ಜಂಕ್ ಫುಡ್, ಸರಿಯಾದ ಆಹಾರ ಕ್ರಮವಿಲ್ಲದ ಕಾರಣ, ಸರಿಯಾದ ವೇಳೆಗೆ ನೀರಿನ ಕುಡಿಯುವುದಿಲ್ಲ ಇದರಿಂದ ಯದ್ವತದ್ವಾ ಮನುಷ್ಯ ದೇಹ ತೂಕ ಜಾಸ್ತಿ ಆಗುತ್ತಿದೆ. ಇದು ಬರಿ ಯುವಕ ಯುವತಿಯರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿ ಕೂಡ ಬೊಜ್ಜಿನ ಸಮಸ್ಯೆ ಕಂಡು ಬರುತ್ತಿದೆ. ಈ ಬೊಜ್ಜನ ಇಳಿಸಲು ಜನ ಎಲ್ಲ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಜಿಮ್ ಗೆ ಹೋಗುವುದು, ಉಪವಾಸ ಮಾಡುವುದು ಮಾಡುತ್ತಿದ್ದಾರೆ. ಇವೆಲ್ಲ ದೇಹ ತೂಕ ಇಳಿಸುವ ಕ್ರಮವಾದರೆ, ಇವುಗಳ ಜೊತೆಗೆ ನೀರು ಕುಡಿಯುವುದು ಕೂಡ ಬಹಳ ಮಹತ್ವದಾಗಿದೆ. 


COMMERCIAL BREAK
SCROLL TO CONTINUE READING

ನೀರಿನ ಉಪವಾಸ ಎಂದರೇನು? ನೀರಿಲ್ಲದ ಉಪವಾಸ ಎಂದರೆ ಒಂದು ಹನಿ ನೀರ(Water)ನ್ನು ಸಹ ಕುಡಿಯದೆ ಹಾಗೆ ಇರುವುದು. ಈ ಉಪವಾಸದಲ್ಲಿ  ಹಣ್ಣುಗಳನ್ನು ಮಾತ್ರ ಸೇವಿಸಬೇಕು. ಆದ್ರೆ ನೀರನ್ನು ಕುಡಿಯುವ ಹಾಗಿಲ್ಲ.  ಹೆಲ್ತ್  ವೆಬ್‌ಸೈಟ್ ಮೆಡಿಕಲ್ ನ್ಯೂಸ್ ಟುಡೆ ಪ್ರಕಾರ, ನೀರಿನ ಉಪವಾಸವನ್ನು ಸಾಮಾನ್ಯವಾಗಿ 1 ರಿಂದ 3 ದಿನಗಳವರೆಗೆ ಮಾಡಬಹುದು ಎಂದು ತಿಳಿಸಿದೆ.


ಇದನ್ನೂ ಓದಿ : Clove Benefits: ಪ್ರತಿದಿನ ರಾತ್ರಿ 2 ಲವಂಗ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳು ಗೋತ್ತಾ?


ಹೀಗೆ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನ(Fat) ಅಂಶ ಬೇಗ ಬರ್ನ್ ಆಗುತ್ತದೆ. ಇದರಿಂದ ದೇಹ ತೂಕ ಇಳಿಕೆ ಅಷ್ಟೇ ಅಲ್ಲದೆ ಹೊಟ್ಟೆಯನ್ನು ಕೂಡ ಸ್ವಚ್ಛವಾಗಿಡುತ್ತದೆ. ನೀರು ದೇಹದಲ್ಲಿರುವ ವಿಷವನ್ನು ಕೂಡ ಹೊರ ಹಾಕಲು ಬಹಳ ಸಹಾಯ ಮಾಡುತ್ತದೆ. ನೀರನ್ನು ಉಪವಾಸ ಮಾಡುವಾಗ ದೇಹದಲ್ಲಿ ಕಾರ್ಬೋಹೈಡ್ರೇಟ್ ಅನ್ನು ಶಕ್ತಿಯಾಗಿ ಬಳಸುವುದಿಲ್ಲ, ಈ ಕಾರಣದಿಂದಾಗಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಗಾಗಿ ಬಳಸಲಾಗುತ್ತದೆ ಇದರಿಂದ ದೇಹದ ಕೊಬ್ಬು ಸುತ್ತು ತೂಕ ಇಳಿಕೆಯಾಗುತ್ತದೆ.


