ಇಮ್ಯೂನಿಟಿ ಹೆಚ್ಚಾಗಲು ನೀವೂ Vitamin C ಮಾತ್ರೆ ಸೇವಿಸುತ್ತೀರಾ? ಎಚ್ಚರ...!
Vitamin C Side Effects: ವಿಟಮಿನ್ ಸಿ ಮಾತ್ರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಳದ ಕೆಲಸ ಮಾಡುತ್ತದೆ. ಕೊರೊನಾ ವೈರಸ್ ಕಾಲಾವಧಿಯಲ್ಲಿ ಜನರು ಭಯದಲ್ಲಿ ವಿಟಮಿನ್ ಸಿ ಮಾತ್ರೆಯನ್ನು ಭಾರಿ ಪ್ರಮಾಣದಲ್ಲಿ ಸೇವಿಸಿದ್ದಾರೆ. ಆದರೆ ಈ ಮಾತ್ರ ಆರೋಗ್ಯಕ್ಕೆ ಹಾನಿಕಾರಕ ಎಂದೂ ಕೊಡ ಸಾಬೀತಾಗಬಹುದು. ಹಾಗಾದರೆ ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
Vitamin C Side Effects: ನವದೆಹಲಿ: ವರ್ಷ 2020 ರಲ್ಲಿ, ಕೊರೊನಾವೈರಸ್ ಜನರನ್ನು ಹೆಚ್ಚು ಆರೋಗ್ಯ ಪ್ರಜ್ಞೆಯನ್ನಾಗಿ ಮಾಡಿದೆ. ಕಳೆದ ವರ್ಷ ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಟಕ್ಕೊಳಗಾದ ಪದ ಎಂದರೆ ಅದು Immunity. ಜಾಗತಿಕ ಸಾಂಕ್ರಾಮಿಕ ಕೊರೊನಾವೈರಸ್ ಭಯದಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಬಹಳ ಗಂಭೀರವಾಗಿದ್ದಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ಅನೇಕ ಸಲಹೆಗಳನ್ನು ಅಳವಡಿಸಿಕೊಳ್ಳಲು ಆರಂಭಿಸಿದ್ದಾರೆ. ನಿನ್ನೆ ತನಕ, ಹಣ್ಣುಗಳನ್ನು ತಿನ್ನಲು ಇಷ್ಟಪಡದ ಜನರು, ಈಗ ಅವರು ಎಲ್ಲಾ ಹಣ್ಣುಗಳು ಮತ್ತು ಸಪ್ಲಿಮೆಂಟ್ಸ್ ತಮ್ಮ ಆಹಾರದಲ್ಲಿ ಸೇರಿಸಲು ಆರಂಭಿಸಿದ್ದಾರೆ.
ಕರೋನಾ ಕಾಲದಲ್ಲಿ ವಿಟಮಿನ್ ಸಿ ಹೊಂದಿರುವ ಹಣ್ಣುಗಳು ಮತ್ತುಸಪ್ಲಿಮೆಂಟ್ಸ್ ಗಳ ಬಗ್ಗೆ ಹೆಚ್ಚು ಚರ್ಚಿಸಲಾಗಿದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಿಟಮಿನ್ ಸಿ ರೋಗನಿರೋಧಕ (Immunity) ಶಕ್ತಿಯನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳಿದರೂ ಕೂಡ ವಿಟಮಿನ್ ಸಿ ಯನ್ನು ಅಧಿಕವಾಗಿ ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದೂ ಕೂಡ ಹೇಳಲಾಗುತ್ತದೆ. ವಿಟಮಿನ್ ಸಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ ಅಪಾಯಕಾರಿ ಕೂಡ ಆಗಿದೆ. ವಿಟಮಿನ್ ಸಿ ಅನ್ನು ಅತಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಯಾವುವು ಮತ್ತು ಯಾವ ಪ್ರಮಾಣದಲ್ಲಿ ಇದನ್ನು ಸೇವಿಸಬೇಕು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.
