ಸ್ನಾನ ಮಾಡುವ ಹಂಡೆ, ಕುಡಿಯುವ ನೀರಿನ ಪಾತ್ರೆ, ಪೂಜಾದಿ ಕೈಂಕರ್ಯಕ್ಕೆ ಬಳಸುವ ತಟ್ಟೆ, ಚೊಂಬು ಇತ್ಯಾದಿಗಳಿಗಾಗಿ ನಮ್ಮ ಪೂರ್ವಜರು ತಾಮ್ರದ ಮೊರೆಹೋಗುತ್ತಿದ್ದರು. ತಾಮ್ರದ ಪಾತ್ರೆಯಲ್ಲಿಟ್ಟ ಆಹಾರ ಬಳಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ಕಾರಣಕ್ಕಾಗಿ ತಾಮ್ರದ ಪಾತ್ರೆಗಳಿಗೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. 


COMMERCIAL BREAK
SCROLL TO CONTINUE READING

ಆದರೀಗ ನಗರೀಕರಣ, ಜಾಗತೀಕರಣದಿಂದಾಗಿ ಜನರ ಜೀವನ ಶೈಲಿ ಬದಲಾಗಿದ್ದು ತಾಮ್ರದ ಪಾತ್ರೆಗಳನ್ನು ಬಳಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದ್ದರೂ ತಾಮ್ರದ ಪಾತ್ರೆಗಳ ಬಳಕೆಯಿಂದಾಗುವ ಆರೋಗ್ಯ ವರ್ಧಕ ಗುಣಗಳು ಬಹಳಷ್ಟಿವೆ. ಅಂತಹ ಗುಣಗಳ ಬಗ್ಗೆ ನೀವಿಲ್ಲಿ ತಿಳಿಯಬಹುದು. 


1. ಊಟದ ಬಳಿಕ ಅಥವಾ ಇತರೆ ಸಂದರ್ಭಗಳಲ್ಲಿ ತಾಮ್ರದ ಚೊಂಬು ಅಥವಾ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ನೀರಿನಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. 


2. ತಾಮ್ರ ಲೋಟದಲ್ಲಿ ನೀರು ಸೇವಿಸುವುದರಿಂದ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮವಾಗುತ್ತದೆ. 


3. ಅತೀ ಬೊಜ್ಜಿನಿಂದ ಬಳಲುತ್ತಿರುವವರು ನಿತ್ಯ ಡಯಟ್ ಹಾಗೂ ವ್ಯಾಯಾಮದೊಂದಿಗೆ ನಿತ್ಯ  ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.


4. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


5. ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತೊಡೆದು ಹಾಕುವ ಶಕ್ತಿ ತಾಮ್ರಕ್ಕೆ ಇದ್ದು, ನಿರ್ಜೀವ ಜೀವಕೋಶಗಳನ್ನು ತೊಡೆದು ಹಾಕಿ ಹೊಸ ಜೀವಕೋಶಗಳ ಬೆಳವಣಿಗೆಗೆ 


ಸಹಕಾರಿಯಾಗುತ್ತದೆ.


6.ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ಹಾಗಾಗಿ ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರಿ ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ. 


7. ದೇಹದಲ್ಲಿ ರಕ್ತ ಹೀನತೆ ಸಮಸ್ಯೆಯನ್ನು ದೂರಮಾಡುತ್ತದೆ.