Diabetes ನಿಯಂತ್ರಿಸಬೇಕೆ? ಇಂದಿನಿಂದಲೇ ಈ 6 ಮನೆ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ!

Diabetes Tips: ಇಂದು ನಾವು ನಿಮಗೆ  6 ಮನೆಮದ್ದುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮನೆಯಿಂದಲೇ ನಿಯಂತ್ರಿಸಬಹುದು.  

Written by - Nitin Tabib | Last Updated : Mar 1, 2023, 08:21 PM IST
  • ಮಧುಮೇಹಿಗಳು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳನ್ನು ಸೇವಿಸಬೇಕು.
  • ಮಧ್ಯಾಹ್ನದ ಊಟದಲ್ಲಿ ಲೆಂಟಿಲ್ ಅನ್ನು ನಿಯಮಿತವಾಗಿ ತಿನ್ನಬೇಕು.
  • ನೀವು ಧಾನ್ಯದ ಬ್ರೆಡ್, ಹೊಟ್ಟು ಅಥವಾ ಮಲ್ಟಿಗ್ರೇನ್ ಬ್ರೆಡ್, ಕಂದು ಅಕ್ಕಿ, ಬಾರ್ಲಿಯನ್ನು ಸಹ ಸೇವಿಸಬಹುದು.
Diabetes ನಿಯಂತ್ರಿಸಬೇಕೆ? ಇಂದಿನಿಂದಲೇ ಈ 6 ಮನೆ ಉಪಾಯಗಳನ್ನು ನಿಮ್ಮದಾಗಿಸಿಕೊಳ್ಳಿ! title=
ಮಧುಮೇಹಿಗಳಿಗೆ ಸಲಹೆಗಳು

Diabetes Control Tips: ಊಟ-ಉಪಹಾರಕ್ಕೆ ಸಂಬಂಧಿಸಿದಂತೆ ಮಧುಮೇಹಿಗಳು ಹೆಚ್ಚಿನ ಕಾಳಜಿವಹಿಸಬೇಕಾಗುತ್ತವೆ ಮತ್ತು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಅವರು ಕೇವಲ ಸಿಹಿತಿಂಡಿಗಳನ್ನು ಮಾತ್ರ ತಪ್ಪಿಸದೇ, ಇನ್ನೂ ಅನೇಕ ಆಹಾರಗಳನ್ನು ತ್ಯಜಿಸಬೇಕಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಅಂತಹ 6 ಮನೆಮದ್ದುಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು,  ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.

>> ಕುಂಬಳಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ ಅವು ಲೈಂಗಿಕ ಆರೋಗ್ಯದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಟೆಸ್ಟೋಸ್ಟೆರಾನ್ ಮಟ್ಟವೂ ಉತ್ತಮವಾಗುತ್ತದೆ.

>> ಸಂಶೋಧಕರ ಪ್ರಕಾರ, ಮಧುಮೇಹದಿಂದ ಬಳಲುತ್ತಿರುವವರು ಪ್ರತಿದಿನ 2 ಈರುಳ್ಳಿಯನ್ನು ತೆಗೆದುಕೊಂಡು ಅದರ ಸಾರವನ್ನು ಕುಡಿಯಬಹುದು. ಇದರೊಂದಿಗೆ, ಅವರ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ಜ್ಯೂಸ್ ಕುಡಿದರೆ ಕೂದಲಿನ ಆರೋಗ್ಯವೂ ಉತ್ತಮವಾಗುತ್ತದೆ. ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ.

>> ಮಧುಮೇಹಿಗಳು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳನ್ನು ಸೇವಿಸಬೇಕು. ಮಧ್ಯಾಹ್ನದ ಊಟದಲ್ಲಿ ಲೆಂಟಿಲ್ ಅನ್ನು ನಿಯಮಿತವಾಗಿ ತಿನ್ನಬೇಕು. ನೀವು ಧಾನ್ಯದ ಬ್ರೆಡ್, ಹೊಟ್ಟು ಅಥವಾ ಮಲ್ಟಿಗ್ರೇನ್ ಬ್ರೆಡ್, ಕಂದು ಅಕ್ಕಿ, ಬಾರ್ಲಿಯನ್ನು ಸಹ ಸೇವಿಸಬಹುದು.

>> ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ವಿಶೇಷವಾಗಿ ಮಧುಮೇಹ ರೋಗಿಗಳಿಗೆ. ಇದು ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳನ್ನು ಹೊಂದಿದ್ದು ಅದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ-Health Tips: ಸಕ್ಕರೆ ಕಾಯಿಲೆ ಇರುವವರಿಗೆ ಈ ಸಿಹಿ ಹಣ್ಣು ಒಂದು ವರದಾನವಿದ್ದಂತೆ!

>> ಇದೇ ವೇಳೆ ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು, ಉದಾಹರಣೆಗೆ ಪಾಲಕ್, ಮೆಂತ್ಯ, ಚಂದನ್ ಬತುವಾ, ಕೋಸುಗಡ್ಡೆ, ಬಾಟಲ್ ಸೋರೆಕಾಯಿ, ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ, ಹಾಗಲಕಾಯಿ ಇತ್ಯಾದಿಗಳನ್ನು ಶಾಮೀಳುಗೊಳಿಸಬಹುದು.

ಇದನ್ನೂ ಓದಿ-ಹಸಿರು ಕಾಫಿ ಮತ್ತು ಅದರ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

>> ಮೊಸರು ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಕೂಡ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಉತ್ತಮವಾಗಿಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News