Walking Tips : ದೇಹವನ್ನು ಸದೃಢವಾಗಿಡಲು ವಾಕಿಂಗ್ ಬಹಳ ಮುಖ್ಯ, ಆದರೆ ವಾಕಿಂಗ್ ಮಾಡಿದ ನಂತರ, ಕೆಲವರು ಇಂತಹ ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ನಿಮಗೆ ಲಾಭದ ಬದಲು ಆರೋಗ್ಯ ಹಾನಿ ಜಾಸ್ತಿ, ಏಕೆಂದರೆ ವ್ಯಾಯಾಮದ ನಂತರ ದೇಹವು ಕೆಲವು ಆಹಾರ, ಪಾನೀಯಗಳನ್ನು ಸಹಿಸುವುದಿಲ್ಲ. ಉದಾಹರಣೆಗೆ, ನೀವು ವಾಕ್ ನಂತರ ನಿದ್ರಿಸಿದರೆ ಅಥವಾ ನೀವು ಸ್ನಾನ ಮಾಡಿದರೆ ನಿಮ್ಮ ಆರೋಗ್ಯವು ಹದಗೆಡಬಹುದು. ಆದ್ದರಿಂದ ಇದನ್ನು ಹೊರತುಪಡಿಸಿ, ವಾಕ್ ನಂತರ ನೀವು ಇತರ ಯಾವ ತಪ್ಪುಗಳನ್ನು ಮಾಡುತ್ತೀರಿ, ಅದನ್ನು ಸರಿಪಡಿಸಬಹುದು ಹೇಗೆ? ಇಲ್ಲಿ ತಿಳಿಯಿರಿ..


COMMERCIAL BREAK
SCROLL TO CONTINUE READING

1. ವಾಕ್ ಮಾಡಿದ ತಕ್ಷಣ ಆಹಾರ ಸೇವಿಸುವುದು


ವಾಕ್ ನಂತರ ಹಸಿವು ಅನುಭವಿಸುವ ಅನೇಕ ಜನ ಇದ್ದಾರೆ. ಇವರು ತಕ್ಷಣ ಆಹಾರವನ್ನು ಸೇವಿಸುತ್ತಾರೆ, ಇದರಿಂದಾಗಿ ಇವರಿಗೆ ಲಾಭದ ಬದಲು ನಷ್ಟವನ್ನು ಅನುಭವಿಸಬಹುದು ಹೆಚ್ಚು. ಆದ್ದರಿಂದ 20-30 ನಿಮಿಷಗಳ ವಾಕ್ ನಂತರವೇ ತಿನ್ನಲು ಮತ್ತು ಕುಡಿಯಲು ಪ್ರಯತ್ನಿಸಿ.


ಇದನ್ನೂ ಓದಿ : Mother's Day special: ಪ್ರತಿಯೊಬ್ಬ ತಾಯಿಯೂ ಸೇವಿಸಬೇಕಾದ ಆರೋಗ್ಯಕರ ಆಹಾರ


2. ವಾಕ್ ನಂತರ ನಿದ್ರೆ ಮಾಡುವುದು


ಕೆಲವರು ವಾಕ್ ನಂತರ ತುಂಬಾ ಸುಸ್ತಾಗುತ್ತಾರೆ, ಅವರು ತಕ್ಷಣ ನಿದ್ದೆ ಮಾಡುತ್ತಾರೆ ಮತ್ತು ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸುವುದಿಲ್ಲ, ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ನೀವು ಸ್ವಲ್ಪ ಸಮಯದ ನಂತರ ಮಲಗಬೇಕು. ವಾಸ್ತವವಾಗಿ, ನಡಿಗೆಯ ನಂತರ, ಹೃದಯ ಬಡಿತವು ವೇಗವಾಗಿರುತ್ತದೆ, ಆದ್ದರಿಂದ ನಿದ್ರೆಯನ್ನು ತಕ್ಷಣವೇ ತಪ್ಪಿಸಬೇಕು.


3. ಬೆವರುವ ಬಟ್ಟೆಗಳನ್ನು ತಕ್ಷಣ ಬದಲಾಯಿಸಿ


ರೋಯಿಂಗ್ ಅಥವಾ ವಾಕಿಂಗ್ ನಂತರ ಅನೇಕ ಜನ ಬಹಳಷ್ಟು ಬೆವರುತ್ತಾರೆ. ಇವರು ತಕ್ಷಣ ಬೆವರು ಹತ್ತಿದ ಬಟ್ಟೆಗಳನ್ನು ತೆಗೆಯುವುದಿಲ್ಲ, ಇದು ಅನೇಕ ತೊಂದರೆಗಳಿಗೆ ಒಳಗಾಗುತ್ತಾರೆ. ವಾಸ್ತವವಾಗಿ, ನೀವು ವಾಕ್ ಮಾಡುವ ಧರಿಸಿದ ಬಟ್ಟೆಗಳಿಗೆ ಬೆವರು ಹತ್ತಿರುತ್ತದೆ ಅದಕ್ಕೆ ಅದನ್ನು ಆದಷ್ಟು ಬೇಗ ತೆಗೆಯದಿದ್ದರೆ, ದೇಹದಲ್ಲಿ ಅಲರ್ಜಿ ಕಂಡು ಬರುತ್ತದೆ. ಆದ್ದರಿಂದ, ವಾಕ್ ನಂತರ ಯಾವಾಗಲೂ ಬೆವರುವ ಬಟ್ಟೆಗಳನ್ನು ತೆಗೆದುಹಾಕಿ.


ಇದನ್ನೂ ಓದಿ : Weight Loss: ತೂಕ ಕಳೆದುಕೊಳ್ಳುವಾಗ ಈ ತಪ್ಪುಗಳನ್ನು ಮಾಡಲೇಬಾರದು


4. ತ್ವರಿತ ಸ್ನಾನ ಮಾಡುವುದು


ಕೆಲವರು ವಾಕಿಂಗ್ ಮಾಡಿದ ನಂತರ ಅವರ ದೇಹದಲ್ಲಿ ಉಷ್ಣತೆ ತುಂಬಾ ಹೆಚ್ಚಾಗಿರುತ್ತದೆ, ಹೀಗಾಗಿ ಇವರು ತಕ್ಷಣ ಸ್ನಾನ ಮಾಡುತ್ತಾರೆ, ಇದು ತಪ್ಪು ಇದರಿಂದ ಶೀತ ಅಥವಾ ಸೈನಸ್ ಸಮಸ್ಯೆಗೆ ಕಾರಣವಾಗಬಹುದು. ವಾಕ್ ಮಾಡಿದ ಸ್ವಲ್ಪ ಸಮಯದ ನಂತರ ಸ್ನಾನ ಮಾಡಬೇಕು, ಇದರಿಂದ ನಿಮಗೆ ಅಂತಹ ತೊಂದರೆಗಳು ಉಂಟಾಗುವುದಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.