ತಾಯ್ತನಕ್ಕಾಗಿ ಹಂಬಲಿಸುವವರಿಗೆ ವರದಾನವಂತೆ ಈ ಅಕ್ಕಿ ! ಮಕ್ಕಳಿಲ್ಲದವರು ಒಮ್ಮೆ ಟ್ರೈ ಮಾಡಿ ನೋಡಿ

ಈ ಅಕ್ಕಿ 180 ದಿನಗಳಿಂದ 210 ದಿನಗಳವರೆಗೆ ಇಳುವರಿ ನೀಡುತ್ತದೆ. ಕಾಡಿನಲ್ಲಿ ಬೆಳೆಯುವ ಈ ಅಕ್ಕಿಯು ಕಾಡಾನೆ ಬಲವನ್ನು ನೀಡಬಲ್ಲದು ಎಂದು ಹೇಳುತ್ತಾರೆ. ಈ ​ಅಕ್ಕಿ ಬಲು ವಿರಳ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ

Written by - Ranjitha R K | Last Updated : Jun 8, 2023, 03:36 PM IST
  • ಅನುಚಿತ ಜೀವನಶೈಲಿ ಮತ್ತು ಆಹಾರಕ್ರಮಗಳಿಂದ ಆರೋಗ್ಯ ಸಮಸ್ಯೆ
  • ಅನುಸರಿಸುತ್ತಿರುವ ಜೀವನಶೈಲಿ ಮತ್ತು ಆಹಾರಕ್ರಮ ಬಂಜೆತನಕ್ಕೆ ಕಾರಣವಾಗಬಹುದು.
  • ಕಪ್ಪು ಅಕ್ಕಿ ಅಥವಾ ವೈಲ್ಡ್ ರೈಸ್ ಅನೇಕ ರೀತಿಯ ಆರೋಗ್ಯ ಪ್ರಯೋಜನ
ತಾಯ್ತನಕ್ಕಾಗಿ ಹಂಬಲಿಸುವವರಿಗೆ ವರದಾನವಂತೆ ಈ ಅಕ್ಕಿ ! ಮಕ್ಕಳಿಲ್ಲದವರು ಒಮ್ಮೆ ಟ್ರೈ ಮಾಡಿ ನೋಡಿ  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವ ದಂಪತಿಗಳಲ್ಲಿ ಮಕ್ಕಳಿಲ್ಲದ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಆಹಾರ ಕ್ರಮ ಮತ್ತು ವೈದ್ಯಕೀಯ ಸಲಹೆ ಎರಡೂ ಒಟ್ಟಿಗೆ ಸಾಗಿದರೆ ತಾಯ್ತನ ಗ್ಯಾರಂಟಿ. ಅನುಚಿತ ಜೀವನಶೈಲಿ ಮತ್ತು ಆಹಾರಕ್ರಮ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಾವು ಅನುಸರಿಸುತ್ತಿರುವ ಜೀವನಶೈಲಿ ಮತ್ತು ಆಹಾರಕ್ರಮ ಬಂಜೆತನಕ್ಕೆ ಕಾರಣವಾಗಬಹುದು. ಇವುಗಳನ್ನು ಹೋಗಲಾಡಿಸಲು ಆರೋಗ್ಯಕರ ಆಹಾರಗಳನ್ನು ಸೇವಿಸುವುದು  ಅವಶ್ಯಕ. ಈ ನಿಟ್ಟಿನಲ್ಲಿ ಕಪ್ಪು ಅಕ್ಕಿ ಅಥವಾ ವೈಲ್ಡ್ ರೈಸ್ ಅನೇಕ ರೀತಿಯ ಆರಿಗ್ಯ ಪ್ರಯೋಜನಗಳನ್ನು ಹೊಂದಿದೆ. 

ಈ ಅಕ್ಕಿ 180 ದಿನಗಳಿಂದ 210 ದಿನಗಳವರೆಗೆ ಇಳುವರಿ ನೀಡುತ್ತದೆ. ಕಾಡಿನಲ್ಲಿ ಬೆಳೆಯುವ ಈ ಅಕ್ಕಿಯು ಕಾಡಾನೆ ಬಲವನ್ನು ನೀಡಬಲ್ಲದು ಎಂದು ಹೇಳುತ್ತಾರೆ. ಈ ​ಅಕ್ಕಿ ಬಲು ವಿರಳ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ಈ ಕಪ್ಪು ಅಕ್ಕಿ ಅಥವಾ ವೈಲ್ಡ್ ರೈಸ್ ಅನ್ನು ಖರೀದಿಸಬಹುದು.

ಇದನ್ನೂ ಓದಿ : White Mango : ಬಿಳಿ ಮಾವಿನ ಹಣ್ಣು ನೋಡಿದ್ದೀರಾ? ಕ್ಯಾನ್ಸರ್ ಸೇರಿ ಈ 5 ಮಾರಕ ಕಾಯಿಲೆಗೆ ಇದೇ ಮದ್ದು

ವೈಲ್ಡ್ ರೈಸ್ ಪ್ರಯೋಜನಗಳು :
ಕಪ್ಪು ಅಕ್ಕಿ ಅಥವಾ ವೈಲ್ಡ್ ರೈಸ್ ತಿನ್ನುವ ಗಂಡಸರ ವೀರ್ಯದ ಗುಣಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಇದರಿಂದ ದಂಪತಿಗಳು ಶೀಘ್ರದಲ್ಲೇ ತಾಯ್ತನವನ್ನು ಪಡೆಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. 

