Kidney Stone:ಕಿಡ್ನಿಯಲ್ಲಿರುವ ಕಲ್ಲು ಕರಗಿಸಲು ಪ್ರತಿದಿನ ಸೇವಿಸಿ ಈ 3 ವಿಧದ ಜ್ಯೂಸ್!

Juices For Kidney Stones: ಯಾವುದೇ ಓರ್ವ ವ್ಯಕ್ತಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾದರೆ ಬದುಕೇ ನರಕಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ 3 ವಿಧದ ಜ್ಯೂಸ್ ಸೇವಿಸಿದರೆ ನೋವಿನಿಂದ ಭಾರಿ ನೆಮ್ಮದಿ ಸಿಗುತ್ತದೆ.  

Written by - Nitin Tabib | Last Updated : Jan 15, 2023, 04:29 PM IST
  • ನೀವು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ,
  • ನಿಮ್ಮ ಆಹಾರದಲ್ಲಿ ಈ 3 ವಿಧದ ಜ್ಯೂಸ್ ಅನ್ನು ನೀವು ಶಾಮೀಲುಗೊಳಿಸಬಹುದು,
  • ಇದರಿಂದ ನೀವು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ನೆಮ್ಮದಿ ಪಡೆಯಬಹುದು.
Kidney Stone:ಕಿಡ್ನಿಯಲ್ಲಿರುವ ಕಲ್ಲು ಕರಗಿಸಲು ಪ್ರತಿದಿನ ಸೇವಿಸಿ ಈ 3 ವಿಧದ ಜ್ಯೂಸ್! title=
Kidney Stone Problem

How To Protect Yourself From Kidney Stones: ಮೂತ್ರಪಿಂಡದ ಸಮಸ್ಯೆಗಳು ಸಾಮಾನ್ಯವಾಗಿ ತುಂಬಾ ನೋವಿನಿಂದ ಕೂಡಿರುತ್ತವೆ. ಈ ಸಮಸ್ಯೆಗಳಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯೂ ಒಂದು. ಯಾವುದೇ ಓರ್ವ ವ್ಯಕ್ತಿಗೆ ಮೂತ್ರಪಿಂಡದ ಕಲ್ಲುಗಳು ಎದುರಾದಾಗ, ಆ ವ್ಯಕ್ತಿ ತುಂಬಾ ನೋವಿನ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಆಹಾರಕ್ರಮವನ್ನು (ಕಿಡ್ನಿ ಸ್ಟೋನ್ ಡಯಟ್) ತುಂಬಾ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮಗೂ ಕೂಡ ಕಿಡ್ನಿ ಸಮಸ್ಯೆ ಇದ್ದರೆ ಇಲ್ಲಿ ನೀಡಿರುವ ಕೆಲವು ಜ್ಯೂಸ್‌ಗಳ ಸಹಾಯದಿಂದ ನೀವು ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಅವುಗಳು ಯಾವುವು ಮತ್ತು ಆ ಜ್ಯೂಸ್ ಗಳನ್ನು ಹೇಗೆ ತಯಾರಿಸಬೇಕೆಂದು ತಿಳಿದುಕೊಳ್ಳೋಣ.

ಮೂತ್ರಪಿಂಡದ ಕಲ್ಲು ಸಮಸ್ಯೆಗೆ ಪರಿಣಾಮಕಾರಿ ಜ್ಯೂಸ್ ಗಳು
ನೀವು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ನಿಮ್ಮ ಆಹಾರದಲ್ಲಿ ಈ 3 ವಿಧದ ಜ್ಯೂಸ್ ಅನ್ನು ನೀವು ಶಾಮೀಲುಗೊಳಿಸಬಹುದು, ಇದರಿಂದ ನೀವು ನೋವು ಸೇರಿದಂತೆ ಅನೇಕ ಸಮಸ್ಯೆಗಳಿಂದ ನೆಮ್ಮದಿ ಪಡೆಯಬಹುದು.

1. ಟೊಮೆಟೊ ಜ್ಯೂಸ್
ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಟೊಮೆಟೊ ರಸವು ತುಂಬಾ ಉಪಯುಕ್ತವಾಗಿದೆ. ಈ ಸಂದರ್ಭದಲ್ಲಿ, ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಕ್ರಶ್ ಮಡಿ . ರಸದಲ್ಲಿ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಬೆರೆಸಿ ಸೇವಿಸಿ, ಬೇಕಿದ್ದರೆ ತಯಾರಿಸಿದ ಮಿಶ್ರಣವನ್ನು ಫ್ರಿಡ್ಜ್ ನಲ್ಲಿಟ್ಟು ನಂತರ ಜ್ಯೂಸ್ ರೂಪದಲ್ಲಿ ಸೇವಿಸಬಹುದು.

2. ನಿಂಬೆ ರಸ
ನಿಂಬೆಯೊಳಗೆ ಸಿಟ್ರಿಕ್ ಆಮ್ಲವಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಂಬೆ ರಸವನ್ನು ಸೇವಿಸಿದರೆ ಮೂತ್ರಪಿಂಡದ ಸಮಸ್ಯೆಯಲ್ಲಿ ಭಾರಿ ಪರಿಹಾರ ಪಡೆಯಬಹುದು. ನೀವು ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ, ಈಗ ರುಚಿಗೆ ತಕ್ಕಂತೆ ಉಪ್ಪನ್ನು ಬೆರೆಸಿ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಸೇವಿಸಿ. ಹೀಗೆ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ನೀವು ಪರಿಹಾರವನ್ನು ಪಡೆಯಬಹುದು.

ಇದನ್ನೂ ಓದಿ-Brain Stroke: ಕೊವಿಡ್ ವ್ಯಾಕ್ಸಿನ್ ನಿಂದ ಬ್ರೈನ್ ಸ್ಟ್ರೋಕ್ ಅಪಾಯ! ಹೊಸ ಅಧ್ಯಯನ ಹೇಳಿದ್ದೇನು?

3. ತುಳಸಿ ರಸ
ತುಳಸಿಯಿಂದ ತಯಾರಿಸಿದ ಜ್ಯೂಸ್ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಹೋಗಲಾಡಿಸಲು ಕೂಡ ಉಪಯುಕ್ತವಾಗಿದೆ. ಇದಕ್ಕಾಗಿ ತುಳಸಿ ಎಲೆಗಳ ರಸವನ್ನು ಹೊರತೆಗೆಯಿರಿ ಮತ್ತು ಅದರಲ್ಲಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಮತ್ತು ತಯಾರಿಸಿದ ಮಿಶ್ರಣವನ್ನು ಬೆಳಗ್ಗೆ ಮತ್ತು ಸಂಜೆ ಸೇವಿಸಿ. ಹೀಗೆ ಮಾಡುವುದರಿಂದ ಕಿಡ್ನಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ-Milk In Cholesterol: ಹೃದ್ರೋಗಿಗಳು ಈ ಪ್ರಾಣಿಯ ಹಾಲನ್ನು ಸೇವಿಸಬೇಕಂತೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತಂತೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News