Premature White Hair Problem Solution : ದಪ್ಪ ನೀಳ ಕೂದಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಹೀಗೆ ಕಪ್ಪನೆ ನಳನಳಿಸುವ ಕೂದಲು ಹೊಂದುವುದು ಪ್ರತಿಯೊಬ್ಬ ಮಹಿಳೆಯ ಕನಸು.   ಆದರೆ ಇತ್ತೀಚಿನ ದಿನಗಳಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವಕ, ಯುವತಿಯರು ಕೂಡಾ ಬಿಳಿ ಕೂದಲಿನ ಸಮಸ್ಯೆ ಎದುರಿಸುತ್ತಾರೆ. ಈ ಹಿಂದೆ ಮಧ್ಯವಯಸ್ಕರು ಮತ್ತು ಹಿರಿಯರಲ್ಲಿ ಮಾತ್ರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ, ಇಂದು ಯುವಕರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡುವುದಂತೂ ಸುಳ್ಳಲ್ಲ. ಆದರೆ ಇದಕ್ಕೆ ಮುಜುಗರ ಪಡಬೇಕಿಲ್ಲ.  ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಬಿಳಿ ಕೂದಲು ಹುಟ್ಟಿಕೊಳ್ಳಲು ನಾವೇ ಜವಾಬ್ದಾರರು : 
ಇತ್ತೀಚಿನ ದಿನಗಳಲ್ಲಿ ನಾವು ಅನುಸರಿಸುತ್ತಿರುವ ಜೀವನಶೈಲಿಯು ಸಾಕಷ್ಟು ಅನಾರೋಗ್ಯಕರವಾಗಿದೆ. ನಾವು ಸೇರಿಸುವ ಅನಾರೋಗ್ಯಕರ ಆಹಾರ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೂದಲಿನ ಆರೋಗ್ಯಕ್ಕಾಗಿ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸುವುದು  ಅಗತ್ಯ. 


ಇದನ್ನೂ ಓದಿ : ಬೆಳಿಗ್ಗೆ ಟೀ ಕಾಫಿಯ ಬದಲು ಈ ಎಲೆಗಳನ್ನು ತಿನ್ನಿ.. ಯಾವುದೇ ರೋಗ ಬರುವುದಿಲ್ಲ


ಬಿಳಿ ಕೂದಲಿಗೆ ಶಾಶ್ವತ ಪರಿಹಾರ : 
1. ಮೊಸರು ಮತ್ತು ಟೊಮೆಟೊ :

ಬಿಳಿ ಕೂದಲು ಮತ್ತೆ ಕಪ್ಪಾಗಲು, ಮೊಸರು ಮತ್ತು ಟೊಮೇಟೊ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ, ಮೊದಲು ಈ ಎರಡು ವಸ್ತುಗಳನ್ನು ಒಂದು ಬೌಲ್‌ಗೆ ಹಾಕಿ ಮಿಶ್ರಣ ಮಾಡಿ. ಈಗ ಈ ಪೇಸ್ಟ್‌ಗೆ ನೀಲಗಿರಿ ಎಣ್ಣೆಯನ್ನು ಸೇರಿಸಿ. ಇಷ್ಟಾದ ಮೇಲೆ ನಿಮ್ಮ ಕೂದಲಿಗೆ ಮಸಾಜ್ ಮಾಡಿ. ವಾರದಲ್ಲಿ 3 ದಿನ ಈ ವಿಧಾನವನ್ನು ಅನುಸರಿಸಿದರೆ ಕೂದಲಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ.


2. ಈರುಳ್ಳಿ ರಸ: 
ತರಕಾರಿ ಸೇರಿದಂತೆ ಹಲವು ರುಚಿಕರವಾದ ರೆಸಿಪಿಗಳನ್ನು ತಯಾರಿಸಲು ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ, ಇದರ ಸಹಾಯದಿಂದ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು  ಎನ್ನುವುದು ಕೂಡಾ ಸತ್ಯ. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸರ್ ಗ್ರೈಂಡರ್ ನಲ್ಲಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನಿಂದ ಈರುಳ್ಳಿ ರಸವನ್ನಿ ತೆಗೆದು ಕೂದಲಿನ ಬೇರುಗಳಿಗೆ ಹಚ್ಚಿ. ಇದರಿಂದ ಬಿಳಿ ಕೂದಲು ಕೆಲವೇ ದಿನಗಳಲ್ಲಿ ಕಪ್ಪಾಗುತ್ತದೆ.


ಇದನ್ನೂ ಓದಿ : ಈ 3 ಅದ್ಭುತ ನೈಸರ್ಗಿಕ ಆಹಾರಗಳನ್ನು ಸೇವಿಸಿ... ಥೈರಾಯ್ಡ್ ಗೆ ಗುಡ್ ಬೈ ಹೇಳಿ!


3. ಕರಿಬೇವಿನ ಎಲೆಗಳು:
ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಎಲ್ಲಾ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಈ ಎಲೆಯು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.  ಏಕೆಂದರೆ ಇದು ನೆತ್ತಿಗೆ ಪೋಷಣೆಯನ್ನು ನೀಡುತ್ತದೆ. ಕರಿಬೇವಿನ ಸೊಪ್ಪನ್ನು ಚೆನ್ನಾಗಿ ರುಬ್ಬಿ ತೆಂಗಿನೆಣ್ಣೆಯೊಂದಿಗೆ ಮಿಶ್ರಣ ಮಾಡಿ. ಈಗ ಇದನ್ನು ಕೂದಲಿಗೆ ಹಚ್ಚಿ, ವಾರಕ್ಕೊಮ್ಮೆ ಇದನ್ನು ಬಳಸಿದರೆ ಸಾಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