Weight loss drink: ನಮ್ಮಲ್ಲಿ ಹಲವು ಜನರು 2023 ರಲ್ಲಿ ತೂಕ ಇಳಿಸಿಕೊಳ್ಳಲು ಸಂಕಲ್ಪ ಮಾಡಿರುತ್ತಾರೆ. ಆದರೆ, ಹೆಚ್ಚಿನವರು ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳಲು ಪ್ರತಿ ವರ್ಷ ಇಂತಹ ಸಂಕಲ್ಪ ತೆಗೆದುಕೊಳ್ಳುತ್ತಾರೆ. ತೂಕ ಇಳಿಸುವ ಆಹಾರದಿಂದ ಪ್ರೋಟೀನ್ ಶೇಕ್‌ಗಳು, ಸ್ಮೂಥಿಗಳು, ಜ್ಯೂಸ್ ಮತ್ತು ಚಹಾಗಳವರೆಗೆ, ತೂಕ ಇಳಿಕೆಯ ಕೆಲಸ ಮಾಡುವ ಆಹಾರಗಳು ಮತ್ತು ಉತ್ಪನ್ನಗಳ ಕೊರತೆಯಿಲ್ಲ. ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ದೇಹದಿಂದ ಕೆಲವು ಹೆಚ್ಚುವರಿ ಕ್ಯಾಲೊರಿಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದರೆ, ಆರೋಗ್ಯಕರ ರೀತಿಯಲ್ಲಿ ತೂಕವನ್ನು ಇಳಿಕೆ ಮಾಡಿಕೊಳ್ಳಲು ಸರಿಯಾದ ಸಂಯೋಜನೆ ಮತ್ತು ಪದಾರ್ಥಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Kidney Stone:ಕಿಡ್ನಿಯಲ್ಲಿರುವ ಕಲ್ಲು ಕರಗಿಸಲು ಪ್ರತಿದಿನ ಸೇವಿಸಿ ಈ 3 ವಿಧದ ಜ್ಯೂಸ್!


ನೀವೂ ಕೂಡ ಹಣ್ಣು ಮತ್ತು ತರಕಾರಿ ಜ್ಯೂಸ್‌ಗಳನ್ನು ಕುಡಿಯಲು ಇಷ್ಟಪಡುತ್ತಿದ್ದರೆ, ಈ ಆರೋಗ್ಯಕರ ಮತ್ತು ರುಚಿಕರವಾದ ಜ್ಯೂಸ್ ನಿಮ್ಮ ಫಿಟ್‌ನೆಸ್ ಗುರಿಗಳನ್ನು ಸಾಧಿಸಲು ಮತ್ತು ಅದರತ್ತ ಸಮರ್ಪಿತವಾಗಲು ಸಹಾಯ ಮಾಡುತ್ತದೆ. ಈ ಅದ್ಭುತ ಜ್ಯೂಸ್ ಅನ್ನು ನೀವು 1 ಮಧ್ಯಮ ಗಾತ್ರದ ಕ್ಯಾರೆಟ್, ಅರ್ಧ ಸಿಪ್ಪೆ ಸುಲಿದ ಸೇಬು, 1 ಬೀಟ್ರೂಟ್, 1 ಟೀಚಮಚ ಜೇನುತುಪ್ಪ ಮತ್ತು ಅರ್ಧ ಕಪ್ ನೀರಿನಿಂದ ತಯಾರಿಸಬಹುದು. ಜ್ಯೂಸ್ ಮಾಡಲು, ಈ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಈ ಜ್ಯೂಸ್ ಅನ್ನು ಫ್ರಿಜ್ ನಲ್ಲಿ ಸ್ವಲ್ಪ ಸಮಯ ಇಟ್ಟುಕೊಳ್ಳಬಹುದು ಅಥವಾ ತಕ್ಷಣ ಕುಡಿಯಬಹುದು.


ಇದನ್ನೂ ಓದಿ-Brain Stroke: ಕೊವಿಡ್ ವ್ಯಾಕ್ಸಿನ್ ನಿಂದ ಬ್ರೈನ್ ಸ್ಟ್ರೋಕ್ ಅಪಾಯ! ಹೊಸ ಅಧ್ಯಯನ ಹೇಳಿದ್ದೇನು?


ಈ ಜ್ಯೂಸ್ ಸೇವನೆಯಿಂದ ಆಗುವ ಲಾಭಗಳು
ಬೀಟ್ರೂಟ್ ತೂಕವನ್ನು ಇಳಿಕೆ ಮಾಡಲು ಮತ್ತು ನಿರ್ವಿಶೀಕರಣಕ್ಕೆ ಸಹಕಾರಿಯಾಗಿದೆ. ಇದರಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ಆಹಾರದ ಫೈಬರ್ ಅಧಿಕವಾಗಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಸೇಬಿನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು, ಫೈಬರ್, ನೀರು ಮತ್ತು ಪೋಷಕಾಂಶಗಳು ತೂಕ ಇಳಿಕೆ ಮಾಡಲು ಸಹಾಯ ಮಾಡುತ್ತವೆ. ಕ್ಯಾರೆಟ್‌ಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಕರಗಬಲ್ಲ ಮತ್ತು ಕರಗದ ನಾರಿನಂಶವನ್ನು ಹೊಂದಿರುತ್ತವೆ, ಅದು ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದರಿಂದ ತಡೆಯುತ್ತದೆ. ಜೇನುತುಪ್ಪವು ಉತ್ತಮ ಪೋಷಕಾಂಶಗಳನ್ನು ಹೊಂದಿದ್ದು ಅದು ಅಧಿಕ ಕೊಬ್ಬನ್ನು ಕರಗಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.