Neera Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೈಸರ್ಗಿಕ ಜ್ಯೂಸ್!

Palm Juice: ಖಜೂರಿ ಅಥವಾ ತೆಂಗಿನ ಮರದಿಂದ ಹೊರಬರುವ ತಾಡಿ ರಸ, ತಾಳೆ ರಸ ಅಥವಾ ನೀರಾ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಟಿಬಿ ಕಾಯಿಲೆ ನಿವಾರಣೆಯ ಜೊತೆಗೆ ಮೂತ್ರ ಉರಿತ ಸಮಸ್ಯೆ ನಿವಾರಣೆ  ಹಾಗೂ ತೂಕ ಹೆಚ್ಚಳಕ್ಕೂ ಕೂಡ ನೀವು ನೀರಾವನ್ನು ಬಳಸಬಹುದು.  

Written by - Nitin Tabib | Last Updated : Feb 9, 2023, 10:07 PM IST
  • ಈ ಜ್ಯೂಸ್ ಟಿಬಿ ಕಾಯಿಲೆಯ ಜೊತೆಗೆ ಇನ್ನೂ ಅನೇಕ ಪ್ರಮುಖ ಕಾಯಿಲೆಗಳಿಗೆ ಔಷಧಿಯಂತಿದೆ.
  • ಇದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಮತ್ತು
  • ಇದನ್ನು ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ
Neera Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೈಸರ್ಗಿಕ ಜ್ಯೂಸ್! title=
ನೀರಾ ಸೇವನೆಯ ಆರೋಗ್ಯ ಲಾಭಗಳು!

Neera Health Benefits: ತಾಡಿ ಅಂದರೆ ನೀರಾ ಆರೋಗ್ಯಕ್ಕೆ ಒಂದು ವರದಾನವಿದ್ದಂತೆ. ನೀರಾ ಎಂದರೆ ನೀರು, ಸಾಕಷ್ಟು ನೀರಿನಿಂದ ಕೂಡಿದ ಪದಾರ್ಥ. ಇದು ರುಚಿಯಲ್ಲಿ ಸಿಹಿಯಾಗಿದ್ದರೂ ಕೂಡ ಅದು ನೈಸರ್ಗಿಕ ಸಿಹಿಯಾಗಿದೆ, ಇದು ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ತೆಂಗಿನಕಾಯಿ ಮತ್ತು ಖರ್ಜೂರದ ಮರಗಳಿಂದ ಹೊರಬರುವ ತಾಜಾ ರಸವನ್ನು ನೀರಾ (ತಾಳೆರಸ) ಎಂದು ಕರೆಯಲಾಗುತ್ತದೆ. ಈ ಜ್ಯೂಸ್ ಟಿಬಿ ಕಾಯಿಲೆಯ ಜೊತೆಗೆ ಇನ್ನೂ ಅನೇಕ ಪ್ರಮುಖ ಕಾಯಿಲೆಗಳಿಗೆ ಔಷಧಿಯಂತಿದೆ. ಇದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಮತ್ತು ಇದನ್ನು ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ

ತಾಳೆ ರಸದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ರಂಜಕ ಕಂಡುಬರುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಇತ್ಯಾದಿಗಳು ನೀರಾದಲ್ಲಿವೆ. ದೇಹದಲ್ಲಿ ನೀರಿನ ಕೊರತೆ, ಅಥವಾ ನಿರ್ಜಲೀಕರಣ ಉಂಟಾದಾಗ ತಾಳೆ ನೀರನ್ನು ಕುಡಿಯುವುದರಿಂದ ನೀರಿನ ಕೊರತೆಯನ್ನು ನೀಗಿಸಬಹುದು. ತಾಡಿ ರಸದಿಂದ ತಯಾರಿಸಲಾಗುವ ಬೆಲ್ಲವನ್ನು ಖಜೂರ್ ಬೆಲ್ಲ ಎಂದು ಕರೆಯಲಾಗುತ್ತದೆ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.

ಮೂತ್ರದಲ್ಲಿನ ಉರಿತ ಸಮಸ್ಯೆ ನಿವಾರಣೆ
ಅನೇಕ ಜನರು ಮೂತ್ರದಲ್ಲಿ ಉರಿತದ ಸಂವೇದನೆಯನ್ನು ಹೊಂದಿರುತ್ತಾರೆ, ಇದರರ್ಥ ದೇಹದಲ್ಲಿ ಯಾವುದೇ ಸೋಂಕು ಅಥವಾ ನೀರಿನ ಕೊರತೆ ಉಂಟಾಗಿದೆ ಎಂದರ್ಥ. ಇಂತಹ ಪರಿಸ್ಥಿತಿಯಲ್ಲಿ, ತಾಳೆ ನೀರು ತುಂಬಾ ಪ್ರಯೋಜನಕಾರಿಯಾಗಿದೆ.

