ಹಲವು ಚರ್ಮ ಸಮಸ್ಯೆಗಳಿಗೆ ರಾಮಬಾಣ ಉಪಾಯ ಈ ಗಿಡದ ಎಳೆಗಳ ನೀರು, ಇಂದೇ ಟ್ರೈ ಮಾಡಿ ನೋಡಿ!
Skin Care Tips: ಒಂದು ವೇಳೆ ನೀವೂ ಕೂಡ ಮುಖದ ತ್ವಚೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ನಿತ್ಯ ಬೇವಿನ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಬಹುದು.
Washing Face With Neem Benefits: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಮುಖದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇನ್ನೂಂದೆಡೆ ಮುಖದ ಚರ್ಮಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ತೊಡೆದುಹಾಕಲು ಜನರು ಏನೆಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೂ ಕೂಡ ಅವರಿಗೆ ಬೇಕಾದ ಪರಿಣಾಮ ಕಂಡುಬರುತ್ತಿಲ್ಲ. ಚರ್ಮಕ್ಕೆ ಸಂಬಂಧಿಸಿದ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಬೇವಿನ ನೀರು ತುಂಬಾ ಪ್ರಯೋಜನಕಾರಿ ಸಾಬೀತಾಗುತ್ತದೆ. ಹೌದು, ಬೇವಿನ ನೀರಿನಿಂದ ನಿತ್ಯ ನಿಮ್ಮ ಮುಖವನ್ನು ತೊಳೆದರೆ ನಿಮಗೆ ಹಲವು ಲಾಭಗಳು ಸಿಗಲಿವೆ. ಹಾಗಾದರೆ ಬನ್ನಿ, ಬೇವಿನ ನೀರಿನಿಂದ ಮುಖ ತೊಳೆದರೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಬೇವಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯುವುದರಿಂದ ಆಗುವ ಪ್ರಯೋಜನಗಳು
ತ್ವಚೆಯ ಅಲರ್ಜಿ ನಿವಾರಣೆಯಾಗುತ್ತದೆ
ಬೇವು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಚರ್ಮದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಅದು ಸಹಕರಿಸುತ್ತದೆ. ಹೀಗಾಗಿ ಬೇವಿನ ನೀರಿನಿಂದ ನಿತ್ಯ ನಿಮ್ಮ ಮುಖವನ್ನು ತೊಳೆದರೆ ಚರ್ಮದ ಅಲರ್ಜಿ, ದದ್ದು, ತುರಿಕೆ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮೊಡವೆಗಳನ್ನು ತೊಡೆದುಹಾಕುತ್ತದೆ
ಬೇವಿನ ನೀರಿನಿಂದ ಮುಖ ತೊಳೆದರೆ ಮೊಡವೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಏಕೆಂದರೆ ಇದು ಚರ್ಮದ ಮೇಲೆ ಇರುವ ಕೊಳೆ ಮತ್ತು ಜಿಡ್ಡನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮೊಡವೆಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಒಂದು ವೇಳೆ ನೀವೂ ಕೂಡ ಮೊಡವೆ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ಬೇವಿನ ನೀರಿನಿಂದ ನಿಮ್ಮ ಮುಖವನ್ನು ಪ್ರತಿನಿತ್ಯ ತೊಳೆದುಕೊಲ್ಲಬಹುದು.
ಎಣ್ಣೆಯುಕ್ತ ಮತ್ತು ಒಣ ಚರ್ಮ ಎರಡಕ್ಕೂ ಚಿಕಿತ್ಸೆ ನೀಡುತ್ತದೆ
ಬೇವಿನಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಸಹಾಯ ಮಾಡುತ್ತದವೆ. ಇದು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಿ ಚರ್ಮವನ್ನು ಮೃದುಗೊಳಿಸುತ್ತದೆ.
ಇದನ್ನೂ ಓದಿ-ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಮಧುಮೇಹಕ್ಕೆ ಮಾರಕ ಈ ಹಸಿರು ತರಕಾರಿ! ಇಂದೇ ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ
ಕಪ್ಪು ಕಲೆ ನಿವಾರಕ
ಬೇವಿನ ನೀರಿನಿಂದ ಮುಖ ತೊಳೆದರೆ, ತ್ವಚೆಯ ಬಣ್ಣ ಸುಧಾರಿಸುತ್ತದೆ, ಮುಖದ ಮೇಲಿನ ಗಾಯದ ಕಲೆಗಳು, ಕಲೆಗಳು, ಟ್ಯಾನಿಂಗ್ ಮತ್ತು ಕಪ್ಪಾಗುವಿಕೆಯನ್ನು ಇದು ನಿವಾರಿಸುತ್ತದೆ. ಹೀಗಾಗಿ ನೀವೂ ಕೂಡ ನಿಮ್ಮ ಮುಖವನ್ನು ಬೇವಿನ ನೀರಿನಿಂದ ತೊಳೆಯಬಹುದು.
ಇದನ್ನೂ ಓದಿ-Diabetes ನಿಯಂತ್ರಿಸಬೇಕೆ? ಇಂದಿನಿಂದಲೇ ಈ 6 ಮನೆ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.