ಮೆಟ್ಟಿಲು ಹತ್ತುವಾಗ ಮತ್ತು ಇಳಿಯುವಾಗ ಏರುಸಿರು ಬರುತ್ತಿದ್ದರೆ ಈ ರೋಗದ ಅಪಾಯವಿರಬಹುದು ..!

ಕೆಲವರಿಗೆ 3ರಿಂದ 4 ಮೆಟ್ಟಿಲು ಹತ್ತಿದ ಕೂಡಲೇ ಉಸಿರುಗಟ್ಟುತ್ತದೆ. ಇದು ಸಾಮಾನ್ಯವಲ್ಲ. ಈ ರೀತಿಯಾದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು . 

Written by - Ranjitha R K | Last Updated : Jun 15, 2022, 08:11 AM IST
  • ಮೆಟ್ಟಿಲು ಹತ್ತುವಾಗ ಏರುಸಿರು ಬರುತ್ತಿದ್ದಯೇ ?
  • ಇದಕ್ಕೆ ಕಾರಣಗಳೇನು ಗೊತ್ತಾ?
  • ಈ ಲಕ್ಷಣವನ್ನು ಲಘುವಾಗಿ ಪರಿಗಣಿಸಬೇಡಿ
ಮೆಟ್ಟಿಲು ಹತ್ತುವಾಗ ಮತ್ತು ಇಳಿಯುವಾಗ ಏರುಸಿರು ಬರುತ್ತಿದ್ದರೆ ಈ ರೋಗದ ಅಪಾಯವಿರಬಹುದು ..! title=
Health Care Tips (file photo)

ಬೆಂಗಳೂರು : ಮೂರು ನಾಲ್ಕು ಮಹಡಿಗಳ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಎದುರಾಗುವುದು ಸಹಜ. ಆದರೆ ಕೆಲವರಿಗೆ 3ರಿಂದ 4 ಮೆಟ್ಟಿಲು ಹತ್ತಿದ ಕೂಡಲೇ ಉಸಿರುಗಟ್ಟುತ್ತದೆ. ಇದು ಸಾಮಾನ್ಯವಲ್ಲ. ಈ  ತೊಂದರೆ ಎದುರಿಸುತ್ತಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದರ ಹಿಂದೆ ಹಲವು ಕಾರಣಗಳಿರಬಹುದು. 

ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆಯ ಲಕ್ಷಣಗಳು :
ಎದೆ ನೋವು, ಜ್ವರ ಅಥವಾ ಬೆವರುವುದು, ಕೆಮ್ಮು,  ಕೈ ಕಾಲು ವಿಪರೀತ ನೋವು, ಪಾದಗಳ ಊತ, ತುರಿಕೆ ಅಥವಾ ದದ್ದು, ತಲೆ ಸುತ್ತುವುದು. 

ಇದನ್ನೂ ಓದಿ : ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಪರಿಣಾಮಕಾರಿಯಾಗಿವೆ ಈ ನಾಲ್ಕು ಡ್ರೈ ಫ್ರೂಟ್ಸ್ ..!

ಯಾವ ಕಾರಣಗಳಿಂದಾಗಿ, ಮೆಟ್ಟಿಲುಗಳನ್ನು ಹತ್ತುವಾಗ ಏರುಸಿರು  ಬರುತ್ತದೆ : 

ಅಲರ್ಜಿ ಅಥವಾ ಅಸ್ತಮಾ :
ದೇಹದಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕಲು ಮತ್ತು ಆಮ್ಲಜನಕವನ್ನು ಒದಗಿಸಲು ಉಸಿರಾಟದ ವ್ಯವಸ್ಥೆಗೆ ಶ್ವಾಸಕೋಶಗಳು, ಮೆದುಳು ಮತ್ತು ಎದೆಯ ಸ್ನಾಯುಗಳ ಅಗತ್ಯವಿದೆ. ನೀವು ಮೆಟ್ಟಿಲುಗಳನ್ನು ಹತ್ತಿದ ತಕ್ಷಣ ಉಸಿರಾಟದ ತೊಂದರೆ ಎದುರಾದರೆ ಅದು ಅಲರ್ಜಿ ಅಥವಾ ಅಸ್ತಮಾದ ಕಾರಣದಿಂದಾಗಿರಬಹುದು.

ಸ್ಥೂಲಕಾಯತೆ :
ಅಧಿಕ ತೂಕ ಹೊಂದಿರುವ ಜನರು ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆಯನ್ನು ಎದುರಿಸಬೇಕಾಗುತ್ತದೆ.ಆದ್ದರಿಂದ ನಿಮಗೆ ಉಸಿರಾಟದ ತೊಂದರೆ ಇದ್ದರೆ ತೂಕವನ್ನು ನಿಯಂತ್ರಿಸಿಕೊಳ್ಳಿ. 

ಇದನ್ನೂ ಓದಿ : ಆಯುರ್ವೇದದಲ್ಲಿ ಬಳಸುವ ಈ ಎಲೆ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ

ಜಡ ಜೀವನಶೈಲಿ :
ಜಡ ಜೀವನಶೈಲಿ ಅಂದರೆ ನಿಷ್ಕ್ರಿಯ ಜೀವನಶೈಲಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಕ್ರಿಯಾಶೀಲವಾಗಿರುವುದರಿಂದ ಹೃದಯ ಸ್ನಾಯುಗಳಿಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಈ ಕಾರಣದಿಂದಾಗಿ ನೀವು ಮೆಟ್ಟಿಲುಗಳನ್ನು ಹತ್ತಿದ ತಕ್ಷಣ ಉಸಿರಾಟವು ಪ್ರಾರಂಭವಾಗುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News