ಟಿಬಿ ರೋಗ ನಿವಾರಣೆ
ಟಿಬಿಯಂತಹ ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ ಜನರು ಏನೆಲ್ಲಾ ಮಾಡುವುದನ್ನು ನೀವು ನೋಡಬಹುದು. ಈ ರೋಗದಿಂದ ಮುಕ್ತಿ ಪಡೆಯಲು ನೀವು ನೀರಾವನ್ನೂ ಕೂಡ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಟಿಬಿಯಂತಹ ರೋಗಗಳು ಮೂಲದಿಂದ ನಿರ್ಮೂಲನೆಯಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಜಾಂಡೀಸ್ ರೋಗಿಗಳಿಗೆ ಇದನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.

ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ನೀರಾ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದ ದೃಷ್ಟಿ ತೀಕ್ಷ್ಣವಾಗುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ನೀರಾ ಸೇವಿಸಿ, ಇದು ಹೊಟ್ಟೆಯನ್ನು ಶುಚಿಗೊಳಿಸುತ್ತದೆ ಮತ್ತು ಹೊಟ್ಟೆ ಉರಿ ಉಂಟಾಗುವುದಿಲ್ಲ, ಮಲಬದ್ಧತೆ ಹಾಗೂ ಅಸಿಡಿಟಿ ಸಮಸ್ಯೆಗಳೂ ಕೂಡ ಇದರಿಂದ ನಿವಾರಣೆಯಾಗುತ್ತವೆ ಮತ್ತು  ಹೊಟ್ಟೆ ತಂಪಾಗುತ್ತದೆ

ದೇಹದಲ್ಲಿ ರಕ್ತದ ಕೊರತೆಯಿದ್ದರೆ ನೀರಾ ಸೇವಿಸಿ, ನೀರಾ ಸೇವನೆಯಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ, ಇದರಿಂದಾಗಿ ಅವರು ಹೆರಿಗೆಯ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹೀಗಾಗಿ ದೇಹದಲ್ಲಿ ಸಾಕಷ್ಟು ಪ್ರಮಾಣದ ರಕ್ತವನ್ನು ಕಾಪಾಡಿಕೊಳ್ಳಲು ನೀವು ನೀರಾವನ್ನು ಸೇವಿಸಬೇಕು.

ಇದನ್ನೂ ಓದಿ-Piles Remedy: ಪೈಲ್ಸ್ ನೋವಿನಿಂದ ಭಾರಿ ಪರಿಹಾರ ಒದಗಿಸುತ್ತದೆ ಮನೆಮದ್ದು

ಕಡಿಮೆ ತೂಕದ ಸಮಸ್ಯೆ ಹೊಂದಿದವರು ಇದನ್ನು ಸೇವಿಸಿದರೆ, ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದರೆ ನೀವು ಕೇವಲ ಒಂದರಿಂದ ಎರಡು ಗ್ಲಾಸ್ಗಳನ್ನು ಮಾತ್ರ ಸೇವಿಸಬೇಕು ಎಂಬುದನ್ನು ನೆನಪಿನಲ್ಲಿಡಿ, ಪ್ರಮಾಣಕ್ಕಿಂತ ಹೆಚ್ಚು ಕುಡಿಯುವುದು ಅಮಲೇರಿದ ಅಮಲೇರಿದ ಅನುಭವ ನೀಡುತ್ತದೆ ಮತ್ತು ಇದು ಹಾನಿಯನ್ನುಂಟು ಮಾಡುತ್ತದೆ.

ಇದನ್ನೂ ಓದಿ-Weight Loss Juice: ತೂಕ ಇಳಿಕೆಗೆ ಈ ವಿಶೇಷ ಜ್ಯೂಸ್ ನಿಮ್ಮ ಆಹಾರದಲ್ಲಿರಲಿ!

ಇದರ ರಸದಿಂದ ಅನೇಕ ಸಿಹಿ ಪದಾರ್ಥಗಳನ್ನೂ ತಯಾರಿಸಲಾಗುತ್ತದೆ, ನೈಸರ್ಗಿಕ ಮಾಧುರ್ಯತೆಯಿಂದಾಗಿ, ಇದಕ್ಕೆ ನೀವು ಯಾವುದೇ ರೀತಿಯ ಹೆಚ್ಚುವರಿ ಸಿಹಿಕಾರಕವನ್ನು ಸೇರಿಸಬೇಕಾಗಿಲ್ಲ.

ಇದನ್ನೂ ಓದಿ-Health Care Tips: ಹಾಲಿನ ಚಹಾ ಜೊತೆಗೆ ಮರೆತೂ ಕೂಡ ಈ ಪದಾರ್ಥಗಳ ಸೇವನೆ ಬೇಡ, ಇಲ್ದಿದ್ರೆ ಆಸ್ಪತ್ರೆ ಅಲೆದಾಟ ತಪ್ಪಲ್ಲ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News