Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು

Yogasana For Belly Fat: ಇಂದಿನ ಲೇಖನದಲ್ಲಿ ಕೆಲವು ಯೋಗಾಸನಗಳ ಬಗ್ಗೆ ಹೇಳಲಿದ್ದೇವೆ, ಅದು ನಿಮ್ಮ ಹೊಟ್ಟೆಯ ಕೊಬ್ಬನ್ನು ಖಂಡಿತವಾಗಿ ಕಡಿಮೆ ಮಾಡುತ್ತದೆ.

Written by - Yashaswini V | Last Updated : Jul 24, 2021, 01:50 PM IST
  • ಹೊಟ್ಟೆಯ ಕೊಬ್ಬನ್ನು ಕರಗಿಸಲು ನಿಯಮಿತ ವ್ಯಾಯಾಮದ ಜೊತೆಗೆ, ಆರೋಗ್ಯಕರ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯ
  • ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಯೋಗವು ತುಂಬಾ ಪ್ರಯೋಜನಕಾರಿ
  • ಸರ್ವ ರೋಗಗಳಿಗೂ ಮದ್ದು ಎಂದೇ ಪರಿಗಣಿಸಲ್ಪಟ್ಟಿರುವ ಸರ್ವಾಂಗಾಸನ ಶರೀರದ ಎಲ್ಲಾ ಅಂಗಗಳಿಗೂ ವ್ಯಾಯಾಮವನ್ನು ಒದಗಿಸುತ್ತದೆ
Yogasana For Belly Fat: ನಿತ್ಯ  ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು title=
Yogasana For Belly Fat

Yogasana For Belly Fat: ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ. ಇದಕ್ಕಾಗಿ, ನಿಯಮಿತ ವ್ಯಾಯಾಮದ ಜೊತೆಗೆ, ಆರೋಗ್ಯಕರ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೊಟ್ಟೆಯಲ್ಲಿ ಶೇಖರಗೊಂಡಿರುವ ಕೊಬ್ಬನ್ನು ಕಡಿಮೆ ಮಾಡಲು ಯೋಗವು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇಂದು ನಾವು ಅಂತಹ ಕೆಲವು ಯೋಗಾಸನಗಳ ಬಗ್ಗೆ ತಿಳಿಸಲಿದ್ದೇವೆ, ಅದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ಖಂಡಿತವಾಗಿಯೂ ಸಹಕಾರಿಯಾಗಲಿದೆ.

ಯಾವುದೇ ಯೋಗಾಸನವನ್ನು ಮಾಡಲು ಮೊದಲಿಗೆ ಸಮತಟ್ಟಾದ ಜಾಗದಲ್ಲಿ ಚಾಪೆ, ಜಮಖಾನ ಅಥವಾ ಯೋಗಾ ಮ್ಯಾಟ್ ಹಾಸಿ. ಬರಿ ನೆಲದ ಮೇಲೆ ಮಲಗಿ ಯೋಗಾಸನ ಮಾಡಬಾರದು ಎಂದು ನೆನಪಿಡಿ.

ಸರ್ವಾಂಗಾಸನ (Sarvangasana)- ಸರ್ವ ರೋಗಗಳಿಗೂ ಮದ್ದು ಎಂದೇ ಪರಿಗಣಿಸಲ್ಪಟ್ಟಿರುವ ಸರ್ವಾಂಗಾಸನ  (Sarvangasana) ಶರೀರದ ಎಲ್ಲಾ ಅಂಗಗಳಿಗೂ ವ್ಯಾಯಾಮವನ್ನು ಒದಗಿಸುತ್ತದೆ. 

