ಬೆಂಗಳೂರು : ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಹೆಚ್ಚಾಗಿ ಹದಗೆಡುತ್ತದೆ. ಇನ್ನು ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಎಲ್ಲಿಯವರೆಗೆ ಎಂದರೆ ಹಿಮ್ಮಡಿ ಒಡೆದ ಪರಿಣಾಮ ಕೆಲವರ ಕಾಲಿನಲ್ಲಿ ರಕ್ತ ಬರುವುದೂ ಇದೆ. ಒಡೆದ ಹಿಮ್ಮಡಿಯ ಪರಿಹಾರಕ್ಕೆ ಮಾರುಕಟ್ಟೆಯಲ್ಲಿ ನಾನಾ ರೀತಿಯ ಕ್ರೀಮ್, ಲೋಶನ್ ಗಳು ಬರುತ್ತವೆ. ಆದರೆ ಇದರಿಂದ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಇದರ ಬದಲಿಗೆ ನೈಸರ್ಗಿಕವಾಗಿ ಸಿಗುವ ಈ ಎರಡು ವಸ್ತುಗಳನ್ನು ಬಳಸುವ ಮೂಲಕ ಒಡೆದ ಹಿಮ್ಮಡಿಯ ಸಮಸ್ಯೆಯಿಂದ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬಹುದು.  


COMMERCIAL BREAK
SCROLL TO CONTINUE READING

ದೇಸಿ ತುಪ್ಪ :
ಪ್ರತಿ ಮನೆಯಲ್ಲೂ ಸಿಗುವ ದೇಸಿ ತುಪ್ಪ ಚರ್ಮದ ಆರೋಗ್ಯಕ್ಕೆ ಬಹಳ  ಪ್ರಯೋಜನಕಾರಿ. ದೇಸಿ ತುಪ್ಪವನ್ನು ಹಚ್ಚುವುದರಿಂದ ಪಾದಗಳು ಮತ್ತು  ಹಿಮ್ಮಡಿಯ ಚರ್ಮ ಮೃದುವಾಗುತ್ತದೆ. ತುಪ್ಪದಲ್ಲಿ ಅರಿಶಿನ ಮತ್ತು ಬೇವು ಬೆರೆಸಿ ಹಿಮ್ಮಡಿಗೆ ಹಚ್ಚುವುದರಿಂದ ಹಿಮ್ಮಡಿ ಬಿರುಕು ಬಿಡುವ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. 


ಇದನ್ನೂ ಓದಿ : Benefits Of Dragon Fruit: ಬೊಜ್ಜು ಇಳಿಸುವುದು ಮಾತ್ರವಲ್ಲ, ಮಧುಮೇಹವನ್ನೂ ನಿಯಂತ್ರಣದಲ್ಲಿಡುತ್ತೆ ಈ ಗುಲಾಬಿ ಬಣ್ಣದ ಹಣ್ಣು


ಒಡೆದ ಹಿಮ್ಮಡಿಗಳಿಂದ ಪರಿಹಾರ ಪಡೆಯಲು ದೇಸಿ ತುಪ್ಪವನ್ನು ಬಳಸುವುದು ಹೇಗೆ ? :
1. ದೇಸಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಬೇವಿನ ಎಣ್ಣೆ ಅಥವಾ ಬೇವಿನ ಎಲೆಗಳ ಪೇಸ್ಟ್ ಸೇರಿಸಿ.
2. ಅದರಲ್ಲಿ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
3. ನಂತರ, ಈ ಮಿಶ್ರಣವನ್ನು ಹಾಗೆಯೇ ಬಿಡಿ.
4. ಮರುದಿನ  ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
5. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ


ನೈಸರ್ಗಿಕ ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ತೆಂಗಿನ ಎಣ್ಣೆಯು ಚರ್ಮವನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ. ನಿರತರವಾಗಿ ತೆಂಗಿನೆಣ್ಣೆ ಹಚ್ಚುತ್ತಾ ಬಂದರೆ ಹಿಮ್ಮಡಿ ಒಡೆದ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. 


ಇದನ್ನೂ ಓದಿ : Health Tips: ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ಜನರು ನೆಲ್ಲಿಕಾಯಿ ಸೇವಿಸಬಾರದು


ಒಡೆದ ಹಿಮ್ಮಡಿಗಳಿಂದ ಪರಿಹಾರ ಪಡೆಯಲು, ತೆಂಗಿನ ಎಣ್ಣೆಯನ್ನು ಈ ರೀತಿ ಬಳಸಬಹುದು :
1. 2 ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಚಮಚ ತುಪ್ಪವನ್ನು ಸೇರಿಸಿ.
2. ಎಣ್ಣೆ ಮತ್ತು ತುಪ್ಪದ ಮಿಶ್ರಣವು ಬಿಸಿಯಾದಾಗ, ಅದಕ್ಕೆ 3-4 ಸ್ಪೂನ್ ಪ್ಯಾರಾಫಿನ್ ವ್ಯಾಕ್ಸ್ ಅನ್ನು ಸೇರಿಸಿ.
3. ನಂತರ, ನಿಮ್ಮ ಪಾದಗಳನ್ನು ಪ್ಯೂಮಿಸ್ ಕಲ್ಲಿನಿಂದ ಉಜ್ಜಿ ನೀರಿನಿಂದ ತೊಳೆಯಿರಿ.
4. ಟವೆಲ್ ನಿಂದ ಪಾದಗಳನ್ನು ಒರೆಸಿ ಒಣಗಲು ಬಿಡಿ.
5. ಈಗ ತೆಂಗಿನೆಣ್ಣೆ ಮತ್ತು ತುಪ್ಪದ ಮಿಶ್ರಣವನ್ನು ಪಾದಗಳಿಗೆ ಹಚ್ಚಿಕೊಳ್ಳಿ.
ಈ ಮಿಶ್ರಣವನ್ನು 5-6 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ  ಕಾಲಿನಲ್ಲಿ ಹಾಗೆಯೇ ಬಿಟ್ಟು  ಬೆಳಿಗ್ಗೆ ತೊಳೆಯಿರಿ. 


ಹೀಗೆ ಮಾಡುತ್ತಾ ಬಂದರೆ ಹಿಮ್ಮಡಿ ಒಡೆಯುವ ಸಮಸ್ಯೆಯೊಇನ್ದ ಶಾಶ್ವತ ಪರಿಹಾರ ಸಿಗುವುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.