ತೂಕ ನಷ್ಟಕ್ಕೆ ಸಲಾಡ್: ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಆದರೆ ನೀವು ನಿಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಸೇರಿಸಿದರೆ, ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಆಹಾರದಲ್ಲಿ ಸಲಾಡ್ ಸೇರಿಸಿಕೊಳ್ಳಬೇಕು. ಆದರೆ ಕೆಲವು ಸಲಾಡ್‌ಗಳು ಕ್ಯಾಲೊರಿಗಳಿಂದ ತುಂಬಿರುತ್ತವೆ. ಸಲಾಡ್‍ನಿಂದ ನೀವು ಸುಲಭವಾಗಿ ಸರಿಯಾದ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಪಡೆಯಬಹುದು. ತೂಕ ನಷ್ಟಕ್ಕೆ ನಿಮ್ಮ ಆಹಾರದಲ್ಲಿ ಯಾವ ಸಲಾಡ್‌ ಸೇರಿಸಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.  


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕೆ ಈ ಸಲಾಡ್‍ಗಳು ಸಹಕಾರಿ


ಮೊಳಕೆ ಸಲಾಡ್: ತರಕಾರಿ ಮತ್ತು ಬೇಳೆಕಾಳುಗಳಿಂದ ಮಾಡಿದ ಸಲಾಡ್ ತುಂಬಾ ಆರೋಗ್ಯಕರ. ಈ ಸಲಾಡ್ ಮಾಡಲು ಒಂದು ಕಪ್ ಹೆಸರು ಕಾಳು, ಹುರುಳಿ ಕಾಳು, ಕಡಲೆ ಬೇಳೆ ಮತ್ತು ಕತ್ತರಿಸಿದ ತರಕಾರಿಗಳಾದ ಟೊಮ್ಯಾಟೊ, ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಿ. ನಂತರ ಅದಕ್ಕೆ ಆಲಿವ್ ಎಣ್ಣೆ, ಉಪ್ಪು ಮತ್ತು ಚಾಟ್ ಮಸಾಲಾ ಇತ್ಯಾದಿಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ ಸೇವಿಸಬೇಕು.


ಇದನ್ನೂ ಓದಿ: ಪ್ರೆಶರ್ ಕುಕ್ಕರ್‌ಲ್ಲಿ ಬೇಯಿಸಿದ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ


ಕಪ್ಪು ಕಡಲೆ ಸಲಾಡ್: ಕಾಳುಗಳಲ್ಲಿ ಪ್ರೋಟೀನ್ ಹೇರಳವಾಗಿದ್ದು, ಇದನ್ನು ತಿಂದರೆ ಹೊಟ್ಟೆ ಬೇಗ ತುಂಬುತ್ತದೆ. ಈ ಸಲಾಡ್ ತಯಾರಿಸಲು ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ. ಈಗ ಅದರಲ್ಲಿ ಒಂದು ಕಪ್ ಬೇಯಿಸಿದ ಬೇಳೆಯನ್ನು ಹಾಕಿ ಮತ್ತು ಕರಿಮೆಣಸು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಸೇವಿಸಿರಿ.


ಕಲ್ಲಂಗಡಿ ಸಲಾಡ್: ತೂಕ ಇಳಿಸಿಕೊಳ್ಳಲು ಇದು ಅತ್ಯುತ್ತಮ ಸಲಾಡ್ ಆಗಿದೆ. ಇದನ್ನು ಮಾಡಲು ಕತ್ತರಿಸಿದ ಕಲ್ಲಂಗಡಿ ತುಂಡುಗಳು, ಈರುಳ್ಳಿ ಮತ್ತು ಆಲಿವ್ ಮತ್ತು ಕರಿಮೆಣಸನ್ನು ದೊಡ್ಡ ಬಟ್ಟಲಿನಲ್ಲಿ ಮಿಶ್ರಣ ಮಾಡಿ. ಈಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನಂತರ ಸೇವಿಸಿರಿ.


ಇದನ್ನೂ ಓದಿ: ಕಾಮಾಲೆಯ ನಿರ್ಲಕ್ಷ್ಯ ಅಪಾಯಕಾರಿ..ರೋಗ ಲಕ್ಷಣವಿರುವವರಿಗೆ ಇಲ್ಲಿವೆ ಪರಿಣಾಮಕಾರಿ ಮದ್ದುಗಳು..!


ತರಕಾರಿ ಸಲಾಡ್: ಈ ಸಲಾಡ್ ಫೈಬರ್‌ನಿಂದ ತುಂಬಿರುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ಕ್ಯಾರೆಟ್, ಕೆಂಪು ಮೆಣಸು, ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಈ ತರಕಾರಿಗಳಲ್ಲಿ ಬೆಳ್ಳುಳ್ಳಿ ಮೊಗ್ಗುಗಳು, ವಿನೆಗರ್ ಮತ್ತು ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ಉಪ್ಪು, ಕರಿಮೆಣಸು ಇತ್ಯಾದಿ ಹಾಕಿ ಸೇವಿಸಿರಿ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.