Weigt Lose Tips : ಕೆಟ್ಟ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ಅನುವಂಶಿಕ ಕಾರಣ ಇವೆಲ್ಲವೂ ತೂಕ ಹೆಚ್ಚಾಗಲು ಕಾರಣವಾಗಿ ಬಿಡುತ್ತದೆ. ಇಂದು ನಮ್ಮ ನಡುವೆ ಅನೇಕ ಮಂದಿ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ದೇಹ ತೂಕದ ಜೊತೆಗೆ ಹೊಟ್ಟೆ, ಸೊಂಟದ ಭಾಗದಲ್ಲಿ ಬೆಳೆಯುತ್ತಿರುವ ಕೊಬ್ಬು ಬಹುತೇಕರನ್ನು ಕಾಡುತ್ತದೆ. ತೂಕವನ್ನು ಕಳೆದುಕೊಳ್ಳುವ ಬಗ್ಗೆ ಮಾತನಾಡುವುದು ಸುಲಭ. ಆದರೆ ಅದನ್ನು ಸಾಧಿಸುವುದು ಬಹಳ ಕಷ್ಟ. ಅದರಲ್ಲಿಯೂ ಹೊಟ್ಟೆಯ ಭಾಗದಲ್ಲಿ ಸೇರಿಕೊಂಡಿರುವ ಕೊಬ್ಬನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಸಂಗ್ರಹವಾಗಿರುವ  ಕೊಬ್ಬನ್ನು ಕಡಿಮೆ ಮಾಡಲು, ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಹೊಟ್ಟೆಯ ಕೊಬ್ಬನ್ನು ಬಹಳ ಬೇಗನೆ ಕರಗುವಂತೆ ಮಾಡಲು ಐದು ಆಹಾರಗಳನ್ನು ಸೇವಿಸಬೇಕು. ಈ ಆಹಾರಗಳು ದೇಹದ ಕೊಬ್ಬನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ ಬರ್ನ್ ಮಾಡಲು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ದೇಹ ತಕ ಕಳೆದುಕೊಳ್ಳಲು ಸೇವಿಸಬೇಕಾದ ಆಹಾರ ಪದಾರ್ಥಗಳು : 
ಚಿಯಾ ಬೀಜಗಳು :

ಚಿಯಾ ಬೀಜಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದ್ದು, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಇ ಚಿಯಾ ಬೀಜಗಳಲ್ಲಿ ಕಂಡುಬರುತ್ತವೆ. ಹಾಗಾಗಿ ಚಿಯಾ ಬೀಜವನ್ನು ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳುವುದು ಮಾತ್ರವಲ್ಲ ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.  


ಇದನ್ನೂ ಓದಿ : Antibiotics ಕೌಂಟರ್ ಮಾರಾಟ ನಿರ್ಬಂಧ, ವೈದ್ಯರ ಚೀಟಿ ಇಲ್ಲದೆ ಇನ್ಮುಂದೆ ಸಿಗಲ್ಲ ಈ ಔಷಧಿಗಳು!


ಮೊಸರು :
ಮೊಸರನ್ನು ನಿತ್ಯ ಸೇವಿಸುತ್ತಾ ಬಂದರೆ ಹೊಟ್ಟೆಯ ಕೊಬ್ಬನ್ನು ಬಹಳ ವೇಗವಾಗಿ ಕರಗಿಸಬಹುದು. ಸಾಮಾನ್ಯವಾಗಿ ಜನರು ಮೊಸರನ್ನು ಶೀತ ಎಂದು ಹೇಳಲಾಗುತ್ತದೆ.  ಹಾಗಾಗಿ ಹೆಚ್ಚಿನವರು ಮಳೆ ಮತ್ತು ಚಳಿ ಸಂದರ್ಭದಲ್ಲಿ ಮೊಸರು ಸೇವಿಸುವುದಿಲ್ಲ. ಆದರೆ ಚಳಿಗಾಲದಲ್ಲಿಯೂ ಮೊಸರು ತಿನ್ನಬಹುದು. ಮೊಸರನ್ನು ನಿತ್ಯ ಸೇವಿಸುತ್ತಾ ಬಂದರೆ ಹೊಟ್ಟೆಯ ಕೊಬ್ಬು ಕರಗಿ ಬಿಡುತ್ತದೆ. 


ಸೋರೆಕಾಯಿ :
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕವಾಗುವ ಇನ್ನೊಂದು ತರಕಾರಿ ಎಂದರೆ ಅದು ಸೋರೆಕಾಯಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿಯನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಸೋರೆಕಾಯಿಯಲ್ಲಿರುವ ಕ್ಯಾಲೋರಿ ಅಂಶ ತೀರಾ ಕಡಿಮೆ. 


ಹೆಸರು ಬೇಳೆ :
ಎಲ್ಲಾ ಬೇಳೆಕಾಳುಗಳುಗಳಿಗಿಂತ ಹೆಸರು ಬೇಳೆ ಹಗುರವಾದ ಮತ್ತು ಆರೋಗ್ಯಕರ ಬೇಳೆಯಾಗಿದೆ. ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ತೂಕವನ್ನು ನಿಯಂತ್ರಿಸಲು ಹೆಸರುಬೇಳೆ ಸಹಾಯಕವಾಗಿದೆ. ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕರಗಿಸಲು ಇದು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಬೆಂಡೆಕಾಯಿ ಹೀಗೆ ಸೇವಿಸಿದರೆ ದುಪ್ಪಟ್ಟು ಪ್ರಯೋಜನ ಸಿಗುವುದು


ಸಿಟ್ರಸ್ ಹಣ್ಣುಗಳು : 
ರುಚಿಯಲ್ಲಿ ಹುಳಿ ಇರುವ ಹಣ್ಣುಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಕಿತ್ತಳೆ, ಮುಸಂಬಿ, ನಿಂಬೆ, ಕಿವಿ, ದ್ರಾಕ್ಷಿ, ಸ್ಟ್ರಾಬೆರಿ ಮುಂತಾದ ಹಣ್ಣುಗಳಲ್ಲಿ ಸಿಟ್ರಸ್ ಹೆಚ್ಚಾಗಿರುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣುಗಳು ನಮ್ಮ ಚಯಾಪಚಯವನ್ನು ಹೆಚ್ಚಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.