Face Scrub: ನಿತ್ಯ ಒಂದಿಲ್ಲೊಂದು ಕಾರಣಕ್ಕೆ ರಾತ್ರಿ ವೇಳೆ ಮಾಡಿದ ಅಡಿಗೆ ಉಳಿದು ಬಿಡಬಹುದು. ಸಾಮಾನ್ಯವಾಗಿ ರಾತ್ರಿ ಹೊತ್ತು ಮಾಡಿದ ಅನ್ನ ಹಾಗೆ ಉಳಿದರೆ ಅದನ್ನು ದೋಸೆ, ಇಡ್ಲಿ ಅಥವಾ ಇನ್ನಾವುದಾದರೂ ಆಹಾರ ತಯಾರಿಸಲು ಬಳಸುತ್ತೇವೆ. ಆದರೆ ಚಪಾತಿ ಉಳಿದರೆ ಅದನ್ನು ಬಿಸಿ ಮಾಡಿ ತಿನ್ನಬೇಕಾಗುತ್ತದೆ. ಇಲ್ಲವೇ ಹೊರಗೆ ಹಾಕಬೇಕಾಗುತ್ತದೆ. ಆದರೆ ಹಿಂದಿನ ದಿನ ಉಳಿದ ಚಪಾತಿಯನ್ನು ಸೌಂದರ್ಯ ವರ್ಧಕವಾಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಹೌದು, ಹಿಂದಿನ ದಿನ ಉಳಿದ ಚಪಾತಿ  ನಿಮಗೆ ಹೆಚ್ಚು ಉಪಯುಕ್ತವಾಗಿದ್ದು, ಹಲವು  ಪ್ರಯೋಜನಗಳನ್ನು ನೀಡುತ್ತದೆ. ರಾತ್ರಿ ಉಳಿದ ಚಪಾತಿ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಒಣಗಿದ ಚಪಾತಿಯ ಬಳಕೆಯು ಒಣ ಚರ್ಮ (Dry Skin) ಹೊಂದಿರುವವರಿಗೆ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಡ್ರೈ ಸ್ಕಿನ್ ಹೊಂದಿರುವ ಜನರು ಹಿಂದಿನ ದಿನ ಉಳಿದ ಚಪಾತಿಯನ್ನು ನೈಸರ್ಗಿಕ ಸ್ಕ್ರಬ್ ಆಗಿ ಬಳಸಬಹುದು.


ಇದನ್ನೂ ಓದಿ- Fruits For Healthy Eyes: ಕಣ್ಣಿನ ಆರೋಗ್ಯಕ್ಕಾಗಿ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು


ಉಳಿದ ಚಪಾತಿಯ ಸ್ಕ್ರಬ್ ತಯಾರಿಸಲು ಬೇಕಾಗುವ ಪದಾರ್ಥಗಳು:
1 ಉಳಿದ ಚಪಾತಿ
1 ಟೀಸ್ಪೂನ್ ರೋಸ್ ವಾಟರ್
1 ಟೀಸ್ಪೂನ್ ಓಟ್ಸ್
1 ಟೀಸ್ಪೂನ್ ಕ್ರೀಮ್
ಅರಿಶಿನ ಒಂದು ಪಿಂಚ್


ಇದನ್ನೂ ಓದಿ- Eye Exercises: ಕಣ್ಣಿನ ದೃಷ್ಟಿ ಹೆಚ್ಚಿಸಲು ನಿತ್ಯ ಈ ವ್ಯಾಯಾಮ ಮಾಡಿ, ಕನ್ನಡಕದಿಂದ ಪರಿಹಾರ ಪಡೆಯಿರಿ


ಉಳಿದ ಚಪಾತಿಯನ್ನು ಸ್ಕ್ರಬ್ ಮಾಡುವುದು ಹೇಗೆ?
ಉಳಿದ ಚಪಾತಿಯನ್ನು ಸ್ಕ್ರಬ್ (Chapati Face Scrub) ಮಾಡಲು, ಮೊದಲಿಗೆ ಒಣಗಿದ ಚಪಾತಿಯನ್ನು ಪುಡಿಮಾಡಿ.  ಓಟ್ಸ್ ಅನ್ನು ಚೆನ್ನಾಗಿ ಪುಡಿ ಮಾಡಿ. ಈಗ ಪುಡಿ ಮಾಡಿದ ಚಪಾತಿ, ರೋಸ್ ವಾಟರ್, ಕ್ರೀಮ್, ಓಟ್ಸ್, ಅರಿಶಿನ ಎಲ್ಲವನ್ನೂ ಚೆನ್ನಾಗಿ ಬೆರೆಸಿ. ನಂತರ ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಕೈಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಕುತ್ತಿಗೆ, ಮುಖವನ್ನು ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಮೇಲಿನ ಡೆಡ್ ಸ್ಕಿನ್ ಸಮಸ್ಯೆ ನಿವಾರಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.