ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?
Vitamin B12 deficiency symptoms: ವಿಟಮಿನ್ B12 ಕೊರತೆಯನ್ನು ನಿರ್ಲಕ್ಷಿಸುವುದು ನಿಮಗೆ ದುಬಾರಿಯಾಗಬಹುದು. ಏಕೆಂದರೆ ಇದು ನೀವು ಯೋಚಿಸುವುದಕ್ಕಿಂತ ಹೆಚ್ಚು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳಬಹುದು. ಇದರ ರೋಗಲಕ್ಷಣಗಳ ಬಗ್ಗೆ ತಿಳಿಯಿರಿ...
Vitamin B12 deficiency symptoms: ದೇಹವು ವಿಟಮಿನ್ B12ನಲ್ಲಿ ತೀವ್ರವಾಗಿ ಕೊರತೆಯಿರುವಾಗ, ದೇಹವು ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಹೊಂದಿರುವುದಿಲ್ಲ. ವಾಸ್ತವವಾಗಿ ಕೆಂಪು ರಕ್ತ ಕಣಗಳನ್ನು ತಯಾರಿಸಲು ದೇಹಕ್ಕೆ ಈ ವಿಟಮಿನ್ ಅಗತ್ಯವಿದೆ. ಇದು ನಿಮ್ಮ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುತ್ತದೆ. ಕೆಂಪು ರಕ್ತ ಕಣಗಳು ಇಲ್ಲದೆ, ನಿಮ್ಮ ಅಂಗಾಂಶಗಳು ಮತ್ತು ಅಂಗಗಳು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ಸಾಕಷ್ಟು ಆಮ್ಲಜನಕವಿಲ್ಲದೆ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಕಾರಣದಿಂದ ನಮ್ಮ ಮೂಳೆ ಮಜ್ಜೆಯು ಕಡಿಮೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ ಮತ್ತು ಈ ಕೊರತೆಯ ಲಕ್ಷಣಗಳು ದೇಹದಲ್ಲಿ ಗಂಭೀರವಾಗಿ ಕಂಡುಬರುತ್ತವೆ.
ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳು
ಹಸಿವಿನ ಕೊರತೆ: ಹಸಿವು ಕಡಿಮೆಯಾಗುವುದು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣವಾಗಿದೆ. ಈ ರೀತಿಯ ಪರಿಸ್ಥಿತಿಯಲ್ಲಿ ಜೀರ್ಣಕ್ರಿಯೆಯ ಪ್ರಕ್ರಿಯೆಯೊಂದಿಗೆ ಹಲವಾರು ಹಾರ್ಮೋನುಗಳ ಅಡಚಣೆಗಳು ಉಂಟಾಗುತ್ತವೆ. ಇದರ ಲಕ್ಷಣಗಳು ದೇಹದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೆ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಲಕಾಲಕ್ಕೆ ಅನುಭವಿಸಬಹುದು.
ಇದನ್ನೂ ಓದಿ: ಎಚ್ಚರ..!! ಅಧಿಕ ತೂಕ ಹೊಂದಿರುವವರಿಗೆ ಈ ಮಾರಣಾಂತಿಕ ಕ್ಯಾನ್ಸರ್ ಬರುವ ಅಪಾಯ ಹೆಚ್ಚು..
ನಿದ್ರಾಹೀನತೆ ಮತ್ತು ಖಿನ್ನತೆ: ನಿದ್ರಾಹೀನತೆ ಮತ್ತು ಖಿನ್ನತೆಯು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳಲ್ಲಿ ಒಂದಾಗಿದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ರಕ್ತವಾಗಲೀ ಶಕ್ತಿಯಾಗಲೀ ಇರುವುದಿಲ್ಲ, ಇದರಿಂದಾಗಿ ಯಾರು ಸಹ ಮಲಗಲು ಸಾಧ್ಯವಿಲ್ಲ. ಇದರಿಂದ ಕಿರಿಕಿರಿಯನ್ನು ಅನುಭವಿಸುತ್ತಾರೆ ಮತ್ತು ಖಿನ್ನತೆಯ ಲಕ್ಷಣಗಳನ್ನು ಸಹ ಅನುಭವಿಸಬಹುದು.
ತಲೆನೋವು: ವಿಟಮಿನ್ B12 ಕೊರತೆಯು ಎಲ್ಲಾ ಸಮಯದಲ್ಲೂ ತಲೆನೋವು ಉಂಟುಮಾಡಬಹುದು. ದೇಹದಲ್ಲಿ ಕೆಂಪು ರಕ್ತ ಕಣಗಳ ಕೊರತೆ ಉಂಟಾದಾಗ, ಅದು ಆಯಾಸವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಯಾವಾಗಲೂ ತಲೆನೋವು ಅನುಭವಿಸಬಹುದು. ಹೀಗಾಗಿ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ ಮತ್ತು ವೈದ್ಯರ ಸಲಹೆ ಪಡೆದುಕೊಳ್ಳಿರಿ. ನೀವು ಈ ವಿಟಮಿನ್ ಪರೀಕ್ಷೆ ಸಹ ಮಾಡಿಕೊಳ್ಳಬಹುದು. ಅದು ನಿಮ್ಮ ದೇಹದಲ್ಲಿ ಏನು ಕೊರತೆಯಿದೆ ಎಂಬುದನ್ನು ಸುಲಭವಾಗಿ ತಿಳಿಸುತ್ತದೆ.
ಇದನ್ನೂ ಓದಿ: ಏನಿದು ಸ್ಲೀಪ್ ಸ್ಕ್ರೀನಿಂಗ್' ಎಂದರೇನು? ಇದರ ಬಗ್ಗೆ ನಿಮಗೆಷ್ಟು ಗೊತ್ತು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