Superfoods For Brain: ಸಾಮಾನ್ಯವಾಗಿ ಮೆದುಳನ್ನು ನಮ್ಮ ಶರೀರದ ಪವರ್ ಹೌಸ್ ಎಂದು ಕರೆಯಲಾಗುತ್ತದೆ. ಹೀಗಾಗಿ ಕಾಲ-ಕಾಲಕ್ಕೆ ಅದನ್ನು ಚಾರ್ಜ್ ಮಾಡುವುದು ತುಂಬಾ ಅವಶ್ಯಕವಾಗಿದೆ. ಮೆದುಳನ್ನು ಚುರುಕಾಗಿಸಲು, ನೀವು ಉತ್ತಮ ಮತ್ತು ಆರೋಗ್ಯಕರ ಜೀವನಶೈಲಿ ಹೊಂದಿರುವುದು ತುಂಬಾ ಮುಖ್ಯ. ಇದರಲ್ಲಿ ನೀವು ಸೇವಿಸುವ ಆಹಾರ ಕೂಡ ಒಂದು ಪ್ರಮುಖ ಪಾತ್ರವಹಿಸುತ್ತದೆ. ಹೌದು. ಆರೋಗ್ಯಕರ ಆಹಾರ ಮೆದುಳಿಗೆ ಒಂದು ರೀತಿಯ ಸೂಪರ್ ಫುಡ್ ಆಗಿದೆ.

COMMERCIAL BREAK
SCROLL TO CONTINUE READING

1. ಮೆದುಳನ್ನು ಚುರುಕುಗೊಳಿಸಲು ಅಗಸೆ ಬೀಜಗಳು ತುಂಬಾ ಪ್ರಯೋಜನಕಾರಿಯಾಗಿವೆ. ಇವುಗಳನ್ನು ಸೇವಿಸಲು, ನೀವು ನಿಮ್ಮ ಆಹಾರದಲ್ಲಿ ಒಂದು ಚಮಚ ಲಿನ್ಸೆಡ್ ಬೀಜಗಳನ್ನು ಸೇರಿಸಿಕೊಳ್ಳಬಹುದು. ಮತ್ತೊಂದೆಡೆ, ಫೈಬರ್ ಮತ್ತು ಒಮೆಗಾ -2 ಕೊಬ್ಬಿನಾಮ್ಲಗಳು ಲಿನ್ಸೆಡ್ನಲ್ಲಿ ಸಾಕಷ್ಟು ಕಂಡುಬರುತ್ತವೆ.

2. ಕುಂಬಳಕಾಯಿ ಬೀಜಗಳನ್ನು ಸೇವಿಸುವುದು ಕೂಡ ನಮ್ಮ  ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಸತು, ತಾಮ್ರ ಮತ್ತು ಕಬ್ಬಿಣವನ್ನು ಹೊಂದಿದ್ದು, ಇವು ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿವೆ.

3. ಮೆದುಳನ್ನು ಚುರುಕುಗೊಳಿಸಲು ಚಿಯಾ ಬೀಜಗಳನ್ನು ಪ್ರತಿದಿನ ಸೇವಿಸಬೇಕು. ಈ ಬೀಜಗಳು ನಮ್ಮ ಮೆದುಳಿಗೆ ಸೂಪರ್‌ಫುಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇವುಗಳನ್ನು ಸೇವಿಸಲು, ಪ್ರತಿದಿನ 2 ಚಮಚ ಚಿಯಾ ಬೀಜಗಳನ್ನು ಆಧಾರದಲ್ಲಿ ಶಾಮೀಲುಗೊಳಿಸಿ.


ಇದನ್ನೂ ಓದಿ-Good Sleep: ಕ್ಷಣಾರ್ಧದಲ್ಲಿ ಮಗುವಿನಂತೆ ಸುಖ ನಿದ್ರೆಗೆ ಜಾರಬೇಕೆ? ಕಿವಿಯ ಹಿಂದೆಯೇ ಇದೆ ಅದರ ಮ್ಯಾಜಿಕ್ ಬಟನ್!

4. ಸೆಣಬಿನ ಬೀಜಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ಸಾಕಷ್ಟು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇವು ಮೆದುಳನ್ನು ಚುರುಕುಗೊಳಿಸುವ ಕೆಲಸ ಮಾಡುತ್ತವೆ. ಹೀಗಿರುವಾಗ  ಸೆಣಬಿನ ಬೀಜಗಳನ್ನು ಸೇವಿಸುವುದರಿಂದ ನೀವು ಮತ್ತಷ್ಟು ಚುರುಕಾಗಬಹುದು.


ಇದನ್ನೂ ಓದಿ-Green Papaya Benefits: ಹಸಿರು ಪಪ್ಪಾಯಿ ಸೇವನೆಯ 5 ಪ್ರಮುಖ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?

5. ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ನಿಂದ ಸಮೃದ್ಧವಾಗಿವೆ, ಇವು ಮೆದುಳನ್ನು ಚುರುಕುಗೊಳಿಸಲು ಕೆಲಸ ಮಾಡುತ್ತವೆ. ಹೀಗಾಗಿ, ನೀವು ಸೂರ್ಯಕಾಂತಿ ಬೀಜಗಳನ್ನು ನಿತ್ಯ ಸೇವಿಸಿದರೆ, ನಿಮ್ಮ ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ ಮತ್ತು ಮೆದುಳು ಕೂಡ ಚುರುಕಾಗುತ್ತದೆ.


ಇದನ್ನೂ ಓದಿ-Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ, ತೂಕ ಇಳಿಕೆಗೆ ಲಾಭಕಾರಿ ಈ ಹಿಟ್ಟು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.