Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್

Soft Waxing Tips: ದೇಹದಲ್ಲಿನ ಅನಗತ್ಯ ಕೂದಲನ್ನು ತೆಗೆದುಹಾಕಲು ಜನರು ಸಾಮಾನ್ಯವಾಗಿ ದುಬಾರಿ ಪಾರ್ಲರ್‌ಗಳಿಗೆ ತೆರಳುತ್ತಾರೆ. ಆದರೆ ನೀವು ಹಣವನ್ನು ಉಳಿಸಲು ಬಯಸಿದರೆ, ಮನೆಯಲ್ಲಿ ಸಾಫ್ಟ್ ವ್ಯಾಕ್ಸಿಂಗ್ ಮಾಡಿಕೊಳ್ಳಬಹುದು. 

Written by - Chetana Devarmani | Last Updated : Jul 28, 2022, 04:46 PM IST
  • ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್
  • ಸಾಫ್ಟ್‌ ವ್ಯಾಕ್ಸಿಂಗ್‌ನ ಅದ್ಭುತ ಪ್ರಯೋಜನಗಳು
  • ಸಾಫ್ಟ್‌ ವ್ಯಾಕ್ಸ್‌ ಹೇಗೆ ತಯಾರಿಸುವುದು?
Soft Waxing Tips: ಮನೆಯಲ್ಲಿಯೇ ಮಾಡಿಕೊಳ್ಳಿ ಸಾಫ್ಟ್ ವ್ಯಾಕ್ಸಿಂಗ್  title=
ಸಾಫ್ಟ್ ವ್ಯಾಕ್ಸಿಂಗ್ 

Soft Waxing Tips: ದೇಹದ ಅನಗತ್ಯ ಕೂದಲನ್ನು ತೆಗೆಯಲು ಮಹಿಳೆಯರು ವ್ಯಾಕ್ಸಿಂಗ್ ಮಾಡುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲಿ ಸಾಫ್ಟ್ ವ್ಯಾಕ್ಸ್ ಅನ್ನು ತಯಾರಿಸಬಹುದು. ಇದರಿಂದ ನಿಮ್ಮ ದೇಹದಲ್ಲಿನ ಅನಗತ್ಯ ಕೂದಲನ್ನು ತೆಗೆಯಬಹುದು. ಮನೆಯಲ್ಲಿ ಸಾಫ್ಟ್‌ ವ್ಯಾಕ್ಸ್ ಅನ್ನು ಹೇಗೆ ತಯಾರಿಸುವುದು ಮತ್ತು ಈ ರೀತಿ ವ್ಯಾಕ್ಸಿಂಗ್ ಮಾಡುವುದರಿಂದ ಏನು ಪ್ರಯೋಜನ ಎಂದು ತಿಳಿಯೋಣ.

ಸಾಫ್ಟ್‌ ವ್ಯಾಕ್ಸಿಂಗ್‌ನ ಅದ್ಭುತ ಪ್ರಯೋಜನಗಳು:

  • ಕೈ, ಪಾದಗಳು, ಸೊಂಟದಂತಹ ಪ್ರದೇಶಗಳಿಂದ ಅನಗತ್ಯ ಕೂದಲನ್ನು ತೆಗೆದುಹಾಕುವುದು ಸುಲಭ
  • ನೀವು ಉಗುರುಬೆಚ್ಚಗಿನ ಸಾಫ್ಟ್‌ ವ್ಯಾಕ್ಸ್‌ ಬಳಸಬಹುದು 
  • ವ್ಯಾಕ್ಸ್ ಮಾಡಿಸಿಕೊಳ್ಳುವುದರಿಂದ ತ್ವಚೆ ಮೃದುವಾಗುವುದು
  • ಗ್ಲೋಯಿಂಗ್ ಸ್ಕಿನ್ ಕೂಡ ದೊರೆಯುತ್ತದೆ
  • ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ
  • ಶೇವಿಂಗ್‌ಗೆ ಹೋಲಿಸಿದರೆ ವ್ಯಾಕ್ಸಿಂಗ್ ಕೂದಲಿನ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ
  • ರಾಸಾಯನಿಕದ ಅಪಾಯವಿಲ್ಲ.

