ನವದೆಹಲಿ: ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ (Coronavirus) ಪ್ರಕರಣಗಳ ಹಿನ್ನೆಲೆ ಸ್ಥಳೀಯ ಆಡಳಿತ ಟೆಸ್ಟಿಂಗ್ ತೀವ್ರಗೊಳಿಸಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೊಸ ತಂತ್ರಜ್ಞಾನದೊಂದಿಗೆ ಕರೋನಾ ಟೆಸ್ಟಿಂಗ್  ಪ್ರಾರಂಭಿಸಿದೆ. ಕರೋನಾ ಸೋಂಕನ್ನು ಪತ್ತೆಹಚ್ಚಲು ಬಿಎಂಸಿ ಮುಂಬೈನ ದೊಡ್ಡ ಆಸ್ಪತ್ರೆಯಲ್ಲಿ ಧ್ವನಿ ಮಾದರಿ ಪರೀಕ್ಷೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆ.


COMMERCIAL BREAK
SCROLL TO CONTINUE READING

ಈ ತಂತ್ರಜ್ಞಾನದಲ್ಲಿ ಧ್ವನಿಯ ಮೂಲಕ ಕರೋನಾವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮೊಬೈಲ್ ಅಪ್ಲಿಕೇಶನ್ ಆಧಾರಿತ ಪರೀಕ್ಷಾ ಸೇವೆಯಾಗಿದೆ.


ಕೋವಿಡ್ -19 ರೋಗಿಗಳನ್ನು ಪತ್ತೆ ಹಚ್ಚಲು ಮುಂಬೈನ ಗೋರೆಗಾಂವ್‌ನ ನೆಸ್ಕೊ ಮೈದಾನದಲ್ಲಿರುವ ಜಂಬೊ ಕೋವಿಡ್ ಕೇರ್ ಕೇರ್ ಸೆಂಟರ್ (nesco covid jumbo facility) ದಲ್ಲಿ ಧ್ವನಿ ಮಾದರಿ ಪರೀಕ್ಷೆಯ ಆಧಾರದ ಮೇಲೆ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಬಿಎಂಸಿ ತಿಳಿಸಿದೆ. ಇಂತಹ ಧ್ವನಿ ಆಧಾರಿತ ಅಪ್ಲಿಕೇಶನ್‌ಗಳು ಅಥವಾ ಪರಿಕರಗಳನ್ನು ಅನೇಕ ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಬಿಎಂಸಿ ಹೇಳಿದೆ.


ಈ ತಂತ್ರಜ್ಞಾನದಲ್ಲಿ ರೋಗಿಗೆ ಆತನ ಧ್ವನಿಯನ್ನು  ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ರೆಕಾರ್ಡ್ ಮಾಡಲು ಹೇಳಲಾಗುತ್ತದೆ. ಇದರಲ್ಲಿ ಧ್ವನಿ ವಿಶ್ಲೇಷಣೆ ಅಪ್ಲಿಕೇಶನ್ ಅನ್ನು ಅಪ್‌ಲೋಡ್ ಮಾಡಲಾಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ, ರೋಗಿಯ ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ನೀಡಲಾಗುವುದು.


ಈ ಅಪ್ಲಿಕೇಶನ್‌ನಲ್ಲಿ, ರೋಗಿಯ ಧ್ವನಿಯನ್ನು ಆರೋಗ್ಯವಂತ ಮನುಷ್ಯನ ಧ್ವನಿಗೆ ಹೋಲಿಸಲಾಗುತ್ತದೆ. ಅಪ್ಲಿಕೇಶನ್‌ನಲ್ಲಿ ಈಗಾಗಲೇ ಸಾವಿರಾರು ಧ್ವನಿ ಮಾದರಿಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಪರೀಕ್ಷೆಯ ಫಲಿತಾಂಶ ಕೇವಲ 30 ಸೆಕೆಂಡುಗಳಲ್ಲಿ ಬರಲಿದೆ ಎಂದು ಬಿಎಂಸಿ ಹೇಳಿಕೊಂಡಿದೆ.


ಈ ವೈಸ್ ಟೆಸ್ಟಿಂಗ್ ಆಪ್, ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮನುಷ್ಯನ ಧ್ವನಿಯ ಸುಮಾರು 6300 ಸ್ಯಾಂಪಲ್ ಗಳನ್ನು ಒದಗಿಸಲಾಗಿದೆ.


ಕರೋನಾ ಸೋಂಕಿನ ಮೊದಲ ಮತ್ತು ಹೆಚ್ಚಿನ ಪರಿಣಾಮ ಮನುಷ್ಯನ ಶ್ವಾಸಕೋಶದ ಮೇಲೆ ಇರುತ್ತದೆ ಮತ್ತು ಶ್ವಾಸಕೋಶದ ಮೇಲೆ ಯಾವುದೇ ಸಮಸ್ಯೆ ಇದ್ದಾಗಲೆಲ್ಲಾ, ಧ್ವನಿಯು ಮೊದಲು ಪ್ರಭಾವಕ್ಕೆ ಒಳಗಾಗುತ್ತದೆ ಎಂಬುದು ಈ ವೈಸ್ ಟೆಸ್ಟ್ ಹಿಂದಿನ ತರ್ಕವಾಗಿದೆ.


ರೋಗಿಯ ಧ್ವನಿ ಪರೀಕ್ಷೆಯ ಜೊತೆಗೆ ಆರ್‌ಟಿ-ಪಿಸಿಆರ್ (RT-PCR Test) ಪರೀಕ್ಷೆಯನ್ನೂ ಸಹ ಮಾಡಲಾಗುವುದು ಎಂದು ಬಿಎಂಸಿ ಹೇಳಿದೆ. ಇದರಿಂದ ಫಲಿತಾಂಶವು ಶೇ.100 ಸರಿಯಾಗಿ ಬರಲಿದೆ. ಈ ಯೋಜನೆ ಒಂದು ವೇಳೆ ಯಶಸ್ವಿಯಾದರೆ, ಈ ವ್ಯವಸ್ಥೆಯನ್ನು ಇತರ ಪುರಸಭೆಯ ಆಸ್ಪತ್ರೆಗಳಲ್ಲಿಯೂ ಕೂಡ ಬಳಸಲಾಗುವುದು ಎಂದು ಮಹಾ ಸರ್ಕಾರ ಹೇಳಿದೆ.