ಇದನ್ನೂ ಓದಿ- Disadvantages Of Maida: ನೀವು ಬಳಸುವ ಮೈದಾ ಹಿಟ್ಟು ನಿಮ್ಮನ್ನು ಗಂಭೀರ ಕಾಯಿಲೆಗೆ ಗುರಿಯಾಗಿಸಬಹುದು

ಸರ್ವಾಂಗಾಸನವನ್ನು ಮಾಡುವ ವಿಧಾನ: ಮೊದಲಿಗೆ ಬೆನ್ನಿನ ಮೇಲೆ ಮಲಗಿ ಕಾಲುಗಳನ್ನು ನೀಳವಾಗಿ ಚಾಚಿ. ನಿಮ್ಮ ಕೈಗಳು ತೊಡೆಯ ಪಕ್ಕದಲ್ಲಿ ನೇರವಾಗಿರಲಿ. ಈ ಸಂದರ್ಭದಲ್ಲಿ ಹಸ್ತ ಮೇಲ್ಮುಖವಾಗಿರಬೇಕು ಎಂದು ನೆನಪಿಡಿ. ಬಳಿಕ ನಿಧಾನವಾಗಿ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ. ಮೊದಲಿಗೆ ನೆಲದಿಂದ 30 ಡಿಗ್ರಿ ಕೋನದಲ್ಲಿ 10 ಸೆಕೆಂಡ್, ನಂತರ 60 ಡಿಗ್ರಿ ಕೋನದಲ್ಲಿ 10 ಸೆಕೆಂಡುಗಳು, ಬಳಿಕ 90 ಡಿಗ್ರಿ ಕೋನದಲ್ಲಿ 10 ಸೆಕೆಂಡುಗಳ ಕಾಲ ನೇರವಾಗಿ ನಿಲ್ಲಿಸಿ. ಕಾಲುಗಳನ್ನು 90 ಡಿಗ್ರಿ ಕೋನದಲ್ಲಿ ನಿಲ್ಲಿಸಿದ ಬಳಿಕ ಸೊಂಟದ ಭಾಗವನ್ನು ಮೇಲೆತ್ತುತ್ತಾ ಕಾಲುಗಳನ್ನು ನೇರವಾಗಿಸಿ. ಅಂತಿಮ ಸ್ಥಿತಿಯಲ್ಲಿ ದೇಹವನ್ನು ಅಲುಗಾಡಿಸದೆ ಒಂದರಿಂದ ಐದು ನಿಮಿಷಗಳ ಕಾಲ ಸ್ಥಿರವಾಗಿ ಅದೇ ಭಂಗಿಯಲ್ಲಿ ಇರಲು ಪ್ರಯತ್ನಿಸಿ. ಈ ಸಂದರ್ಭದಲ್ಲಿ ನಿಮ್ಮ ಉಸಿರಾಟ ಸಾಮಾನ್ಯವಾಗಿರಲಿ.

ಸರ್ವಂಗಾಸನದ ಪ್ರಯೋಜನ: ಈ ಆಸನವನ್ನು ಮಾಡುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ ಜೀರ್ಣಕಾರಿ, ರಕ್ತ ಪರಿಚಲನೆ, ದುಗ್ಧರಸ, ಅಂತಃಸ್ರಾವಕ ಮತ್ತು ನರಮಂಡಲಗಳನ್ನು ಸಮತೋಲನಗೊಳಿಸುತ್ತದೆ. ಜೊತೆಗೆ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಧನುರಾಸನ (Dhanurasana)- ಧನು ಎಂದರೆ ಬಿಲ್ಲು. ಈ ಆಸನವನ್ನು ಮಾಡಲು ಮೊದಲು ನಿಮ್ಮ ಹೊಟ್ಟೆಯ ಮೇಲೆ ಮಲಗಿ. ಎಂದರೆ ನೆಲದ ಮೇಲೆ ಕೆಳಮುಖವಾಗಿ ಮಲಗಿ. ನಂತರ ನಿಮ್ಮ ಮೊಣಕಾಲುಗಳನ್ನು ಬಾಗಿಸಿ ನಿಮ್ಮ ಪಾದಗಳನ್ನು ಕೈಗಳಿಂದ ಹಿಡಿದುಕೊಳ್ಳಿ. ಬಳಿಕ ನಿಧಾನವಾಗಿ ಶರೀರದ ಮುಂಭಾಗವನ್ನು ಮೇಲೆತ್ತಿ. ಈ ಆಸನದಲ್ಲಿ ಶರೀರವನ್ನು ಧನುಸ್ಸಿನ ಆಕಾರದಲ್ಲಿರುವಂತೆ ಕಾಣುತ್ತದೆ.

