High BP: ರಕ್ತದೊತ್ತಡ-ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ ಈ ಹಸಿರು ಜ್ಯೂಸ್

Amla Juice: ಪ್ರತಿದಿನ ಆಮ್ಲಾ ಜ್ಯೂಸ್ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಮ್ಲಾ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Sep 5, 2022, 04:31 PM IST
  • ಪ್ರತಿದಿನ ಆಮ್ಲಾ ಜ್ಯೂಸ್ ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ಇದು ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಸಿಯಮ್, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳಂತಹ ಅಂಶಗಳಿಂದ ಸಮೃದ್ಧವಾಗಿದೆ.
  • ಆದರೆ ಆಮ್ಲಾ ಜ್ಯೂಸ್ ಅನ್ನು ಸರಿಯಾದ ಸಮಯದಲ್ಲಿ ಸೇವಿಸುವುದು ಬಹಳ ಮುಖ್ಯ.
High BP: ರಕ್ತದೊತ್ತಡ-ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ ಈ ಹಸಿರು ಜ್ಯೂಸ್ title=
Amla Juice Health Benefits

Amla Juice Benefits: ಆಮ್ಲಾ ಜ್ಯೂಸ್ ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಸಿಗುತ್ತವೆ. ಪ್ರತಿದಿನ ಆಮ್ಲಾ ಜ್ಯೂಸ್ ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ವಿಟಮಿನ್ ಸಿ, ಕಬ್ಬಿಣ, ಪೊಟ್ಯಾಸಿಯಮ್, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳಂತಹ ಅಂಶಗಳಿಂದ ಸಮೃದ್ಧವಾಗಿದೆ. ಆದರೆ ಆಮ್ಲಾ ಜ್ಯೂಸ್ ಅನ್ನು ಸರಿಯಾದ ಸಮಯದಲ್ಲಿ ಸೇವಿಸುವುದು ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಆಮ್ಲಾ ಜ್ಯೂಸ್ ಕುಡಿಯುವುದರಿಂದ ಏನು ಪ್ರಯೋಜನಗಳು ಮತ್ತು ಯಾವ ಸಮಯದಲ್ಲಿ ಅದನ್ನು ಸೇವಿಸಬೇಕು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ,

ಆಮ್ಲಾ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳು-
ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ಆಮ್ಲಾ ಜ್ಯೂಸ್ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದ್ದರಿಂದ, ನೀವು ಸಹ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ತೊಂದರೆಗೊಳಗಾಗಿದ್ದರೆ, ನೀವು ಆಮ್ಲಾ ಜ್ಯೂಸ್ ಅನ್ನು ಸೇವಿಸಬಹುದು.

ಮಾನಸಿಕ ಆರೋಗ್ಯಕ್ಕೆ ಉತ್ತಮ
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಇದು ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಬಹಳ ಸಹಕಾರಿಯಾಗಿದೆ. ಇದು ಮೆದುಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಇದಲ್ಲದೆ ಜ್ಞಾಪಕ ಶಕ್ತಿ ಹೆಚ್ಚಳದಲ್ಲಿಯೂ ಕೂಡ ಇದು ಪ್ರಯೋಜನಕಾರಿಯಾಗಿದೆ. ಪ್ರತಿನಿತ್ಯ ಆಮ್ಲಾ ಜ್ಯೂಸ್ ಸೇವಿಸಿದರೆ ಆತಂಕ, ಒತ್ತಡದಂತಹ ಸಮಸ್ಯೆಗಳನ್ನು ತಡೆಗಟ್ಟಬಹುದು.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ 
ಆಮ್ಲಾವು ಪೊಟ್ಯಾಸಿಯಮ್‌ನಂತಹ ಅಂಶಗಳನ್ನು ಹೊಂದಿದ್ದು, ಇದು ನಮ್ಮ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಾವು ಇದನ್ನು ಪ್ರತಿದಿನ ಸೇವಿಸಿದರೆ ಹೃದಯ ಮತ್ತು ಪಾರ್ಶ್ವವಾಯು ಅಪಾಯವನ್ನು ಎದುರಿಸುವುದಿಲ್ಲ.

ತೂಕ ಇಳಿಕೆಗೆ ಸಹಕಾರಿ
ಆಮ್ಲಾ ಜ್ಯೂಸ್
ಸೇವನೆ ಚಯಾಪಚಯ ದರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ನಾವು ಆದಷ್ಟು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಇದು ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

ಇದನ್ನೂ ಓದಿ-Relationship Tips: ಸಂಬಂಧ ಬೆಳೆಸುವ ಮೊದಲು ಜೋಡಿ ಆರೋಗ್ಯಕ್ಕೆ ಸಂಬಂಧಿಸಿ ಈ ಪರೀಕ್ಷೆ ನಡೆಸಲೇಬೇಕು

ಆಮ್ಲಾ ಜ್ಯೂಸ್ ಅನ್ನು ಯಾವಾಗ ಕುಡಿಯಬೇಕು?
ಆಮ್ಲಾ ಜ್ಯೂಸ್ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಹೊರಹಾಕಬಹುದು. ಇನ್ನೊಂದೆಡೆ ರಾತ್ರಿ ಮಲಗುವ ಹೊತ್ತು ಇದನ್ನು ಸೇವಿಸಬೇಡಿ, ಏಕೆಂದರೆ ಅದು ಆರೋಗ್ಯವನ್ನು ಹಾಳುಮಾಡಬಹುದು.

ಇದನ್ನೂ ಓದಿ-ಕಿಡ್ನಿ ಸ್ಟೋನ್ ಇರುವವರು ಈ 5 ವಸ್ತುಗಳಿಂದ ದೂರವಿರಿ, ಇಲ್ಲವಾದರೆ ಹೆಚ್ಚುವುದು ಸಮಸ್ಯೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News