ತೂಕ ಇಳಿಸುವ ತರಕಾರಿಗಳು: ತೂಕ ಹೆಚ್ಚಳ ಇಂದು ಬಹುತೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಅದರಲ್ಲೂ ಈ ಕರೋನಾವೈರಸ್ ಸಾಂಕ್ರಾಮಿಕದ ನಂತರ ಲಾಕ್‌ಡೌನ್ ಮತ್ತು ವರ್ಕ್ ಫ್ರಮ್ ಹೋಂ ಸಂಸ್ಕೃತಿಯಿಂದ ಈ ಸಮಸ್ಯೆ ಮೊದಲಿಗಿಂತ ಹೆಚ್ಚಾಗಿದೆ. ತೂಕ ಹೆಚ್ಚಳವ್ ಸೌಂದರ್ಯವನ್ನು ಮರೆಮಾಡುವುದು ಮಾತ್ರವಲ್ಲ ಹಲವು ರೋಗಗಳಿಗೂ ಕಾರಣವಾಗುತ್ತದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳುವುದು ತುಂಬಾ ಅಗತ್ಯ.  ತೂಕ ಕಡಿಮೆ ಮಾಡಲು ಜನರು ಡಯಟ್ ಮಾಡುತ್ತಾರೆ. ಇದರೊಂದಿಗೆ ವಾಕಿಂಗ್, ಜಾಗಿಂಗ್, ಯೋಗ, ವ್ಯಾಯಾಮ, ಜಿಮ್ ನಂತಹ ಹಲವು ರೀತಿಯ ಪ್ರಯತ್ನ ಮಾಡುತ್ತಾರೆ. ಆದರೆ, ಹೆಚ್ಚಿನವರು  ನಮಗೆ ಜಿಮ್‌ಗೆ ಹೋಗಲು ಸಮಯವೇ ಇಲ್ಲ ಎಂದು ಕೊರಗುತ್ತಾರೆ. ಆದಾಗ್ಯೂ, ನಿಮ್ಮ ಡಯಟ್ನಲ್ಲಿ ಒಂದು ತರಕಾರಿಯನ್ನು ಸೇರಿಸುವ ಮೂಲಕ ನೀವು ಜಿಮ್‌ಗೆ ಹೋಗದಿದ್ದರೂ ಫ್ಲಾಟ್ ಟಮ್ಮಿ ನಿಮ್ಮದಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ನೀವು ಫ್ಲಾಟ್ ಟಮ್ಮಿ ಪಡೆಯಲು ಬಯಸಿದರೆ ಈ ತರಕಾರಿಯನ್ನು ತಪ್ಪದೇ ಸೇವಿಸಿ:
ಉತ್ತಮವಾದ ಫಿಟ್ ದೇಹವನ್ನು ಪಡೆಯುವುದು ಮತ್ತು ಚಪ್ಪಟೆಯಾದ ಅಂದರೆ ಫ್ಲಾಟ್ ಹೊಟ್ಟೆಯನ್ನು ಪಡೆಯುವುದು ಯಾರಿಗೂ ಸುಲಭವಲ್ಲ, ಇದಕ್ಕೆ ನಮ್ಮ ದೈನಂದಿನ ಆಹಾರದ ಅಭ್ಯಾಸಗಳು ಬಹಳ ಮುಖ್ಯ, ಆರೋಗ್ಯ ತಜ್ಞರ ಪ್ರಕಾರ, ನೀವು ಪ್ರತಿದಿನ ಈ ಒಂದು ತರಕಾರಿಯನ್ನು ಸೇವಿಸಿದರೆ, ತೂಕವನ್ನು ಕಳೆದುಕೊಳ್ಳುವುದು ಸುಲಭ.  ಅದೇ ಸೌತೆಕಾಯಿ.


ಸೌತೆಕಾಯಿ ಅನ್ನು ಸಾಮಾನ್ಯವಾಗಿ ಸಲಾಡ್ ಆಗಿ ಸೇವಿಸಲಾಗುತ್ತದೆ, ಇದು ನೀರಿನ ಅಂಶದಿಂದ ಸಮೃದ್ಧವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಇದನ್ನೂ ಓದಿ- Diabetets Food: ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಸಹಕಾರಿ ಮೆಂತ್ಯ ಬೀಜಗಳು!


ಸೌತೆಕಾಯಿಯಲ್ಲಿ ನಾರಿನಂಶವು ಅಧಿಕವಾಗಿರುತ್ತದೆ, ಜೊತೆಗೆ ಇದರಲ್ಲಿರುವ  ಸಾಕಷ್ಟು ನೀರಿನ ಅಂಶದಿಂದಾಗಿ, ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಹಾಗಾಗಿ ನಿತ್ಯ ನಮ್ಮ ಆಹಾರದಲ್ಲಿ ಸೌತೆ ಕಾಯಿಯನ್ನು ಸೇವಿಸುವುದರಿಂದ ಉದರ ಸಂಬಂಧಿತ ಸಮಸ್ಯೆಗಳಿಂದ ದೂರ ಉಳಿಯಬಹುದು. ಅಷ್ಟೇ ಅಲ್ಲ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಈ ಎರಡೂ ಕೂಡ ಸೌತೆಕಾಯಿಯಲ್ಲಿ ಕಂಡುಬರುತ್ತವೆ, ಇದು ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ.


ಸೌತೆಕಾಯಿಯನ್ನು ತಿನ್ನುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ ಮತ್ತು ದೀರ್ಘಕಾಲ ಹಸಿವಾಗುವುದಿಲ್ಲ. ಕಡಿಮೆ ತಿನ್ನುವುದು ನಮ್ಮ ತೂಕದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸುಲಭವಾಗುತ್ತದೆ.


ಇದನ್ನೂ ಓದಿ- High Cholesterol: ನಿಮ್ಮ ಮುಖದಲ್ಲೂ ಇಂತಹ ಗುರುತುಗಳಿವೆಯೇ? ಇದು ಹೈ ಕೊಲೆಸ್ಟ್ರಾಲ್ ಲಕ್ಷಣವಿರಬಹುದು!


ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಸೌತೆಕಾಯಿ ಯ ಸಲಾಡ್ ಮಾಡಿ. ನೀವು ಅವುಗಳ ರುಚಿಯನ್ನು ಹೆಚ್ಚಿಸಲು ಬಯಸಿದರೆ, ಅದರಲ್ಲಿ ಸೌತೆಕಾಯಿ, ಕ್ಯಾರೆಟ್, ಈರುಳ್ಳಿ, ಮೂಲಂಗಿ ಮತ್ತು ಟೊಮೆಟೊದೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದರಿಂದ ಹೊಟ್ಟೆಯ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತದೆ. ಜೊತೆಗೆ ನಿತ್ಯ ಸೌತೆಕಾಯಿ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.