Benefits Of Dragon Fruit: ಬೊಜ್ಜು ಇಳಿಸುವುದು ಮಾತ್ರವಲ್ಲ, ಮಧುಮೇಹವನ್ನೂ ನಿಯಂತ್ರಣದಲ್ಲಿಡುತ್ತೆ ಈ ಗುಲಾಬಿ ಬಣ್ಣದ ಹಣ್ಣು

Benefits Of Dragon Fruit: ಡ್ರ್ಯಾಗನ್ ಹಣ್ಣು ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಮಧುಮೇಹ ರೋಗಿಗಳು ಇದನ್ನು ತಮ್ಮ ಆಹಾರದ ಭಾಗವಾಗಿ ಮಾಡಬಹುದು. ಪ್ರಾಣಿ ಆಧಾರಿತ ಅಧ್ಯಯನದ ಪ್ರಕಾರ, ಡ್ರ್ಯಾಗನ್ ಹಣ್ಣು ಮಧುಮೇಹ ವಿರೋಧಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.

Written by - Bhavishya Shetty | Last Updated : Dec 6, 2022, 02:00 PM IST
    • ಡ್ರ್ಯಾಗನ್ ಹಣ್ಣು ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ
    • ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲ ಇದೆ
    • ಮಧುಮೇಹ ರೋಗಿಗಳು ಇದನ್ನು ತಮ್ಮ ಆಹಾರದ ಭಾಗವಾಗಿ ಮಾಡಬಹುದು
Benefits Of Dragon Fruit: ಬೊಜ್ಜು ಇಳಿಸುವುದು ಮಾತ್ರವಲ್ಲ, ಮಧುಮೇಹವನ್ನೂ ನಿಯಂತ್ರಣದಲ್ಲಿಡುತ್ತೆ ಈ ಗುಲಾಬಿ ಬಣ್ಣದ ಹಣ್ಣು title=
dragon fruit

Amazing Benefits Of Dragon Fruit: ಮಧುಮೇಹ ಎಂಬುದು ಗುಣಪಡಿಸಲಾಗದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವು ನೈಸರ್ಗಿಕ ವಿಧಾನಗಳು ಮತ್ತು ಮನೆಮದ್ದುಗಳ ಮೂಲಕ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ. ಸರಿಯಾದ ಹಣ್ಣುಗಳು, ತರಕಾರಿಗಳು ಮತ್ತು ಇತರ ಅಗತ್ಯ ಅಂಶಗಳನ್ನು ಆಹಾರದಲ್ಲಿ ಸೇರಿಸದಿದ್ದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಈಗ ನಾವು ಹೇಳಲು ಹೊರಟಿರುವ ಹಣ್ಣನ್ನು ಸೇವಿಸುವ ಮೂಲಕ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರು ತಮ್ಮ ರೋಗದ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಇದನ್ನೂ ಓದಿ:  Home Remedies for Mouth Smell: ಬಾಯಿಯ ದುರ್ವಾಸನೆ ತಡೆಯಲು ಅಡುಗೆಮನೆಯಲ್ಲಿದೆ ಈ ಸುಲಭ ಪರಿಹಾರ

ಡ್ರ್ಯಾಗನ್ ಹಣ್ಣಿನ ಸಂಶೋಧನಾ ವರದಿ:

ಡ್ರ್ಯಾಗನ್ ಹಣ್ಣು ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಮಧುಮೇಹ ರೋಗಿಗಳು ಇದನ್ನು ತಮ್ಮ ಆಹಾರದ ಭಾಗವಾಗಿ ಮಾಡಬಹುದು. ಪ್ರಾಣಿ ಆಧಾರಿತ ಅಧ್ಯಯನದ ಪ್ರಕಾರ, ಡ್ರ್ಯಾಗನ್ ಹಣ್ಣು ಮಧುಮೇಹ ವಿರೋಧಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ. ಕೆಲವು ಸಂಶೋಧನೆಗಳಲ್ಲಿ, ಈ ಪ್ರಯೋಜನಕಾರಿ ಡ್ರಾಗನ್ ಹಣ್ಣು ಪ್ರಿಡಿಯಾಬಿಟಿಕ್ ಮತ್ತು ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಜನರ ಮೇಲೆ ಪರಿಣಾಮಕಾರಿ ಎಂದು ಹೇಳಲಾಗಿದೆ. ಇದರಲ್ಲಿರುವ ಹೆಚ್ಚಿನ ಫೈಬರ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಮಧುಮೇಹವು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲ ಇರುವ ಕಾರಣ ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಅಂದರೆ, ಈ ಹಣ್ಣು ಹೃದಯ ಸಂಬಂಧಿ ಕಾಯಿಲೆಗಳ ಭಯವನ್ನು ಹೋಗಲಾಡಿಸಲು ಸಹ ಪರಿಣಾಮಕಾರಿಯಾಗಿದೆ.

ಡ್ರ್ಯಾಗನ್ ಫ್ರೂಟ್ ವಿಟಮಿನ್ ಸಿ ಅಂಶವು ಸಮೃದ್ಧವಾಗಿದೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಒಣ ತ್ವಚೆ ಮತ್ತು ಮೊಡವೆ ಸಮಸ್ಯೆಯೂ ದೂರವಾಗುತ್ತದೆ.

ಆಹಾರ ತಜ್ಞರು ಮತ್ತು ಪೌಷ್ಟಿಕತಜ್ಞರ ಪ್ರಕಾರ, ಡ್ರ್ಯಾಗನ್ ಹಣ್ಣು ಸ್ವತಃ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಣ್ಣು. ಇದು ನಿಮ್ಮ ದೇಹದ ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಜನರೂ ಸಹ ಈ ಹಣ್ಣನ್ನು ಸೇವನೆ ಮಾಡಿದರೆ ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ:  Health Tips: ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ಈ ಜನರು ನೆಲ್ಲಿಕಾಯಿ ಸೇವಿಸಬಾರದು

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News