Vitamin D Deficiency In Women : ಮಹಿಳೆಯರು ಮನೆಯ ಮತ್ತು ಕೌಟುಂಬಿಕ ಜವಾಬ್ದಾರಿಗಳ ಹೊರೆಯಲ್ಲಿ ಸಿಲುಕಿ ತಮ್ಮ ಆರೋಗ್ಯವನ್ನು  ನಿರ್ಲಕ್ಷಿಸಿ ಬಿಡುತ್ತಾರೆ. ಎಷ್ಟೋ ಬಾರಿ ಸಮಸ್ಯೆ ಉಲ್ಬಣಗೊಂಡ ನಂತರವೇ ಅವರು ಸಮಸ್ಯೆಗಳತ್ತ ಗಮನ ಹರಿಸುವುದು. ತಾವು ಏನು ತಿನ್ನುತ್ತೇವೆ, ಏನು ಕುಡಿಯುತ್ತೇವೆ ಎನ್ನುವುದರ ಬಗ್ಗೆ ಕನಿಷ್ಠ ಕಾಳಜಿಯನ್ನು ವಹಿಸುವುದಿಲ್ಲ. ಆದರೆ ಕೆಲವು ಪೋಷಕಾಂಶಗಳು ಅವರ ದೇಹಕ್ಕೆ ಬಹಳ ಮುಖ್ಯವಾಗಿರುತ್ತದೆ. ದೇಹದಲ್ಲಿ ಈ ಪೋಷಕಾಂಶಗಳ ಕೊರತೆಯಾದರೆ, ಮಹಿಳೆಯರು ಅನೇಕ ರೋಗಗಳಿಗೆ ಒಳಗಾಗುತ್ತಾರೆ. ಮಾತ್ರವಲ್ಲ ದೌರ್ಬಲ್ಯವನ್ನು ಎದುರಿಸಬೇಕಾಗಬಹುದು. ಅಂತಹ ಒಂದು ಪೋಷಕಾಂಶವೆಂದರೆ ವಿಟಮಿನ್ ಡಿ. ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಎದುರಾಗಲೇಬಾರದು. ಇಲ್ಲವಾದರೆ, ಪಾರ್ಶ್ವವಾಯು, ಮೂಳೆ ನೋವು ಮತ್ತು ಕೀಲು ನೋವು ಮುಂತಾದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ವಿಟಮಿನ್ ಡಿ ಕೊರತೆಯ ಲಕ್ಷಣಗಳು :
1. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು : 
ದೇಹದಲ್ಲಿ ಕಡಿಮೆ ಪ್ರಮಾಣದ ವಿಟಮಿನ್ ಡಿ ಹೊಂದಿರುವ ಮಹಿಳೆಯರ ರೋಗನಿರೋಧಕ ಶಕ್ತಿ ಕೂಡಾ ಕಡಿಮೆಯಾಗುತ್ತದೆ. ಈ ಕಾರಣದಿಂದ ಅವರು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ದೇಹದಲ್ಲಿ ಇರುವ ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.  ಇದು ಸೋಂಕುಗಳು ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ : ಮಧುಮೇಹವಿದ್ದಾಗ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು.! ತಕ್ಷಣ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳಿ


2. ಕಾಡುವುದು ಸುಸ್ತು :
ವಿಟಮಿನ್ ಡಿ ಕೊರತೆಯಿಂದಾಗಿ ಸುಸ್ತಾಗುತ್ತದೆ. ಇದರಿಂದಾಗಿ, ದೈನಂದಿನ ಸಾಮಾನ್ಯ ಚಟುವಟಿಕೆಗಳನ್ನು ಮಾಡುವುದು ಕೂಡಾ ಕಷ್ಟವಾಗುತ್ತದೆ. ಆಗಾಗ  ಅವರು ಆಯಾಸ ಮತ್ತು ದೌರ್ಬಲ್ಯವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ  ಈ ಸಂದರ್ಭದಲ್ಲಿ ದೇಹದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ.


3. ಉದ್ವೇಗ :
ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರನ್ನು ಭಾವನಾತ್ಮಕವಾಗಿ ಸೂಕ್ಷ್ಮ ಎಂದು ಪರಿಗಣಿಸುವುದರಿಂದ,  ಮಹಿಳೆಯರ ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಒತ್ತಡ ಮತ್ತು ಖಿನ್ನತೆಗೆ ಬಲಿಯಾಗುತ್ತಾರೆ.


4. ಮೂಳೆಗಳಲ್ಲಿನ ದೌರ್ಬಲ್ಯ :
ಕ್ಯಾಲ್ಸಿಯಂನಂತೆಯೇ, ವಿಟಮಿನ್ ಡಿ ಸಹ ಸದೃಢ ಮೂಳೆಗಳಿಗಾಗಿ ಅಗತ್ಯವಾಗಿರುತ್ತದೆ. ಮಹಿಳೆಯರ ದೇಹದಲ್ಲಿ ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿದ್ದರೆ, ಅವರ ಮೂಳೆಗಳು ದುರ್ಬಲವಾಗುತ್ತವೆ. ಇದರಿಂದ ಸಾಕಷ್ಟು ನೋವನ್ನು ಅನುಭವಿಸುತ್ತಾರೆ.


ಇದನ್ನೂ ಓದಿ : Food For Men : ಪುರುಷರೆ ನಿಮ್ಮ ಉತ್ತಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಆಹಾರಗಳನ್ನು!


ವಿಟಮಿನ್ ಡಿ ಪಡೆಯಲು ಏನು ಮಾಡಬೇಕು ?:
ವಿಟಮಿನ್ ಡಿ ಅನ್ನು ಸನ್ಶೈನ್ ವಿಟಮಿನ್ ಎಂದೂ ಕರೆಯುತ್ತಾರೆ ಏಕೆಂದರೆ ಸೂರ್ಯನ ಬೆಳಕಿಣ ಮೂಲಕ ಇದನ್ನೂ ಪಡೆಯಬಹುದು. ಪ್ರತಿದಿನ 10 ರಿಂದ 20 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ನಿಂತರೆ, ವಿಟಮಿನ್ ಡಿ ಕೊರತೆಯಾಗುವುದಿಲ್ಲ. ಅಲ್ಲದೆ, ಹಾಲಿನ ಉತ್ಪನ್ನಗಳು,  ಮೀನುಗಳು, ಅಣಬೆಗಳಂತಹ ಕೆಲವು ಆಹಾರಗಳಿಂದಲೂ ಪಡೆಯಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.