ಇದನ್ನೂ ಓದಿ-  How To Remove Unwanted Facial Hairs: ಮುಖದ ಮೇಲಿನ ಅನಗತ್ಯ ಕೂದಲಿನ ಚಿಂತೆ ಬಿಡಿ, ಇದನ್ನೊಮ್ಮೆ ಟ್ರೈ ಮಾಡಿ

ಧನುರಾಸನದ ಪ್ರಯೋಜನ: ಧನುರಾಸನವನ್ನು ಮಾಡುವುದರಿಂದ ಎದೆ, ಶ್ವಾಸಕೋಶ, ಹೊಟ್ಟೆ ಮತ್ತು ಹೃದಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುವುದಲ್ಲದೆ, ಮುಟ್ಟಿನ ಸಮಸ್ಯೆಗಳನ್ನು (Periods Problem) ನಿವಾರಿಸುತ್ತದೆ. ಧನುರಾಸನವು  ಬೆನ್ನು, ಕಾಲು, ತೊಡೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಜೊತೆಗೆ ಉದರ ಸಂಬಂಧಿತ ಹಲವು ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.

ತ್ರಿಕೋನಾಸನ (Trikonasana)- ತ್ರಿಕೋನ ಎಂದರೆ ತ್ರಿಭುಜದಂತಹ ಆಸನ. ತ್ರಿಕೋನಾಸನವನ್ನು ಮಾಡಲು, ಎರಡೂ ಕಾಲುಗಳ ನಡುವೆ 2 ರಿಂದ 3 ಅಡಿ ಅಂತರವನ್ನು ಬಿಟ್ಟು ನೇರವಾಗಿ ನಿಂತುಕೊಳ್ಳಿ. ಬಲಗಾಲನ್ನು ಬಲಕ್ಕೆ ಬಾಗಿಸಿ. ಬಲ ಪಾದ ಬಲಕ್ಕೆ ಮತ್ತು ಎಡಪಾದ ಒಳಕ್ಕೆ ತಿರುಗಿಸಿ. ನಂತರ ದೀರ್ಘ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ಭುಜದ ಅಂತರಕ್ಕೆ ಮೇಲೆತ್ತಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ನಿಮ್ಮ ಸೊಂಟದ ಭಾಗದಿಂದ ಬಲಗಡೆ ಭಾಗಿ ಬಲಹಸ್ತದಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಈ ರೀತಿಯಾಗಿ ಎರಡೂ ಬದಿಯಲ್ಲೂ ಮಾಡಲು ಪ್ರಯತ್ನಿಸಿ.

ತ್ರಿಕೋನಾಸನದ ಪ್ರಯೋಜನಗಳು: ತ್ರಿಕೋನಾಸನವನ್ನು ಮಾದುವುದರಿಂದ ದೇಹದ ವಿವಿಧ ಭಾಗಗಳಲ್ಲಿ ಶೇಖರಣೆಗೊಂಡಿರುವ ಕೊಬ್ಬನ್ನು ಕರಗಿಸಬಹುದು. ಇದು ಕಾಲುಗಳು, ತೊಡೆಗಳ ಮಾಂಸಕಂಡಗಳನ್ನು ಬಲಪಡಿಸುವುದಲ್ಲದೇ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ. ಈ ಆಸನವು ಬೆನ್ನು, ಕುತ್ತಿಗೆ ಮತ್ತು ಇಡೀ ದೇಹದಲ್ಲಿನ ನೋವು ಮತ್ತು ಸೆಳೆತಗಳನ್ನು ನಿವಾರಿಸುತ್ತದೆ. ಈ ಯೋಗಾಸನದ ಒಂದು ದೊಡ್ಡ ಅನುಕೂಲವೆಂದರೆ ಅದನ್ನು ಯಾವುದೇ ಸಮಯದಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು.

(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News