ಇದನ್ನೂ ಓದಿ: ಈ ದಿನದಂದು ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ! ಇದಕ್ಕಿದೆ ಪ್ರಮುಖ ಕಾರಣ

ಹೇಗೆ ತಯಾರಿಸುವುದು?

ಮನೆಯಲ್ಲಿ ಸಾಫ್ಟ್ ವ್ಯಾಕ್ಸ್ ಅನ್ನು ತಯಾರಿಸುವುದು ತುಂಬಾ ಸುಲಭ. ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ಸಾಫ್ಟ್ ವ್ಯಾಕ್ಸ್ ಅನ್ನು ತಯಾರಿ ಮಾಡಬಹುದು.

ಸಾಫ್ಟ್ ವ್ಯಾಕ್ಸ್ ತಯಾರಿಸಲು ಬೇಕಾದ ಪದಾರ್ಥಗಳು

  • ಸಕ್ಕರೆ - 1 ಕಪ್
  • ನಿಂಬೆ ರಸ - 1 ಟೀಸ್ಪೂನ್
  • ಜೇನುತುಪ್ಪ - 1/4 ಕಪ್
  • ನೀರು - 1 ಟೀ ಸ್ಪೂನ್

ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಮತ್ತು ಕಡಿಮೆ ಉರಿಯಲ್ಲಿ ಇರಿಸಿ. ಸಕ್ಕರೆ ಕರಗಿದ ನಂತರ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ.
ಮಿಶ್ರಣವನ್ನು ಸುಡದಂತೆ ನೋಡಿಕೊಳ್ಳಿ. ಮಿಶ್ರಣವು ಸ್ವಲ್ಪ ದಪ್ಪವಾಗಲು ಪ್ರಾರಂಭಿಸಿದಾಗ ಗ್ಯಾಸ್ ಆಫ್ ಮಾಡಿ. ಈಗ ನಿಮ್ಮಸಾಫ್ಟ್ ವ್ಯಾಕ್ಸ್ ಸಿದ್ಧವಾಗಿದೆ. ಮೇಣವು ತುಂಬಾ ದಪ್ಪವಾಗಿದ್ದರೆ, ನೀವು ಸ್ವಲ್ಪ ನೀರನ್ನು ಕೂಡ ಸೇರಿಸಬಹುದು.

ಕೂದಲು ತೆಗೆಯಲು ಸಾಫ್ಟ್ ವ್ಯಾಕ್ಸಿಂಗ್ ಅನ್ನು ಹೇಗೆ ಬಳಸುವುದು?

ಕೈಗಳು, ಕಾಲುಗಳು ಅಥವಾ ಸೊಂಟದ ಮೇಲಿನ ಅನಗತ್ಯ ಕೂದಲನ್ನು ತೆಗೆದುಹಾಕಲು, ಮೊದಲು ಚರ್ಮವನ್ನು ಸ್ವಚ್ಛಗೊಳಿಸಿ. ಇದರ ನಂತರ, ಸಾಫ್ಟ್ ವ್ಯಾಕ್ಸ್ ಅನುಕೂಲಕರ ಮಟ್ಟಕ್ಕೆ ಬಿಸಿ ಮಾಡಿ. ಈಗ ಸಾಫ್ಟ್ ವ್ಯಾಕ್ಸ್ ಹಚ್ಚಿ, ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಇರಿಸಿ ಮತ್ತು ಸ್ವಲ್ಪ ಒತ್ತಡದಿಂದ ಉಜ್ಜಿಕೊಳ್ಳಿ. ಈಗ ಒಂದು ಬದಿಯಿಂದ ಚರ್ಮವನ್ನು ಹಿಡಿದುಕೊಂಡು, ಕೂದಲಿನ ವಿರುದ್ಧ ದಿಕ್ಕಿನಲ್ಲಿ ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ವೇಗವಾಗಿ ಎಳೆಯಿರಿ.

ಇದನ್ನೂ ಓದಿ: Zodiac Sign: ಮಾತಿನಿಂದಲೇ ಹುಡುಗಿಯರ ಹೃದಯ ಗೆಲ್ಲುತ್ತಾರೆ ಈ ರಾಶಿಯ ಹುಡುಗರು

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News