ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಮನೆಯಲ್ಲಿಯೇ ಇರುವ ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು
How To Make Coffee Powder Hair Pack: ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿಕೊಂಡರೆ ಕೂದಲ ನ್ನು ಫಳಫಳನೆ ಹೊಳೆಯುವಂತೆ ಮಾಡಬಹುದು. ಸ್ಪಾ ಅಥವಾ ಕೆರಾಟಿನ್ ಇಲ್ಲದೆ ಸುಂದರ ಕೂದಲು ನಿಮ್ಮದಾಗುತ್ತದೆ.
How To Make Coffee Powder Hair Pack : ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಬೇಸಿಗೆಯಲ್ಲಿ, ಧೂಳು, ಬೆವರು ಮತ್ತು ಬಲವಾದ ಸೂರ್ಯನ ಪ್ರಖರ ಕಿರಣಗಳು ನಿಮ್ಮ ಕೂದಲನ್ನು ಹಾನಿಗೊಳಿಸುತ್ತದೆ. ಹೀಗಾದಾಗ ಹೇರ್ ಸ್ಪಾ ಅಥವಾ ಕೆರಾಟಿನ್ ಮೊರೆ ಹೋಗಬೇಕಾಗುತ್ತದೆ. ಆದರೆ ಈ ವಿಧಾನಗಳನ್ನು ಅನುಸರಿಸಬೇಕಾದ್ರೆ ಬಹಳ ಹಣ ವ್ಯಾಯ ಮಾಡಬೇಕಾಗುತ್ತದೆ. ಪ್ರತಿ ಸಂದರ್ಭಗಳಲ್ಲಿ ಸ್ಪಾ ಅಥವಾ ಕೆರಾಟಿನ್ ಮಾಡಿಸುವುದು ದುಬಾರಿಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಿಮ್ಮ ಕೂದಲನ್ನು ರೇಷ್ಮೆಯಂತೆ ಹೊಳೆಯುವಂತೆ ಮಾಡುವ ಸುಲಭ ವಿಧಾನದ ಬಗ್ಗೆ ಹೇಳುತ್ತವೆ.
ಹೌದು, ಮನೆಯಲ್ಲಿಯೇ ಇರುವ ಈ ವಸ್ತುಗಳನ್ನು ಬಳಸಿಕೊಂಡರೆ ಕೂದಲ ನ್ನು ಫಳಫಳನೆ ಹೊಳೆಯುವಂತೆ ಮಾಡಬಹುದು. ನಾವಿಲ್ಲಿ ಕಾಫಿ ಪೌಡರ್ ಹೇರ್ ಪ್ಯಾಕ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಹೇರ್ ಪ್ಯಾಕ್ ನಿಮ್ಮ ಕೂದಲನ್ನು ರೇಷ್ಮೆಯ ರೀತಿ ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ ತಲೆಹೊಟ್ಟು ಮತ್ತು ಅಕಾಲಿಕ ಬಿಳಿ ಕೂದಲನ್ನು ತೊಡೆದುಹಾಕಲು ಕೂಡಾ ಸಹಾಯ ಮಾಡುತ್ತದೆ. ಹಾಗಾದರೆ ಕಾಫಿ ಪೌಡರ್ ಹೇರ್ ಪ್ಯಾಕ್ ಮಾಡುವುದು ಹೇಗೆ ನೋಡೋಣ.
ಇದನ್ನೂ ಓದಿ : Health Care Tips: ನಿಮಗೂ ಅತಿಯಾದ ನಿದ್ದೆ ಮಾಡುವ ಅಭ್ಯಾಸ ಇದೆಯಾ? ಇಂದೇ ಎಚ್ಚೆತ್ತುಕೊಳ್ಳಿ
ಕಾಫಿ ಪುಡಿ ಹೇರ್ ಪ್ಯಾಕ್ ಮಾಡಲು ಬೇಕಾಗುವ ಸಾಮಗ್ರಿಗಳು :
ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ 2 ಟೀಸ್ಪೂನ್
ಕಾಫಿ ಪುಡಿ 1 ಟೀಸ್ಪೂನ್
ಕಾಫಿ ಪುಡಿ ಹೇರ್ ಪ್ಯಾಕ್ ಮಾಡುವುದು ಹೇಗೆ? :
ಕಾಫಿ ಪೌಡರ್ ಹೇರ್ ಪ್ಯಾಕ್ ಮಾಡಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ.
ನಂತರ ನೀವು ಅದರಲ್ಲಿ ಒಂದು ಚಮಚ ಕಾಫಿ ಪುಡಿ ಮತ್ತು 2 ಚಮಚ ಕ್ಯಾಸ್ಟರ್ ಆಯಿಲ್ ಅನ್ನು ಸೇರಿಸಿ.
ಇದರ ನಂತರ, ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಈಗ ನಿಮ್ಮ ಕಾಫಿ ಪೌಡರ್ ಹೇರ್ ಪ್ಯಾಕ್ ಸಿದ್ಧ.
ಇದನ್ನೂ ಓದಿ : Breast cancer: ನಿಮ್ಮ ಸ್ತನ ಕ್ಯಾನ್ಸರ್ ಮತ್ತೆ ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಕೇಳಬೇಕಾದ 6 ಪ್ರಶ್ನೆಗಳು
ಕಾಫಿ ಪುಡಿ ಹೇರ್ ಪ್ಯಾಕ್ ಅನ್ನು ಹೇಗೆ ಬಳಸುವುದು?
ಕಾಫಿ ಪುಡಿ ಹೇರ್ ಪ್ಯಾಕ್ ಅನ್ನು ಹಚ್ಚುವ ಮೊದಲು ಕೂದಲನ್ನು ಒದ್ದೆ ಮಾಡಿ.
ನಂತರ ನೀವು ಸಿದ್ಧಪಡಿಸಿದ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಚೆನ್ನಾಗಿ ಹಚ್ಚಿ.
ಈ ಪ್ಯಾಕ್ ಅನ್ನು ನಿಮ್ಮ ಕೂದಲಿನ ಮೇಲೆ ಅರ್ಧ ಘಂಟೆಯವರೆಗೆ ಬಿಡಿ.
ನಂತರ ಮೈಲ್ಡ್ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.
ಉತ್ತಮ ಫಲಿತಾಂಶಗಳಿಗಾಗಿ, ಈ ಹೇರ್ ಪ್ಯಾಕ್ ಅನ್ನು ವಾರಕ್ಕೆ 2-3 ಬಾರಿ ಪ್ರಯತ್ನಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.