ಈ ಮಸಾಲೆಯನ್ನು ಹೀಗೆ ಬಳಸಿದರೆ ಸಂಪೂರ್ಣವಾಗಿ ನಿವಾರಣೆಯಾಗುವುದು ಕೊಲೆಸ್ಟ್ರಾಲ್ ಸಮಸ್ಯೆ
How To Use Ginger For High Cholesterol:ಟ್ರೈಗ್ಲಿಸರೈಡ್‌ಗಳು ಮತ್ತು ಲಿಪೊಪ್ರೋಟೀನ್‌ಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿರುವ ಕಾರಣ ಶುಂಠಿಯ ಬಳಕೆಯು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
How To Use Ginger For High Cholesterol: ದೇಹದಲ್ಲಿ ಅಥವಾ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಅನೇಕ ಕಾಯಿಲೆಗಳ ಅಪಾಯ ಕೂಡಾ ಹೆಚ್ಚುತ್ತದೆ. ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ, ಮಧುಮೇಹ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ ನಂತಹ ಅಪಾಯಕಾರಿ ಕಾಯಿಲೆಗಳಿಗೆ ಇದು ಕಾರಣವಾಗುತ್ತದೆ. ಹಾಗಾಗಿ ನಮ್ಮ ದೇಹದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲವು ಮನೆಮದ್ದುಗಳ ಸಹಾಯದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಟ್ರೈಗ್ಲಿಸರೈಡ್‌ಗಳು ಮತ್ತು ಲಿಪೊಪ್ರೋಟೀನ್‌ಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿರುವ ಕಾರಣ ಶುಂಠಿಯ ಬಳಕೆಯು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಶುಂಠಿಯನ್ನು ಹೀಗೆ ಬಳಸಿ :
1. ಹಸಿ ಶುಂಠಿಯನ್ನು ಸೇವಿಸುವುದು:
ಶುಂಠಿಯನ್ನು ನೇರವಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಾಕಷ್ಟು ಎಣ್ಣೆಯುಕ್ತ ಆಹಾರವನ್ನು ಸೇವಿಸಿದ್ದರೆ ಹಸಿ ಶುಂಠಿಯನ್ನು ಕೂಡಾ ಅಗಿದು ತಿನ್ನಿ. ಇದು ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ.
ಇದನ್ನೂ ಓದಿ : ಆರೋಗ್ಯದ ಗಣಿ ವೀಳ್ಯದೆಲೆ.. ಈ ರೋಗಗಳಿಗೆ ಇದರಲ್ಲಿದೆ ಮದ್ದು!
2. ಶುಂಠಿ ಪುಡಿ:
ಶುಂಠಿ ಪುಡಿಯನ್ನು ತಯಾರಿಸಲು, ಹಸಿ ಶುಂಠಿಯನ್ನು ಕೆಲವು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಮಿಕ್ಸಿಯಲ್ಲಿ ಪುಡಿಮಾಡಿ. ಹೀಗೆ ತಯಾರಿಸಿದ ಪುಡಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನಲ್ಲಿ ಬೆರೆಸಿ ಕುಡಿದರೆ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
3. ಶುಂಠಿ ನೀರು:
ಶುಂಠಿ ನೀರು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಒಂದು ಇಂಚು ಕತ್ತರಿಸಿದ ಶುಂಠಿಯನ್ನು ಒಂದು ಲೋಟ ಬಿಸಿ ನೀರಿನಲ್ಲಿ ಸುಮಾರು 15 ನಿಮಿಷಗಳ ಕಾಲ ಕುದಿಸಿ ಸ್ಟ್ರೈನರ್ ಮೂಲಕ ಫಿಲ್ಟರ್ ಮಾಡಿ. ಈ ನೀರನ್ನು ಕುಡಿದರೆ ಕೊಲೆಸ್ಟ್ರಾಲ್ ಸುಲಭವಾಗಿ ಕರಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಅಂಜೂರವನ್ನು ಹಾಲಿನಲ್ಲಿ ನೆನಸಿ ಬೆಳಗ್ಗೆ ತಿಂದರೆ ದೇಹಕ್ಕೆ ಸಿಗುವುದು ಇಷ್ಟೊಂದು ಪ್ರಯೋಜನ
4. ಶುಂಠಿ ಮತ್ತು ಲೆಮನ್ ಟೀ:
ನಿಂಬೆ ಮತ್ತು ಶುಂಠಿಯಿಂದ ಮಾಡಿದ ಚಹಾವನ್ನು ಒಮ್ಮೆ ಸೇವಿಸಿ. ಅದರಲ್ಲೂ ು ಹೆಚ್ಚು ಎಣ್ಣೆ ಮತ್ತು ಮಸಾಲೆಗಳನ್ನು ಸೇವಿಸಿದ ಸಂದರ್ಭದಲ್ಲಿ ಕೇವಲ ನಿಂಬೆ-ಶುಂಠಿ ಚಹಾ ಸೇವಿಸಬೇಕು. ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಅದರ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