Benefits Of Pumpkin Juice For Weight Loss: ಇಂದಿನ ಕಾಲದಲ್ಲಿ ಎಲ್ಲರೂ ಕೂಡ ಫಿಟ್ ಆಗಿರಲು ಬಯಸುತ್ತಾರೆ. ಏಕೆಂದರೆ ಸ್ಥೂಲಕಾಯ ಹಲವಾರು ಆರೋಗ್ಯಕರ ಸಮಸ್ಯೆಗಳಿಗೆ ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಹೀಗಾಗಿ ಎಲ್ಲರೂ ಕೂಡ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮ್ಮ ತೂಕವೂ ಕೂಡ ಹೆಚ್ಚಾಗಿದ್ದು ಅದನ್ನು ನೀವು ಇಳಿಕೆ ಮಾಡಲು ಬಯಸುತ್ತಿದ್ದರೆ, ನಿಮ್ಮ ಡಯಟ್ ನಲ್ಲಿ ನೀವು ಕುಂಬಳಕಾಯಿ ಜ್ಯೂಸ್ ಅನ್ನು ಖಂಡಿತ ಸೇರಿಸಿಕೊಳ್ಳಬೇಕು. ಕುಂಬಳ ಕಾಯಿ ಜ್ಯೂಸ್ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳ ಕುರಿತು ಮಾತನಾಡೋಣ ಬನ್ನಿ. 

COMMERCIAL BREAK
SCROLL TO CONTINUE READING

ಕುಂಬಳ ಕಾಯಿಯ ಜ್ಯೂಸ್ ನಲ್ಲಿ ಫೈಬರ್, ಜೀವನಸತ್ವಗಳು, ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಇದಲ್ಲದೆ ಕುಂಬಳ ಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ. ಇದು ದೇಹಕ್ಕೆ ತುಂಬಾ ಹಿತಕಾರಿಯಾಗಿದೆ. ಕುಂಬಳಕಾಯಿ ಜ್ಯೂಸ್ ಸೇವಿಸಿ ನೀವು ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಈ ಜ್ಯೂಸ್ ತಯಾರಿಸುವುದು ಹೇಗೆ?
ಕುಂಬಳಕಾಯಿ ರಸವನ್ನು ತಯಾರಿಸಲು, ಮಾಗಿದ ಕುಂಬಳಕಾಯಿ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಈ ತುಂಡುಗಳಿಂದ ಸಿಪ್ಪೆಗಳನ್ನು ತೆಗೆದುಹಾಕಿ. ಇದಾದ ನಂತರ ಓವನ್ ಅಥವಾ ಇನ್ನಾವುದೇ ವಸ್ತುವಿನ ಸಹಾಯದಿಂದ ಬೇಕ್ ಮಾಡಿ. ಬೇಯಿಸಿದ ನಂತರ ಚೆನ್ನಾಗಿ ರುಬ್ಬಿ ಅದಕ್ಕೆ ರುಚಿಗೆ ತಕ್ಕಂತೆ ಸೇಬಿನ ತುಂಡುಗಳನ್ನು ಹಾಕಿ ಮತ್ತೆ ಬೇಯಿಸಿ. ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದರ ರಸವನ್ನು ತಯಾರಿಸಿ ಫಿಲ್ಟರ್ ಮಾಡಿ. ಈ ರಸವನ್ನು ಪ್ರತಿದಿನ ಸೇವಿಸಿ.

ತೂಕ ಇಳಿಕೆಗಾಗಿ ಕುಂಬಳಕಾಯಿ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
1- ಕುಂಬಳಕಾಯಿ ರಸವನ್ನು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಇದರಲ್ಲಿರುವ ಫೈಬರ್ ಪ್ರಮಾಣವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಅದು ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ಜೀರ್ಣಕ್ರಿಯೆಯು ಉತ್ತಮವಾಗಿದ್ದರೆ, ಅದು ತೂಕವನ್ನು ಇಳಿಕೆ ಮಾಡುವಲ್ಲಿ ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ.


ಇದನ್ನೂ ಓದಿ-Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್

2- ಕುಂಬಳಕಾಯಿ ರಸ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಅದು ದೇಹದಲ್ಲಿರುವ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅದು ಉರಿಯೂತವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-ಈ ಐದು ಸಮಸ್ಯೆಗಳಿದ್ದಲ್ಲಿ ಖಾಲಿ ಹೊಟ್ಟೆಯಲ್ಲಿ ಶುಂಠಿ ರಸ ಸೇವಿಸಿ.!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.