Hapatitis ಲಸಿಕೆಯಿಂದ Corona ಚಿಕಿತ್ಸೆ ಸಾಧ್ಯ? DCGI ಅನುಮತಿ ಕೋರಿದ Zydus Cadila

Coronavirus News - ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಔಷಧಿ ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಕೋವಿಡ್ -19 ಚಿಕಿತ್ಸೆಗೆ ಸಂಬಂಧಿಸಿದಂತೆ ಉತ್ತೀಜನಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು Zydus Cadila ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Written by - Nitin Tabib | Last Updated : Apr 5, 2021, 02:01 PM IST
  • ಹೆಪಟೈಟಸ್ ಲಸಿಕೆ ಕೊರೊನಾ ಚಿಕಿತ್ಸೆಯಲ್ಲಿ ಸಕಾರಾತ್ಮಕ ಫಲಿತಾಂಶ.
  • ಕೊವಿಡ್-19 ಚಿಕಿತ್ಸೆಗಾಗಿ DCGI ಅನುಮತಿ ಕೋರಿದ Zydus Cadila.
  • ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಜೈಡಸ್ ಕ್ಯಾಡಿಲಾ.
Hapatitis ಲಸಿಕೆಯಿಂದ Corona ಚಿಕಿತ್ಸೆ ಸಾಧ್ಯ? DCGI ಅನುಮತಿ ಕೋರಿದ Zydus Cadila title=
Coronavirus News (File Photo)

ನವದೆಹಲಿ: Coronavirus News - ಖ್ಯಾತ ಔಷಧಿ ತಯಾರಕ ಕಂಪನಿ Zydus Cadila ಹೆಪಟೈಟಿಸ್ ಚಿಕಿತ್ಸೆಗೆ ಬಳಸುವ ಔಷಧಿಯಾಗಿರುವ ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ -2 ಬಿ (Pegylated Interferon Alfa-2B) ಅನ್ನು Covid-19 ಚಿಕಿತ್ಸೆಗೆ ಬಳಸಲು  ಅನುಮತಿ ಕೋರಿ ಭಾರತದ ಔಷಧ ನಿಯಂತ್ರಕ ಪ್ರಾಧಿಕಾರಕ್ಕೆ (DCGI)ಪತ್ರ ಬರೆದಿದೆ.  ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಜೈಡಸ್ ಕ್ಯಾಡಿಲಾ, ಪೆಗಿಲೆಟೆಡ್ ಇಂಟರ್ ಫೆರಾನ್ ಅಲ್ಫಾ 2 ಔಷಧಿ ತನ್ನ ಮೂರನೇ ಹಂತದೆ ಪರೀಕ್ಷೆಯ ವೇಳೆ ಕೊವಿಡ್ 19 ಚಿಕಿತ್ಸೆಗಾಗಿ ಉತ್ತೆಜನಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು ಹೇಳಿಕೊಂಡಿದೆ.

Hepatitis ಚಿಕಿತ್ಸೆಗಾಗಿ ಬಳಸಲಾಗುವ ಈ ಔಷಧಿಯನ್ನು ಕಂಪನಿ 'ಪೆಗಿಹೆಪ್' ಬ್ರಾಂಡ್ ಹೆಸರಿನಿಂದ ಮಾರಾಟ ಮಾಡುತ್ತದೆ. ಈ ಕುರಿತು ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿರುವ ಕಂಪನಿ ಈ ಔಷಧಿಯ ಆರಂಭಿಕ ಪರೀಕ್ಷೆಯ ಫಲಿತಾಂಶಗಳು ಬಹಿರಂಗಗೊಂಡಿದ್ದು, ಇದರಲ್ಲಿ ಆರಂಭಿಕ ಹಂತದಲ್ಲಿ ಈ ಔಷಧಿಯನ್ನು ಬಳಸಿದರೆ, Covid-19 ರೋಗಿ ವೇಗವಾಗಿ ಗುಣಮುಖನಾಗುತ್ತಾನೆ. ಇದಲ್ಲದೆ ರೋಗಿಗೆ ಇದರಿಂದ ಯಾವುದೇ ಅಡ್ಡಪರಿಣಾಮಗಳು ಕೂಡ ಉಂಟಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ- Sputnik-5 ಲಸಿಕೆಯ ತುರ್ತುಬಳಕೆಗೆ ಶೀಘ್ರವೇ ಭಾರತ ಅನುಮತಿ ನೀಡುವ ಸಾಧ್ಯತೆ

ಜೆನರಿಕ್ ಕೊವಿಡ್ -19 ಬೆಲೆಯನ್ನು ಇಳಿಕೆ ಮಾಡಿದ Zydus Cadila
ಇದಕ್ಕೂ ಮೊದಲು ಮಾರ್ಚ್ ತಿಂಗಳಿನಲ್ಲಿ ಜೈಡಸ್ ಕ್ಯಾಡಿಲಾ ರೆಮ್ಡಿಸಿವೀರ್ ಔಷಧಿಯ ಜೆನರಿಕ್ ಔಷಧಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ ಕಂಪನಿ ಕೊವಿಡ್-19 ಔಷಧಿಯ ಜೆನರಿಕ್ ಸಂಸ್ಕರಣದ ಬೆಲೆಯನ್ನು ರೂ.899 ಪ್ರತಿ ಬಾಟಲಗೆ ಇಳಿಕೆ ಮಾಡಿತ್ತು. ಆಗಸ್ಟ್ 2019ರಲ್ಲಿ ಕಂಪನಿ ರೆಮ್ಡಿಸಿವೀರ್ ಔಷಧಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಆ ಅವಧಿಯಲ್ಲಿ ಇಂಜೆಕ್ಷನ್ ರೂಪದಲ್ಲಿ ನೀಡಲಾಗುತ್ತಿದ್ದ ಈ ಔಷಧಿಯ 100mg ಬಾಟಲಿಯ ಬೆಲೆ ರೂ.2800 ಗಳಷ್ಟಿತ್ತು.

ಇದನ್ನೂ ಓದಿ-Coronavirus Second Wave: ಪುನಃ ಗತಿ ಪಡೆದುಕೊಂಡ ಕೊರೊನಾ, ಈ ಐದು ವಿಧಾನ ಅನುಸರಿಸಿ ವೈರಸ್ ನಿಂದ ಪಾರಾಗಿ

ಕಳೆದ ಮಾರ್ಚ್ 24ರಂದು ಹೇಳಿಕೆ ಬಿಡುಗಡೆ ಮಾಡಿದ್ದ Zydus Cadila ಕೊವಿಡ್-19 ಚಿಕಿತ್ಸೆಯಲ್ಲಿ ರೆಮ್ಡಿಸಿವೀರ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಹೇಳಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಈ ಔಷಧಿ ರೋಗಿಗಳಿಗೆ Coronavirus ವಿರುದ್ಧ ಹೋರಾಡಲು ಭಾರಿ ಸಹಾಯ ಮಾಡಲಿದೆ ಎಂದು ಕಂಪನಿ ಹೇಳಿತ್ತು.

ಇದನ್ನೂ ಓದಿ- SBI Life Poorna Suraksha Policy: SBIನ ಈ ವಿಶೇಷ ಪಾಲಸಿಯಲ್ಲಿ ನಿತ್ಯ 100 ಹೂಡಿಕೆ ಮಾಡಿದರೆ 2.5 ಕೋಟಿ ರೂ. ಕವರ್ ಸಿಗುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News