ಮಧುಮೇಹವಿದ್ದಾಗ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು.! ತಕ್ಷಣ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳಿ

ಮಧುಮೇಹ ಬಂದಾಗ, ನಮ್ಮ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಪಾದಗಳಿಂದ ಕೆಲವು ಎಚ್ಚರಿಕೆಯ ಚಿಹ್ನೆಗಳು ಕಂಡುಬರುತ್ತವೆ. ಇದನ್ನು ಸಮಯಕ್ಕೆ ಸರಿಯಾಗಿ  ಗುರುತಿಸುವುದು ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.  

Written by - Ranjitha R K | Last Updated : Sep 23, 2022, 10:51 AM IST
  • ಮಧುಮೇಹದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ
  • ತೋರುವ ಸಣ್ಣ ನಿರ್ಲಕ್ಷ್ಯ ಕೂಡಾ ಮಾರಕವಾಗಬಹುದು
  • ರೋಗ ಲಕ್ಷಣವನ್ನು ಗುರುತಿಸುವುದು ಅಗತ್ಯ
ಮಧುಮೇಹವಿದ್ದಾಗ ಕಾಲಿನಲ್ಲಿ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು.! ತಕ್ಷಣ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳಿ  title=
diabetes symptoms in feet (file photo)

ಬೆಂಗಳೂರು : ಮಧುಮೇಹವಿದ್ದಾಗ ಜನರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ತೋರುವ ಸಣ್ಣ ನಿರ್ಲಕ್ಷ್ಯ ಕೂಡಾ ಮಾರಕವಾಗಿ ಪರಿಣಮಿಸಬಹುದು. ಒಂದು ವೇಳೆ ಮಧುಮೇಹಿಗಳಲ್ಲದಿದ್ದರೂ ಸಹ ಆ ರೋಗದ ಅಪಾಯಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಮಧುಮೇಹ ಬಂದಾಗ, ನಮ್ಮ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಪಾದಗಳಿಂದ ಕೆಲವು ಎಚ್ಚರಿಕೆಯ ಚಿಹ್ನೆಗಳು ಕಂಡುಬರುತ್ತವೆ. ಇದನ್ನು ಸಮಯಕ್ಕೆ ಸರಿಯಾಗಿ  ಗುರುತಿಸುವುದು ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.  ನಿಮ್ಮ ಪಾದಗಳಲ್ಲಿಯೂ ಈ ಲಕ್ಷಣಗಳು ಕಂಡು ಬಂದರೆ, ತಕ್ಷಣವೇ ರಕ್ತದ ಗ್ಲೂಕೋಸ್ ಪರೀಕ್ಷೆಯನ್ನು ಮಾಡಿಕೊಳ್ಳಿ. 

1. ಪಾದಗಳಲ್ಲಿ ನೋವು :
ಮಧುಮೇಹ ಕಾಣಿಸಿಕೊಂಡಾಗ ಡಯಾಬಿಟಿಕ್ ನ್ಯೂರೋಪತಿಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಇದರಲ್ಲಿ ನರಗಳು ಹಾನಿಗೊಳಗಾಗುತ್ತವೆ, ಇದರಿಂದಾಗಿ ಪಾದಗಳು ಊದಿಕೊಳ್ಳಬಹುದು ಮತ್ತು ಕೆಲವೊಮ್ಮೆ ಪಾದಗಳು  ಮರಗಟ್ಟುತ್ತವೆ.  

ಇದನ್ನೂ ಓದಿ : Food For Men : ಪುರುಷರೆ ನಿಮ್ಮ ಉತ್ತಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಈ ಆಹಾರಗಳನ್ನು!

2. ಉಗುರುಗಳ ಬಣ್ಣವನ್ನು ಬದಲಾಗುವುದು : 
ಮಧುಮೇಹವಿದ್ದಾಗ ಪಾದದ ಉಗುರುಗಳ ಬಣ್ಣವು ಬದಲಾಗುತ್ತದೆ. ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿರುವ ನಮ್ಮ ಉಗುರುಗಳು ಇದ್ದಕ್ಕಿದ್ದಂತೆ ಕಪ್ಪಾಗಲು ಪ್ರಾರಂಭಿಸುತ್ತವೆ. ಈ ಲಕ್ಷಣವನ್ನು ಲಘುವಾಗಿ ಪರಿಗಣಿಸಬಾರದು. ತಕ್ಷಣವೇ ರಕ್ತ ಪರೀಕ್ಷೆಯನ್ನು ಮಾಡಿ.

3.ಚರ್ಮ ಒರಟಾಗುವುದು :
ಮಧುಮೇಹವಿದ್ದಾಗ ನಿಮ್ಮ ಪಾದಗಳು ಮತ್ತು ಪಾದದ ಅಡಿಭಾಗದ ಚರ್ಮವು ಒರಟಾಗಲು ಪ್ರಾರಂಭಿಸುತ್ತದ. ಕೆಲವೊಮ್ಮೆ ತಪ್ಪು ಗಾತ್ರದ ಚಪ್ಪಲಿ ಅಥವಾ ಶೂ ಹಾಕುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಹೀಗಾದಾಗ ಮಾತ್ರ ತಕ್ಷಣಕ್ಕೆ ರಕ್ತದಲ್ಲಿನ ಸಕ್ಕರೆ ಪರೀಕ್ಷೆಯನ್ನು ಮಾಡಿ.

4. ಪಾದಗಳಲ್ಲಿ ಹುಣ್ಣುಗಳು :
ನಿಮಗೆ ಪಾದದ ಹುಣ್ಣು ಕಾಣಿಸಿಕೊಂಡಾಗ, ಪಾದಗಳಲ್ಲಿ ಗಾಯಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೆಲವೊಮ್ಮೆ ಚರ್ಮವು ಕಿತ್ತು ಬರುತ್ತಿರುತ್ತದೆ. ಈ ಲಕ್ಷಣ ಮಿತಿ ಮೀರಿದಾಗ ವೈದ್ಯರು ಕೆಲವೊಮ್ಮೆ ಕಾಲು ಕತ್ತರಿಸುವ ಸಲಹೆ ಕೂಡಾ ನೀಡಬಹುದು.  ಹಾಗಾಗಿ ಸಮಯಕ್ಕೆ ಸರಿಯಾಗಿ ಮಧುಮೇಹವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. 

ಇದನ್ನೂ ಓದಿ : Heart Attack Symptoms: ಬೆಳಿಗ್ಗೆ ಎದ್ದೇಳುವಾಗ ಕಂಡು ಬರುವ ಈ ಮೂಕ ಹೃದಯಾಘಾತದ ಸಂಕೇತಗಳ ಬಗ್ಗೆ ನಿಮಗೂ ತಿಳಿದಿರಲಿ

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News