Weight Loss Foods: ಪ್ರತಿಯೊಬ್ಬರೂ ಕೂಡ ತಾವೂ ಫಿಟ್ ಆಗಿರಬೇಕು ಎಂದು ಬಯಸುತ್ತಾರೆ, ಆದರೆ ದೇಹದ ತೂಕ ಏರಿಕೆಯಾಗುವುದರಿಂದ ಕೆಲವರಿಗೆ ಅದು ಸಾಧ್ಯವಾಗುವುದಿಲ್ಲ. ತೂಕ ಹೆಚ್ಚಾಗುವುದರಿಂದ ನಾವು ಹಲವಾರು ಗಂಭೀರ ಕಾಯಿಲೆಗಳನ್ನು ಸಹ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಇದೆ ವೇಳೆ, ತೂಕ ಇಳಿಕೆಯ ವಿಷಯಕ್ಕೆ ಬಂದಾಗ, ಜನರು ವ್ಯಾಯಾಮ ಮತ್ತು ಆಹಾರ ಕ್ರಮಕ್ಕೆ ಹೆಚ್ಚಿನ ಗಮನ ಕೊಡುತ್ತಾರೆ. ಬೆಳಗಿನ ಉಪಹಾರವು ಉತ್ತಮ ಆಹಾರಕ್ಕಾಗಿ ಪೌಷ್ಟಿಕವಾಗಿರಬೇಕು ಮತ್ತು ಭಾರವಾಗಿರಬೇಕು. ಆದರೆ ರಾತ್ರಿಯ ಊಟ ಮಾತ್ರ ಹಗುರವಾಗಿರಬೇಕು. ರಾತ್ರಿಯ ಊಟವನ್ನು ಮಲಗುವ 3 ಗಂಟೆಗಳ ಮೊದಲು ಮಾಡಬೇಕು, ಇದರಿಂದ ನಿಮ್ಮ ನಿದ್ರೆ ಪೂರ್ಣಗೊಳ್ಳುತ್ತದೆ. ಇನ್ನೊಂದೆಡೆ ರಾತ್ರಿಯ ಊಟದಲ್ಲಿ ಕೆಲ ಪದಾರ್ಥಗಳನ್ನು ಸೇವಿಸುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಬನ್ನಿ ಆ ಪದಾರ್ಥಗಳು ಯಾವುವು ತಿಳಿದುಕೊಳ್ಳೋಣ. 

COMMERCIAL BREAK
SCROLL TO CONTINUE READING

ತೂಕ ಇಳಿಸಿಕೊಳ್ಳಲು ರಾತ್ರಿ ಊಟದಲ್ಲಿ ಈ ಪದಾರ್ಥಗಳಿರಲಿ
ಹೆಸರು ಬೇಳೆ

ಹೆಸರು ಬೇಳೆ ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಅದು ನಿಮ್ಮ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ನೀವು ರಾತ್ರಿಯ ಊಟದಲ್ಲಿ ಮೂಂಗ್ ದಾಲ್ ಅನ್ನು ತಯಾರಿಸಬಹುದು ಮತ್ತು ಕುಡಿಯಬಹುದು.

ಸಬ್ಬಕ್ಕಿ ಖಿಚಡಿ
ಸಬ್ಬಕ್ಕಿ ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ, ಸಬ್ಬಕ್ಕಿ ಖಿಚಡಿಯನ್ನು ಉಪವಾಸದಲ್ಲಿ ತಿನ್ನುವ ಒಂದು ಲಘು ಆಹಾರವಾಗಿದೆ. ಆದರೆ ನೀವು ಪ್ರತಿದಿನ ರಾತ್ರಿಯ ಊಟದಲ್ಲಿ ಸಬ್ಬಕ್ಕಿಯನ್ನು ಸೇವಿಸಿದರೆ, ನೀವು ಸುಲಭವಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.


ಇದನ್ನೂ ಓದಿ-Hair Care Tips: ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಈ ತರಕಾರಿ ಜ್ಯೂಸ್

ಪಪ್ಪಾಯಿ ಸಲಾಡ್
ಪಪ್ಪಾಯಿ ಮಲಬದ್ಧತೆ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ನೀವು ರಾತ್ರಿಯ ಊಟದಲ್ಲಿ ಪಪ್ಪಾಯಿ ಸಲಾಡ್ ಸೇವಿಸಬಹುದು. ಇದನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ಪಪ್ಪಾಯಿ, ಕ್ಯಾರೆಟ್, ಸೌತೆಕಾಯಿ ತುಂಡುಗಳನ್ನು ಹಾಕಿ. ಈಗ ಅದಕ್ಕೆ ಸೋಯಾ ಸಾಸ್, ಅಕ್ಕಿ ವಿನೆಗರ್, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಸೇರಿಸಿ. ನಿಮ್ಮ ಪಪ್ಪಾಯಿ ಸಲಾಡ್ ಸಿದ್ಧವಾಗಿದೆ. ಇದಲ್ಲದೆ, ನೀವು ರಾತ್ರಿಯಲ್ಲಿ ಗಂಜಿ, ಓಟ್ಸ್, ಪಾಸ್ಟಾ ಕೂಡ ತಯಾರಿಸಬಹುದು.


ಇದನ್ನೂ ಓದಿ-High BP: ರಕ್ತದೊತ್ತಡ-ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ ಈ ಹಸಿರು ಜ್ಯೂಸ್

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.