Fenugreek For Weight Loss : ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಅನೇಕ ರೋಗಗಳು ನಮ್ಮನ್ನು ಬಾಧಿಸದಂತೆ ತಡೆಯಬಹುದು. ಇದಕ್ಕಾಗಿ, ಹಲವರು ಜಿಮ್‌ನಲ್ಲಿ ತಿಂಗಳುಗಟ್ಟಲೆ ಬೆವರು ಹರಿಸುತ್ತಾರೆ. ಆದರೆ ಕೆಲವೊಮ್ಮೆ ಈ ಪ್ರಯತ್ನ ಫಲ ನೀಡುವುದಿಲ್ಲ. ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಸುರಿಸುವ ಅವಶ್ಯಕತೆಯಿಲ್ಲ. ಮೆಂತ್ಯೆಯನ್ನು ಬಳಸುವ ಮೂಲಕ ಕೂಡಾ ದೇಹ ತೂಕವನ್ನು ಕಳೆದುಕೊಳ್ಳಲು  ಸಾಧ್ಯವಾಗುತ್ತದೆ. ಆದರೆ ತೂಕ ಕಳೆದುಕೊಳ್ಳಲು ಮೆಂತ್ಯೆಯ ಸೇವನೆ ಹೇಗೆ ಮಾಡಬೇಕು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.  


COMMERCIAL BREAK
SCROLL TO CONTINUE READING

ತೂಕವನ್ನು ಕಳೆದುಕೊಳ್ಳಲು ಈ ವಿಧಾನಗಳಲ್ಲಿ ಮೆಂತ್ಯೆ ನೀರನ್ನು ಕುಡಿಯಿರಿ :
ಮೆಂತ್ಯೆ ನೀರು :
ತೂಕ ನಷ್ಟಕ್ಕೆ ಮೆಂತ್ಯ ನೀರು ತುಂಬಾ ಸಹಾಯಕವಾಗಿದೆ. ಈ ನೀರನ್ನು ತಯಾರಿಸಲು, 1 ಟೀ ಚಮಚ ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಡಿ. ಈಗ ಈ ನೀರನ್ನು ಬೆಳಿಗ್ಗೆ ಫಿಲ್ಟರ್ ಮಾಡಿ ಕುಡಿಯಿರಿ. ಹೀಗೆ ಮಾಡುವುದರಿಂದ ದೇಹವು ಡಿಟಾಕ್ಸ್ ಆಗುತ್ತದೆ ಮತ್ತು ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ತೂಕ ಇಳಿಸಿಕೊಳ್ಳಲು  ನಿತ್ಯ ಮೆಂತ್ಯೆ ನೀರನ್ನು ಕುಡಿಯಬಹುದು.


ಇದನ್ನೂ ಓದಿ : ಅರಿಶಿಣ ಔಷಧ.. ಆದರೆ..! ನಿಮ್ಮಲ್ಲಿ ಈ ಸಮಸ್ಯೆಗಳಿದ್ದರೆ ಅದರಿಂದ ದೂರವಿರಿ


ಮೆಂತ್ಯೆ ಬೀಜಗಳ ಚಹಾ : 
ತೂಕವನ್ನು ಕಡಿಮೆ ಮಾಡಲು ಮೆಂತ್ಯೆ ಚಹಾವನ್ನು ತಯಾರಿಸಿ  ಕುಡಿಯಬಹುದು. ಈ ಚಹಾವನ್ನು ತಯಾರಿಸಲು, ಒಂದು ಲೋಟ ನೀರನ್ನು ಕುದಿಸಿ, ನೀರು ಕುದಿಯುವಾಗ, ಅದರಲ್ಲಿ ಒಂದು ಚಮಚ ಮೆಂತ್ಯೆ ಬೀಜಗಳನ್ನು ಹಾಕಿ ಕುದಿಸಿ. ಈಗ ನೀರು ಅರ್ಧದಷ್ಟಾಗುವಾಗ   ಫಿಲ್ಟರ್ ಮಾಡಿ ಕುಡಿಯಿರಿ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ಹೊಟ್ಟೆ ಭಾಗದ ಬೊಜ್ಜು ಕರಗಲು ಸಹಾಯ ಮಾಡುತ್ತದೆ. 


ಮೆಂತ್ಯೆ  ಬೀಜಗಳು ಮತ್ತು ಜೇನುತುಪ್ಪ : 
ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು, ಮೆಂತ್ಯೆಯನ್ನು   ಪುಡಿಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸಿ. ಇದು ನಿಮ್ಮ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ, ರೋಗನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸಿಕೊಳ್ಳಬಹುದು. ಆದ್ದರಿಂದ ತೂಕವನ್ನು ಕಡಿಮೆ ಮಾಡಲು, ನಿತ್ಯ ಮೆಂತ್ಯೆ ಬೀಜಗಳು ಮತ್ತು ಜೇನುತುಪ್ಪವನ್ನು ಸೇವಿಸಿ. 


ಇದನ್ನೂ ಓದಿ : Health Tips:ಫ್ಯಾಟಿ ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಹಾರಗಳು ವರದಾನಕ್ಕೆ ಸಮ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.