ಬೇಸಿಗೆಯ ಧಗೆಯಿಂದ ಬಚಾವಾಗಲು ಹೇರಳವಾಗಿ ಸಿಗುವ ಹಣ್ಣು ಕಲ್ಲಂಗಡಿ. ಕಲ್ಲಂಗಡಿಯಲ್ಲಿ (Watermelon) ಹೆಚ್ಚಿನ ನೀರಿನಂಶ ಇರುವ ಕಾರಣ ನಾವು ಇದನ್ನು ದಾಹ ತೀರಿಸಿಕೊಳ್ಳಲು ತಿನ್ನುತ್ತೇವೆ. ಹಣ್ಣು ತಿನ್ನುವಾಗ ಬೀಜವನ್ನ ಮಾತ್ರ ಉಗಿಯುತ್ತೇವೆ. ಆದ್ರೆ ಕಲ್ಲಂಗಡಿ ಬೀಜದ ಮಹತ್ವ ತಿಳಿದರೆ ಯಾವುದೇ ಕಾರಣಕ್ಕೂ ಇನ್ಮುಂದೆ ನೀವು ಬೀಜವನ್ನ ಜೋಪಾನ ಮಾಡೋದ್ರಲ್ಲಿ ಅನುಮಾನವಿಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:Skin Care: ಈ 5 ವಸ್ತುಗಳನ್ನು ಮುಖದ ಮೇಲೆ ಅಪ್ಪಿತಪ್ಪಿಯೂ ಹಚ್ಚಬೇಡಿ


ಹೌದು, ಕಲ್ಲಂಗಡಿ ಹಣ್ಣಿನ ಬೀಜದಲ್ಲಿ (Watermelon Seeds) ನೀವು ನಂಬಲಗದಷ್ಟು ಆರೋಗ್ಯಕ್ಕೆ ಬೇಕಾಗುವ ಅಂಶಗಳಿವೆ. ಪ್ರಮುಖವಾಗಿ ಕಲ್ಲಂಗಡಿ ಬೀಜಗಳು ಪ್ರೋಟೀನ್‌, ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಸತು, ತಾಮ್ರ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್‌ ಮುಂತಾದ ಪೋಷಕಾಂಶಗಳಿಂದ ಕೂಡಿರುವುದರಿಂದ ಈ ಎಲ್ಲಾ ಪೋಷಕಾಂಶಗಳು ಮೂಳೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಅವುಗಳ ಖನಿಜ ಸಾಂದ್ರತೆಯನ್ನು ಸುಧಾರಿಸುತ್ತದೆ. ಇದು ನಮ್ಮ ದೇಹಕ್ಕೆ ಆಶ್ಚರ್ಯಕರ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. 


ಕಲ್ಲಂಗಡಿ ಬೀಜಗಳನ್ನು ಸೇವಿಸುವುದು ಹೇಗೆ?


ನೀವು ಕಲ್ಲಂಗಡಿ ಬೀಜಗಳನ್ನು ಕಚ್ಚಾ, ಮೊಳಕೆಯೊಡೆಸಿ ಮತ್ತು ಹುರಿದು ತಿನ್ನಬಹುದು. ಯಾವುದೇ ರೂಪದಲ್ಲಿ ಈ ಬೀಜಗಳು ತುಂಬಾ ಟೇಸ್ಟಿ ಮತ್ತು ಆರೋಗ್ಯಕರ. ಸಾಮಾನ್ಯವಾಗಿ ಕಲ್ಲಂಗಡಿ ಬೀಜಗಳು ಮೊಳಕೆಯೊಡೆದ ನಂತರ  ಪೌಷ್ಟಿಕಾಂಶ ಭರಿತ ಆಹಾರವಾಗಿ ಬಿಡುತ್ತದೆ. ಕೇವಲ ಒಂದು ಕಪ್‌ ಕಲ್ಲಂಗಡಿ ಬೀಜಗಳಲ್ಲಿ ನಿಮ್ಮ ದೈನಂದಿನ ಅವಶ್ಯಕತೆಯ 140%ಕ್ಕಿಂತ ಹೆಚ್ಚು ಮೆಗ್ನೀಸಿಯಮ್‌ ಅನ್ನು ನಂಬಲಾಗದ ರೀತಿಯಲ್ಲಿ ಪೂರೈಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಪ್ರತಿದಿನ ನಮ್ಮ ದೇಹಕ್ಕೆ 420 ಗ್ರಾಂ ಮೆಗ್ನೀಸಿಯಮ್ ಅಗತ್ಯವಿದೆ. 


ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ, ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ನರಮಂಡಲವನ್ನು ಆರೋಗ್ಯಕರವಾಗಿರಿಸುತ್ತದೆ.