ಇದನ್ನು ಓದಿ- Women Health : ನಿಮಗೆ 40 ವರ್ಷವಾಯಿತಾ? ಹಾಗಿದ್ದರೆ ಈ ಆಹಾರಗಳನ್ನು ಖಂಡಿತಾ ಸೇವಿಸಿ
ವಾಂತಿ ಬರುವಿಕೆ
ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ ತಿನ್ನುವುದು ವಾಂತಿ ಅಥವಾ ವಾಕರಿಕೆಗೆ ಕಾರಣವಾಗಬಹುದು. ಹೀಗಾಗಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿಯ ಬದಲು ವಿಟಮಿನ್ ಸಿ ಹಣ್ಣುಗಳನ್ನು ಸೇವಿಸುವುದು ಉತ್ತಮ. ಹಣ್ಣುಗಳಲ್ಲಿ ಈ ಸಮಸ್ಯೆಯ ಸಾಧ್ಯತೆ ಕಡಿಮೆ.
ಅಬ್ಡಾಮಿನಲ್ ಕ್ರ್ಯಾಂಪ್
ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಸೆಳೆತ ಉಂಟಾಗುತ್ತದೆ. ಇದು ನಿಮ್ಮ ಹೊಟ್ಟೆಯ ವ್ಯವಸ್ಥೆಗೆ ತೊಂದರೆಯಾಗಬಹುದು. ಆದ್ದರಿಂದ, ವಿಟಮಿನ್ ಸಿ ಹೆಚ್ಚಾಗಿರುವ ಉತ್ಪನ್ನಗಳನ್ನು ಸೇವಿಸಬೇಡಿ.
ವಾಂತ-ಬೇಧಿ
ಅತಿಯಾದ ವಿಟಮಿನ್ಸ್ ಸಿ ಮಾತ್ರೆ ಸೇವಿಸುವುದು ಡಯೋರಿಯಾಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರಿಂದ ನಿಮ್ಮ ಹೊಟ್ಟೆ ಹಾಳಾಗಬಹುದು. ವಾಂತಿ-ಬೇಧಿಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ನಿಮ್ಮ ಶರೀರ ಡಿಹೈಡ್ರೇಟ್ ಕೂಡ ಆಗಬಹುದು.
ಇದನ್ನು ಓದಿ-ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಕೂದಲ ರಕ್ಷಣೆಯವರೆಗೆ ಪ್ರಯೋಜಕಾರಿ Capsicum
ಹಾರ್ಟ್ ಬರ್ನ್
ವಿಟಮಿನ್ ಸಿ ಅಪಾಯಕಾರಿ ಸೈಡ್ ಎಫೆಕ್ಟ್ ಗಳಲ್ಲಿ ಎದೆಯುರಿತ ಕೂಡ ಶಾಮೀಲಾಗಿದೆ. ಈ ಅವಧಿಯಲ್ಲಿ ನಿಮಗೆ ಎದೆಯ ಕೆಳಭಾಗ ಹಾಗೂ ಮೇಲ್ಭಾಗಗಳಲ್ಲಿ ಉರಿತದ ಅನುಭವವಾಗುತ್ತದೆ ಹೀಗಾಗಿ ವಿಟಮಿನ್ ಸಿ ಮಾತ್ರೆ ಸೇವಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ
ನಿದ್ರಾಹೀನತೆ ಮತ್ತು ತಲೆನೋವು
ವಿಟಮಿನ್ ಸಿ ಮಾತ್ರೆಗಳನ್ನು ಅತಿಯಾಗಿ ಸೇವಿಸುವುದರಿಂದ ಅನಿದ್ರಾ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ. ಮಲಗುವಾಗ ಇದು ನಿಮ್ಮಲ್ಲಿ ಆತಂಕ ಹೆಚ್ಚಿಸುತ್ತದೆ.
ಯಾವ ಪ್ರಮಾಣದಲ್ಲಿ ಮಾತ್ರೆ ಸೇವಿಸಬೇಕು
ಅಧ್ಯಯನವೊಂದರ ಪ್ರಕಾರ ನಿತ್ಯ 65-90 ಗ್ರಾಂ.ವಿಟಮಿನ್ ಸಿ ತೆಗೆದುಕೊಳ್ಳಬೇಕು ಎನ್ನಲಾಗುತ್ತದೆ. ದಿನವೊಂದರಲ್ಲಿ 2000 ಗ್ರಾಂ ಗಳಷ್ಟು ವಿಟಮಿನ್ ಸಿ ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ.
ಇದನ್ನು ಓದಿ-Higher Risk Of Coronavirus: ಮದುವೆಯಾಗಲು Interest ಇಲ್ಲವೇ...? ಈ ಸುದ್ದಿ Miss ಮಾಡದೆ ಓದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.