ಕ್ಯಾನ್ಸರ್ ಗುಣಪಡಿಸುತ್ತದೆ : 
ಈ ಅಕ್ಕಿಯನ್ನು ಬೇಯಿಸಿ ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಮಾತ್ರವಲ್ಲದೆ ಕ್ಯಾನ್ಸರ್ ಗುಣಪಡಿಸುವ ಗುಣವೂ ಇದರಲ್ಲಿದೆ. 

ಮಲಬದ್ಧತೆ ಸಮಸ್ಯೆ : 
ಮಲಬದ್ಧತೆ ಸಮಸ್ಯೆ ಇರುವವರಿಗೆ  ಈ ಅಕ್ಕಿ ಸಹಾಯ ಮಾಡುತ್ತದೆ. ಮಲಬದ್ಧತೆ ಇರುವವರು ನಿತ್ಯವೂ ಕಾಡು ಅಕ್ಕಿ ಅಥವಾ ಕಪ್ಪು ಅಕ್ಕಿ ಅಥವಾ ವೈಲ್ಡ್ ರೈಸ್ ತಿಂದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಇದನ್ನೂ ಓದಿ : Blue Berry Seeds Benefits: ನೇರಳೆ ಹಣ್ಣು, ಬೀಜದಲ್ಲಿ ಅಡಗಿದೆ ಆರೋಗ್ಯದಾಯಕ ಗುಣ!

ಮಧುಮೇಹಕ್ಕೆ ಪರಿಹಾರ :  
ಈ ಅನ್ನ ತಿನ್ನುವುದರಿಂದ ಮಧುಮೇಹ ನಮ್ಮ ಹತ್ತಿರವೂ  ಸುಳಿಯುವುದಿಲ್ಲ. ಮಧುಮೇಹಿಗಳು ಈ ಅಕ್ಕಿಯನ್ನು ಬೇಯಿಸಿ ಸೇವಿಸುವುದರಿಂದ ಮಧುಮೇಹವು ಗುಣವಾಗುತ್ತದೆ ಮತ್ತು ಸಕ್ಕರೆಯ ಮಟ್ಟವು  ನಿಯಂತ್ರಣದಲ್ಲಿರುತ್ತದೆ. 

ಹೃದ್ರೋಗವನ್ನು ಗುಣಪಡಿಸುವ ಲಕ್ಷಣ : 
ಈ ಅಕ್ಕಿ ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ಹೃದ್ರೋಗ ಹೊಂದಿರುವವರಿಗೆ ಉತ್ತಮ ಔಷಧವಾಗಿದೆ. ಹೃದಯ ಸಂಬಂಧಿ ಸಮಸ್ಯೆ ಇರುವವರು ಈ ಅಕ್ಕಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ವೈಲ್ಡ್ ರೈಸ್ ರೆಸಿಪಿ :
 ಈ ಅಕ್ಕಿ ಬೇಯಬೇಕಾದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಅಕ್ಕಿಯನ್ನು ಬೇಯಿಸುವ ಮೊದಲು ಆರರಿಂದ 12 ಗಂಟೆಗಳ ಕಾಲ ಚೆನ್ನಾಗಿ ನೆನೆಸಿ, ತೊಳೆದು ಸ್ವಚ್ಛಗೊಳಿಸಬೇಕು. ಇದನ್ನು ರುಬ್ಬಿಕೊಂಡು ಗಂಜಿಯಾಗಿ ಕುಡಿಯಬೇಕೆಂದರೆ ಐದಾರು ಗಂಟೆ ನೆನೆಸಬೇಕು. ಈ ಅಕ್ಕಿಯಿಂದ ಅನ್ನ ಬೇಯಿಸಿ ತಿನ್ನಬೇಕಾದರೆ ಅದನ್ನು 12 ಗಂಟೆಗಳ ಕಾಲ ನೆನೆಸಿಡಬೇಕು. 
 
 ಇದನ್ನೂ ಓದಿ : ಕೂದಲಿನ ಕಾಂತಿಯನ್ನು ಮರಳಿ ಪಡೆಯಲು ಮನೆಯಲ್ಲಿಯೇ ಇರುವ ಈ ಎರಡು ವಸ್ತುಗಳನ್ನು ಬಳಸಿದರೆ ಸಾಕು

ನೆನೆಸಿದ ಅಕ್ಕಿಗೆ ನಾಲ್ಕು ಭಾಗದಷ್ಟು ನೀರು ಸೇರಿಸಿ ಕುಕ್ಕರ್‌ನಲ್ಲಿ ಮೂರು ಸೀಟಿ ಬರುವವರೆಗೆ ಬೇಯಿಸಿ. ಮೂರು ಸೀಟಿ ಬಂದ ನಂತರ ಉರಿಯನ್ನು ಕಡಿಮೆ ಮಾಡಿ ಮತ್ತೆ 7 ರಿಂದ 8 ಸೀಟಿಗಳವರೆಗೆ ಬೇಯಿಸಿ. ಇಷ್ಟು ಬೇಯಿಸಿದಾಗ ಇದರಿಂದ ಆಗುವ ಅಣ್ಣ ಹೂವಿನಂತೆ ಅರಳುತ್ತದೆ. ಈ ಅನ್ನದೊಂದಿಗೆ ಸಾಮಾನ್ಯ ಗ್ರೇವಿ, ಮೊಸರು ಮತ್ತು ಹಸಿರು ಮೆಣಸಿನಕಾಯಿಯೊಂದಿಗೆ ಗಂಜಿಯಾಗಿ ಕುಡಿಯಬಹುದು. ಈ ಅಕ್ಕಿಯಿಂದ ಇಡ್ಲಿ, ದೋಸೆ ಮತ್ತು ಖಿಚಡಿಯನ್ನೂ ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News