ಚರ್ಮದ ಆರೋಗ್ಯಕ್ಕೆ ಉತ್ತಮ:


ಮೊಳಕೆಯೊಡೆದ ಕಲ್ಲಂಗಡಿ ಬೀಜಗಳು (Watermelon seeds)  ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು ಇತ್ಯಾದಿಗಳಿಂದ ತುಂಬಿರುವುದರಿಂದ ನಿಮ್ಮ ಚರ್ಮವನ್ನು (Skin Care) ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರ ಎಣ್ಣೆಯನ್ನು ಮೊಡವೆ ಮತ್ತು ವಯಸ್ಸಾದವರ ಚರ್ಮದಲ್ಲಿ ಕಾಣುವ ಆರಂಭಿಕ ಚಿಹ್ನೆಗಳಿಗೆ ಚಿಕಿತ್ಸೆ ನೀಡಲು ವಿವಿಧ ಸೌಂದರ್ಯ (Beauty Tips) ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಕಲ್ಲಂಗಡಿ ಬೀಜಗಳು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತವೆ. ಇದು ನಿಮ್ಮ ಒಟ್ಟಾರೆ ಚರ್ಮದ ಆರೋಗ್ಯವನ್ನ ಸುಧಾರಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಬೀಜಗಳು ನಿಮ್ಮ ಮಂದ, ಶುಷ್ಕ ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಮುಖದ ಮೇಲೆ ಮೂಡುವ ನೆರಿಗೆ ಇಲ್ಲದಂತಾಗಬೇಕು ಅಂದ್ರೆ ಪ್ರತಿದಿನ ನಿಯಮಿತವಾಗಿ ಕಲ್ಲಂಗಡಿ ಬೀಜಗಳನ್ನ ಸೇವಿಸುತ್ತಾ ಬನ್ನಿ. 


ಇದನ್ನೂ ಓದಿ:ಕೇವಲ ಈ ಒಂದು ವಸ್ತುವನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಶೀಘ್ರ ನಿಯಂತ್ರಣಕ್ಕೆ ಬರುತ್ತದೆ


ಉತ್ತಮ ಕೊಬ್ಬಿನ ಆಗರ:


ಒಳ್ಳೆಯ ಕೊಬ್ಬುಗಳು ಮೊನೊಸಾಚುರೇಟೆಡ್ ಮತ್ತು ಪಾಲಿಅನ್ ಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇವುಗಳನ್ನು ಉತ್ತಮ ಕೊಬ್ಬು ಎಂದು ಕರೆಯಲಾಗುತ್ತದೆ. ಹೃದಯಾಘಾತ, ಪಾರ್ಶ್ವವಾಯು ತಡೆಯಲು ಇದು ಸಹಕಾರಿ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ನಾಲ್ಕು ಗ್ರಾಂ ಕಲ್ಲಂಗಡಿ ಬೀಜಗಳು 0.3 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಮತ್ತು 1.1 ಗ್ರಾಂ ಪಾಲಿಅನ್ಸ್ಯಾಚುರೇಟೆಡ್  ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ.


ತಲೆ ಕೂದಲ ಬಲರ್ವಧನೆಗೆ ಉತ್ತಮ:


ಪ್ರತಿಯೊಬ್ಬರಿಗೂ ಆರೋಗ್ಯಕರ ತಲೆ ಕೂದಲಿರಬೇಕು (Hair Care) ಅನ್ನುವ ಆಸೆ ಇದ್ದೇ ಇರುತ್ತದೆ. ಕಲ್ಲಂಗಡಿ ಬೀಜಗಳಲ್ಲಿರುವ ಪ್ರೋಟೀನ್ ಗಳು, ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ತಾಮ್ರವು ನಿಮ್ಮ ಕೂದಲಿನ ಗುಣಮಟ್ಟವನ್ನು ಸುಧಾರಿಸಿ, ನಿಮ್ಮ ಕೂದಲನ್ನು ಬಲಪಡಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬೀಜಗಳಲ್ಲಿನ ಮ್ಯಾಂಗನೀಸ್ ಕೂದಲು ಉದುರುವಿಕೆ ಮತ್ತು ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಯಾರೆಲ್ಲಾ ಈ ಸಮಸ್ಯೆಯಿಂದ ಹೊರಬರಬೇಕು ಎಂದು ಯೋಚಿಸುತ್ತಿದ್ದೀರಾ ಅವರೆಲ್ಲರೂ ಕೂಡ ಕಲ್ಲಂಗಡಿ ಬೀಜಗಳನ್ನ ನಿಮ್ಮ ಡಾಕ್ಟರ್ ಎಂದು ಪರಿಗಣಿಸಿ ಸೇವಿಸಬಹುದು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.