Belly Fat Reduce Tips: ಸಾಕಷ್ಟು ಬದಲಾವಣೆಯನ್ನು ಕಂಡಿರುವ ಇಂದಿನ ಜೀವನಶೈಲಿಯಲ್ಲಿ ಹೆಚ್ಚಿನ ಜನರಿಗೆ ವ್ಯಾಯಾಮ ಮಾಡಲು ಸಮಯವೇ ಸಿಗುತ್ತಿಲ್ಲ. ಈ ಕಾರಣದಿಂದಾಗಿ, ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅದರಲ್ಲೂ ಹೊಟ್ಟೆಯ ಬಳಿ ಕೊಬ್ಬು ಶೇಖರಣೆಯಾಗಲು ಶುರುವಾಗುತ್ತದೆ ಮತ್ತು ಅದನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟಸಾಧ್ಯ ಎನಿಸಲಾರಂಭಿಸುತ್ತದೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ದರೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಹಾಸಿಗೆಯ ಮೇಲಿದ್ದುಕೊಂಡೆ ನೀವು ಮಾಡುವ ಕೆಲವು ವ್ಯಾಯಾಮಗಳ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ. ಯಾವ ವ್ಯಾಯಾಮಗಳನ್ನು ನೀವು ಮಲಗಿದ್ದುಕೊಂಡೆ ಮಾಡಬಹುದು ಮತ್ತು ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ತಿಳಿದುಕೊಳ್ಳೋಣ ಬನ್ನಿ.

COMMERCIAL BREAK
SCROLL TO CONTINUE READING

ಹಾಸಿಗೆಯ ಮೇಲೆ ಮಲಗಿಯೇ ಈ ಕೆಲಸ ಮಾಡಿ ತೂಕ ಇಳಿಸಿಕೊಳ್ಳಿ
ವಿಂಡ್ ಷೀಲ್ಡ್ ವೈಪರ್ ಗಳು

ಈ ವ್ಯಾಯಾಮ ಮಾಡುವುದರಿಂದ ಕಾಲು ಮತ್ತು ತೊಡೆಯ ಕೊಬ್ಬು ಕಡಿಮೆಯಾಗುತ್ತದೆ. ಇದರ ಜೊತೆಗೆ, ಹೊಟ್ಟೆಯ ಭಾಗದ  ಕೊಬ್ಬು ಕೂಡ ಕರಗುತ್ತದೆ. ಇದನ್ನು ಮಾಡಲು, ಹಾಸಿಗೆಯ ಮೇಲೆ ಮಲಗಿ, ಎರಡೂ ಕಾಲುಗಳನ್ನು 90 ಡಿಗ್ರಿ ಕೋನದಲ್ಲಿ ಇರಿಸಿ. ಅದರ ನಂತರ ಅದನ್ನು ವೈಪರ್‌ನಂತೆ ಎಡ ಮತ್ತು ಬಲಕ್ಕೆ ಸರಿಸಿ. ಈ ವ್ಯಾಯಾಮವನ್ನು ಆರಂಭದಲ್ಲಿ ಸ್ವಲ್ಪ ಸಮಯದವರೆಗೆ ಮಾತ್ರ ಮಾಡಿ. ಹೀಗೆ ಮಾಡುವುದರಿಂದ ನಿಮಗೆ ಸಂಪೂರ್ಣ ಲಾಭ ಸಿಗಲಿದೆ.

ಲೆಗ್ ರೇಜ್ 
ಈ ವ್ಯಾಯಾಮವು ಕಾಲುಗಳ ಬಲವನ್ನು ಹೆಚ್ಚಿಸುತ್ತದೆ. ಇದಲ್ಲದೆ ಇದು ಹೊಟ್ಟೆಯ ಭಾಗದ ಮೇಲಿನ ಕೊಬ್ಬಿನ ಮೇಲೆ ಪರಿಣಾಮ ಬೀರುತ್ತದೆ. ಇದೇ ವೇಳೆ, ಕಾಲುಗಳನ್ನು ಎತ್ತುವ ಸಂದರ್ಭದಲ್ಲಿ ಕಿಬ್ಬೊಟ್ಟೆಯ ಸ್ನಾಯುಗಳಲ್ಲಿ ನಿರ್ಮಾಣಗೊಳ್ಳುತ್ತದೆ. ಇದರಿಂದಾಗಿ ಆಭಾಗದ ಕೊಬ್ಬು ಸುಡುತ್ತದೆ. ಈ ವ್ಯಾಯಾಮವನ್ನು ಮಾಡಲು, ನೇರವಾಗಿ ಹಾಸಿಗೆಯ ಮೇಲೆ ಮಲಗಿಕೊಳ್ಳಿ. ಈಗ ಕಾಲುಗಳನ್ನು ಒಟ್ಟಿಗೆ ಸೇರಿಸಿ ಮತ್ತು ಮೇಲಕ್ಕೆ ಎತ್ತಿ. ಕಾಲನ್ನು ಎತ್ತುವಾಗ 45 ಡಿಗ್ರಿ ಕೋನವನ್ನು ಮಾಡಿ. ಈಗ ಕಾಲನ್ನು ಎತ್ತಿ ಸುಮಾರು ಎರಡರಿಂದ ಮೂರು ನಿಮಿಷ ಮತ್ತು ನಂತರ 5 ನಿಮಿಷಗಳ ಕಾಲ ಹಿಡಿದುಕೊಳ್ಳಿ. ಕ್ರಮೇಣ ಸಮಯವನ್ನು ಹೆಚ್ಚಿಸುವಾಗ, ಅದನ್ನು 15 ನಿಮಿಷಗಳ ಕಾಲ ಮಾಡಿ.


ಇದನ್ನೂ ಓದಿ-ತೂಕ ಇಳಿಕೆಗೆ ಮಾಡಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಒಂದು ಅದ್ಭುತ ಪಾನೀಯ!

ಕ್ರಂಚಸ್
ನಿಮ್ಮ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಕ್ರಂಚಸ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದನ್ನು ಮಾಡಲು, ನೇರವಾಗಿ ಮಲಗಿ. ನಂತರ ಕೈಗಳನ್ನು ತಲೆಯ ಹಿಂದೆ ಇರಿಸಿ ಮತ್ತು ಪಾದಗಳನ್ನು 45 ಡಿಗ್ರಿಯಲ್ಲಿ ಇರಿಸಿ ದೇಹವನ್ನು ಅರ್ಧದಷ್ಟು ಮೇಲಕ್ಕೆತ್ತಿ. ಹೀಗೆ ಮಾಡುವುದರಿಂದ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತದೆ.


ಇದನ್ನೂ ಓದಿ-Anti-Hairfall Oil: ಈ ಎಣ್ಣೆ ಹಚ್ಚಿ ಕೇವಲ 5 ನಿಮಿಷ ಮಸಾಜ್ ಮಾಡಿ, ಕೂದಲುದುರುವಿಕೆ ತಕ್ಷಣ ನಿಂತ್ಹೋಗುತ್ತದೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.