ಇದನ್ನೂ ಓದಿ : Blood Cancer Signs: ನಿಮಗೂ ಈ ಲಕ್ಷಣಗಳಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ


ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನೀರಿನ ಉಪವಾಸವನ್ನು ಸರಿಯಾಗಿ ಮಾಡಿದರೆ ಪ್ರತಿದಿನ ಕನಿಷ್ಠ 900 ಗ್ರಾಂಗಳಷ್ಟು ದೇಹದ ತೂಕವನ್ನು ಕಡಿಮೆ(Weight Loss) ಮಾಡಬಹುದು ಎಂದು ಹೇಳಾಗಿದೆ.  ಹಾಗಾಗಿ ನೀವು ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ಮಾತ್ರ ಕುಡಿಯಬಹುದು. ಉಪವಾಸ ಮಾಡುವಾಗ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ. ಈ ವೇಳೆ ದೇಹ ದಂಡಿಸುವ ಯಾವುದೇ ಕೆಲಸಗಳನ್ನು ಮಾಡಬೇಡಿ. ಇದರಿಂದ ನಿಮ್ಮ ದೇಹ ದೌರ್ಬಲ್ಯಕ್ಕೆ ಒಳಗಾಗುತ್ತದೆ.


ಇದನ್ನೂ ಓದಿ : Hapatitis ಲಸಿಕೆಯಿಂದ Corona ಚಿಕಿತ್ಸೆ ಸಾಧ್ಯ? DCGI ಅನುಮತಿ ಕೋರಿದ Zydus Cadila


ಕೇವಲ ನೀರು ಕುಡಿಯುವುದು ಸುರಕ್ಷಿತವೇ? ಸಡನ್ ಆಗಿ ಕ್ಯಾಲೋರಿ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದಾಗ, ದೇಹದ ತೂಕವು ಕೂಡ ಅಷ್ಟೇ  ವೇಗವಾಗಿ ಇಳಿಯಲು ಪ್ರಾರಂಭವಾಗುತ್ತದೆ. ಆದರೆ, ಈ ಉಪವಾಸ(Water Fasting) ದೀರ್ಘಕಾಲ ಮಾಡಬಾರದು. ಇದರಿಂದ ಪ್ರಾಣಕ್ಕೆ ಅಪಾಯ ಬರುವ ಸಂಭವಿದೆ. ಇದನ್ನು ಮಾಡುವಾಗ ಅಶಕ್ತರಾದ ಹಾಗೆ ತಲೆತಿರುಗುವಿಕೆ ಅಥವಾ ಕಿರಿಕಿರಿ ಅಂತಹ ಸಮಸ್ಯೆಗಳನ್ನು ಸಹ ಅನುಭವಿಸಬೇಕಾಗುತ್ತದೆ.


ಇದನ್ನೂ ಓದಿ : Critical Health Insurance Policy ಬಗ್ಗೆ ನಿಮಗೆಷ್ಟು ತಿಳಿದಿದೆ?


ಈ ವಯಸ್ಸಿನವರು ನೀರಿನ ಉಪವಾಸವನ್ನು ಮಾಡಬಾರದು:18 ವರ್ಷದೊಳಗಿನವರು ಅಥವಾ 60 ವರ್ಷ ಮೇಲ್ಪಟ್ಟವರು ಈ ನೀರಿನ ಉಪವಾಸವನ್ನು ಮಾಡಬಾರದು. ಇದಲ್ಲದೆ,  ಗರ್ಭಿಣಿ ಮಹಿಳೆ(Pregnant Women)ಯರು, ಮಗುವಿಗೆ ಹಾಲುಣಿಸುವ ಮಹಿಳೆಯರು, ಕಡಿಮೆ ದೇಹ ತೂಕ ಹೊಂದಿದವರು, ಹೃದಯ ಸಮಸ್ಯೆ ಇರುವವರು, ಡಯಾಬಿಟಿಸ್ ಅಥವಾ ಯಾವುದೇ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ನೀವು ನೀರಿನ ಉಪವಾಸವನ್ನು ಮಾಡಬಾರದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.