾಯಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇನ್ನು ಬೇಸಿಗೆಯಲ್ಲಿ ಹಾಗಲಕಾಯಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದು ಸರಿಯೇ ಅಥವಾ ಹಾನಿಕಾರಕವೇ? ಎಂಬುದು ಕೆಲವರ ಗೊಂದಲ. ಹೀಗಾಗಿ ಇಂದು ಹಾಗಲಕಾಯಿಯ ಗುಣಗಳ ಜೊತೆಗೆ ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಮೊದಲು ಹಾಗಲಕಾಯಿಯ ಪ್ರಯೋಜನಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. 

ಇದನ್ನು ಓದಿ: Skin Care Mistakes: ಮೊಡವೆಗಳಿಂದ ಮುಕ್ತಿ ಬೇಕೆಂದರೆ ಇಂದೇ ನಿಮ್ಮ ಈ ಅಭ್ಯಾಸ ಬದಲಿಸಿ

ಹಾಗಲಕಾಯಿಯ ಪ್ರಯೋಜನಗಳು: 

  • ಹಾಗಲಕಾಯಿಯ ಸೇವನೆಯು ತೂಕ ಇಳಿಸಿಕೊಳ್ಳಲು ಸಹಕಾರಿ.
  • ದೃಷ್ಟಿ ಸಮಸ್ಯೆ ಇರುವವರು ಬೇಸಿಗೆಯಲ್ಲಿ ಹಾಗಲಕಾಯಿಯನ್ನು ತಿನ್ನುವುದು ಒಳ್ಳೆಯದು.
  • ಮಧುಮೇಹ ರೋಗಿಗಳಿಗೆ ಬೇಸಿಗೆಯಲ್ಲಿ ಹಾಗಲಕಾಯಿ ಸೇವನೆ ಉತ್ತಮ
  • ಹಾಗಲಕಾಯಿಯಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ
  • ಹಾಗಲಕಾಯಿಯ ನಿಯಮಿತ ಸೇವನೆಯಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಸಹ ನಿವಾರಿಸಬಹುದು.
  • ಹಾಗಲಕಾಯಿ ಮಲಬದ್ಧತೆ ಮತ್ತು ಪೈಲ್ಸ್‌ನಂತಹ ಕಾಯಿಲೆಗಳನ್ನು ದೂರ ಮಾಡುತ್ತದೆ.

ಅನಾನುಕೂಲಗಳು: 

  • ಮಧುಮೇಹಿಗಳು ಹಾಗಲಕಾಯಿಯನ್ನು ತಿನ್ನುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಸೂಕ್ತ
  • ಮಕ್ಕಳಿಗೆ ಎದೆಹಾಲು ನೀಡುವ ಮಹಿಳೆಯರು ಹಾಗಲಕಾಯಿ ತಿನ್ನಬಾರದು
  • ಗರ್ಭಾವಸ್ಥೆಯಲ್ಲಿಯೂ ಹಾಗಲಕಾಯಿಯನ್ನು ತಿನ್ನಬಾರದು
  • ಅನೇಕ ಬಾರಿ ಹಾಗಲಕಾಯಿಯ ಸೇವನೆಯು ಹೊಟ್ಟೆ ಸೆಳೆತ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಕಾರಣವಾಗಬಹುದು.

ಇದನ್ನು ಓದಿ: ಜೂನ್ 14 ರವರೆಗೆ ಈ ರಾಶಿಯವರಿಗೆ ಭಾರೀ ಅದೃಷ್ಟ..! ಎಲ್ಲಾ ಕೆಲಸವನ್ನು ಕೈ ಗೂಡಿಸಲಿದ್ದಾನೆ ಸೂರ್ಯ ದೇವ

ಹಾಗಲಕಾಯಿ ದೇಹವನ್ನು ತಂಪಾಗಿಸುತ್ತದೆ: 
ಹಾಗಲಕಾಯಿಯನ್ನು ಶೀತ ಆಹಾರ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದರ ಸೇವನೆಯು ದೇಹಕ್ಕೆ ತಂಪು ನೀಡುತ್ತದೆ. ಆದ್ದರಿಂದಲೇ ಬೇಸಿಗೆಯಲ್ಲಿ ಹಾಗಲಕಾಯಿ ತರಕಾರಿಯನ್ನು ಹೆಚ್ಚು ತಿನ್ನುತ್ತಾರೆ. ಹಾಗಲಕಾಯಿಯು ಇಂತಹ ಹಲವಾರು ಪೋಷಕಾಂಶಗಳನ್ನು ಹೊಂದಿದ್ದು, ಇದು ನಿಮ್ಮ ದೇಹವನ್ನು ಫಿಟ್ ಆಗಿ ಇಡಲು ಸಹಾಯ ಮಾಡುತ್ತದೆ. ಇವುಗಳಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಪೊಟ್ಯಾಸಿಯಮ್, ಜೀವಸತ್ವಗಳು, ಮೆಗ್ನೀಸಿಯಮ್, ರಂಜಕ ಮತ್ತು ಫೈಬರ್ ಮುಂತಾದವು ಸೇರಿವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News