Weight lose tips with turmeric : ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆಯಿಂದ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ.  ಒಮ್ಮೆ ತೂಕ ಹೆಚ್ಚಾದ ನಂತರ ಅದನ್ನು ಕಳೆದುಕೊಳ್ಳುವುದು ಅಂದುಕೊಳ್ಳುವಷ್ಟು ಸುಲಭವಲ್ಲ. ಜನರು ತೂಕ ಇಳಿಸಿಕೊಳ್ಳಲು ವಿವಿಧ ಕಸರತ್ತು ಮಾಡುತ್ತಾರೆ. ಕೆಲವರು ಕಟ್ಟುನಿಟ್ಟಾದ ಆಹಾರ ಕ್ರಮ ಅನುಸರಿಸಿದರೆ ಇನ್ನು ಕೆಲರು ದೇಹ ದಂಡಿಸಿಕೊಳ್ಳುತ್ತಾರೆ. ಇದೆಲ್ಲದರ ಹೊರತಾಗಿ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕವೂ ತೂಕವನ್ನು ಕಳೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಅರಿಶಿನ ಬಳಸಿ ತೂಕ ನಷ್ಟ ಮಾಡಿಕೊಳ್ಳಬಹುದು :
ನಮ್ಮ ಹೆಚ್ಚಿನ ಅಡುಗೆಗಳಲ್ಲಿ ಅರಿಶಿನವನ್ನು ಬಳಸುತ್ತೇವೆ.ಅರಿಶಿನವು ನಮ್ಮ ಆಹಾರಕ್ಕೆ ಬಣ್ಣವನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಇದಲ್ಲದೇ ತೂಕ ಇಳಿಸುವಲ್ಲಿ ಅರಿಶಿನದ ಪಾತ್ರ ಮಹತ್ವದ್ದಾಗಿದೆ. 


ಅರಿಶಿನ ಮತ್ತು ಶುಂಠಿ :
ತೂಕವನ್ನು ಕಳೆದುಕೊಳ್ಳಲು ಶುಂಠಿಯ ಜೊತೆಗೆ ಅರಿಶಿನವನ್ನು ಸೇವಿಸಬಹುದು. ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬು ಕರಗುತ್ತದೆ. ಒಂದು ಲೋಟ ನೀರಿನಲ್ಲಿ ಒಂದು ಇಂಚು ಶುಂಠಿ ಮತ್ತು ಎರಡು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಫಿಲ್ಟರ್ ಮಾಡಿ ಸೇವಿಸಬಹುದು.


ಇದನ್ನೂ ಓದಿ :ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!


ಅರಿಶಿನ ನೀರು :
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಅರಿಶಿನ ನೀರನ್ನು ಕುಡಿಯುವುದು ಉತ್ತಮ ಹವ್ಯಾಸ. ಇದರಿಂದ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಇದಕ್ಕಾಗಿ ಅರಿಶಿನ ತುಂಡುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಕುದಿಯಲು ಇಟ್ಟ ನೀರು ಅರ್ಧದಷ್ಟಾಗುವವರೆಗೆ ಕುದಿಸಿ, ನಂತರ ಈ ನೀರಿಗೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆ ರಸ ಬೆರೆಸಿ ಸೇವಿಸಬೇಕು.


ಅರಿಶಿನ ಹಾಲು :
ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಅರಿಶಿನ ಹಾಲನ್ನು ಕುಡಿಯಬಹುದು.ಸ್ವಲ್ಪ ಅರಶಿನವನ್ನು ಹುರಿದು ಅದಕ್ಕೆ ಹಾಲನ್ನು ಸೇರಿಸಿ. ಹಾಲು ಬಿಸಿಯಾದ ಮೇಲೆ ಗ್ಯಾಸ್ ನಿಂದ ಇಳಿಸಿ.ಪ್ರತಿ ರಾತ್ರಿ ಮಲಗುವ ಮುನ್ನ ಈ ರೀತಿ ಅರಶಿನ ಹಾಲನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ.


ಅರಿಶಿನ ಮತ್ತು ಜೇನುತುಪ್ಪ :
ಅರಿಶಿನ ಮತ್ತು ಜೇನುತುಪ್ಪವನ್ನು ಜೊತೆಯಾಗಿ ಸೇವಿಸುವುದರಿಂದ ತೂಕ ನಷ್ಟಕ್ಕೆ ಸಹಾಯವಾಗುತ್ತದೆ. ಇದಕ್ಕಾಗಿ ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಿ ಸೇವಿಸಿದರೆ ಸಾಕು.  


ಇದನ್ನೂ ಓದಿ : World Liver Day 2024: ಯಕೃತ್ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು


ಅರಿಶಿನ ಮತ್ತು  ಚಕ್ಕೆ : 
ಚಕ್ಕೆ ಮತ್ತು ಅರಿಶಿನ ಮಿಶ್ರಣವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.ಈ ಎರಡೂ ವಸ್ತುಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿ ಮಾಡಿ.ಇದಕ್ಕೆ ಚಕ್ಕೆ ಮತ್ತು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಫಿಲ್ಟರ್ ಮಾಡಬೇಕು.  ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.