Bamboo Leaves Health Benefits: ಮಧುಮೇಹ ಸೇರಿದಂತೆ ಉಸಿರಾಟ ಸಮಸ್ಯೆಗೆ ರಾಮಬಾಣ ಈ ಎಲೆಗಳು, ಬಳಕೆಯ ವಿಧಾನ ಇಲ್ಲಿ ತಿಳಿದುಕೊಳ್ಳಿ!

Bamboo Leaves Health Benefits: ಬಿದಿರಿನ ಎಲೆಗಳನ್ನು ಬಳಸುವುದರಿಂದ ದೇಹದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಬನ್ನಿ, ಇದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ವಿಸ್ತೃತವಾಗಿ ತಿಳಿದುಕೊಳ್ಳೋಣ, (Health News In Kannada)  

Written by - Nitin Tabib | Last Updated : Jan 23, 2024, 07:26 PM IST
  • ಒಣ ಕೆಮ್ಮಿನ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಬಿದಿರಿನ ಎಲೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ.
  • ಅಷ್ಟೇ ಅಲ್ಲ ಇದರ ಬಳಕೆಯಿಂದ ಉಸಿರಾಟ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
  • ಇದಕ್ಕಾಗಿ ಬಿದಿರಿನ ಎಲೆಗಳನ್ನು ಒಣಗಿಸಿ ರುಬ್ಬುವ ಮೂಲಕ ಪುಡಿಯನ್ನು ತಯಾರಿಸಿ. ಈಗ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.
Bamboo Leaves Health Benefits: ಮಧುಮೇಹ ಸೇರಿದಂತೆ ಉಸಿರಾಟ ಸಮಸ್ಯೆಗೆ ರಾಮಬಾಣ ಈ ಎಲೆಗಳು, ಬಳಕೆಯ ವಿಧಾನ ಇಲ್ಲಿ ತಿಳಿದುಕೊಳ್ಳಿ! title=

Bamboo Leaves Health Benefits: ಶತಮಾನಗಳಿಂದಲೂ ಔಷಧಿಯಾಗಿ ಬಳಸುತ್ತಿರುವ ಹಲವಾರು ಮರಗಳು ಮತ್ತು ಸಸ್ಯಗಳು ನಮ್ಮ ಸುತ್ತಲೂ ಇವೆ. ಅವುಗಳಲ್ಲಿ ಬಿದಿರಿನ ಹುಲ್ಲು ಕೂಡ ಶಾಮಿಲಾಗಿದೆ.  ಹೌದು, ದಂತಮಂಜನದಿಂದ ಹಿಡಿದು ಹಳ್ಳಿಗಳಲ್ಲಿ ಮನೆಗಳ ಛಾವಣಿಗಳನ್ನು ಮಾಡಲು ಬಿದಿರಿನ ಮರವನ್ನು ಬಳಸಲಾಗುತ್ತದೆ. ಆದರೆ ಬಿದಿರಿನ ಮರ ಮಾತ್ರವಲ್ಲದೆ ಅದರ ಎಲೆಗಳೂ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?  ಹೌದು, ಬಿದಿರಿನ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇವುಗಳ ಬಳಕೆಯಿಂದ ಮಧುಮೇಹದಿಂದ ಹಿಡಿದು ಬೊಜ್ಜಿನವರೆಗೆ ಎಲ್ಲವನ್ನೂ ನಿಯಂತ್ರಿಸಬಹುದು. ಈ ಎಲೆಗಳು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಸಹ ಪರಿಣಾಮಕಾರಿಯಾಗಿ ನಿವಾರಿಸಬಹುದು. ಬಿದಿರಿನ ಎಲೆಗಳ ಬಳಕೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಹಾಗಾದರೆ ಬನ್ನಿ, ಬಿದಿರಿನ ಎಲೆಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.(Health News In Kannada)

ಮಧುಮೇಹದಲ್ಲಿ ಪ್ರಯೋಜನಕಾರಿಯಾಗಿದೆ
ಬಿದಿರಿನ ಎಲೆಗಳ ಸೇವನೆಯು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿತ್ತವೆ. ಅವು ಫೈಬರ್ನಲ್ಲಿ ಸಮೃದ್ಧವಾಗಿವೆ, ಬಿದಿರಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅವುಗಳ ಸೇವನೆಯು ದೇಹದಲ್ಲಿ ಇನ್ಸುಲಿನ್ ಸ್ಪೈಕ್ ಅನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ, ಇದು ಮಧುಮೇಹದಲ್ಲಿ ಪ್ರಯೋಜನಕಾರಿಯಾಗಿದೆ. ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ವೈದ್ಯರ ಸಲಹೆಯೊಂದಿಗೆ ನೀವು ಬಿದಿರಿನ ಎಲೆಗಳಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು.

ಬಾಯಿ ಅಲ್ಸರ್ ನಿಂದ ಪರಿಹಾರ ನೀಡುತ್ತದೆ
ಬಿದಿರಿನ ಎಲೆಗಳನ್ನು ಬಾಯಿಯ ಹುಣ್ಣುಗಳನ್ನು ತೆಗೆದುಹಾಕಲು ಸಹ ಬಳಸಬಹುದು. ಇದನ್ನು ಬಳಸಲು, ಬಿದಿರಿನ ಎಲೆಗಳನ್ನು ಚೆನ್ನಾಗಿ ಪುಡಿಮಾಡಿ. ಈಗ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಬಾಧಿತ ಜಾಗಕ್ಕೆ ಹಚ್ಚಿ. ಇದನ್ನು ನಿಯಮಿತವಾಗಿ ಕೆಲವು ದಿನಗಳವರೆಗೆ ಮಾಡುವುದರಿಂದ ಬಾಯಿ ಹುಣ್ಣುಗಳಿಂದ ಮುಕ್ತಿ ಪಡೆಯಬಹುದು.

ಒಣ ಕೆಮ್ಮಿನಿಂದ ಪರಿಹಾರವನ್ನು ಒದಗಿಸುತ್ತದೆ
ಒಣ ಕೆಮ್ಮಿನ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಬಿದಿರಿನ ಎಲೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಅಷ್ಟೇ ಅಲ್ಲ ಇದರ ಬಳಕೆಯಿಂದ ಉಸಿರಾಟ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು. ಇದಕ್ಕಾಗಿ ಬಿದಿರಿನ ಎಲೆಗಳನ್ನು ಒಣಗಿಸಿ ರುಬ್ಬುವ ಮೂಲಕ ಪುಡಿಯನ್ನು ತಯಾರಿಸಿ. ಈಗ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.

ಇದನ್ನೂ ಓದಿ-Chirata Health Benefits: ಕಾಡಿನಲ್ಲಿ ಬೆಳೆಯುವ ಈ ಕಡ್ಡಿ ರಕ್ತನಾಳಗಳಿಂದ ಕೆಟ್ಟ ಜಿಡ್ಡನ್ನು ತೊಲಗಿಸಲು ರಾಮಬಾಣ!

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಬಿದಿರಿನ ಎಲೆಗಳನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಗ್ಯಾಸ್, ಮಲಬದ್ಧತೆ, ಹೊಟ್ಟೆ ಉಬ್ಬರ ಅಥವಾ ಅತಿಸಾರದಂತಹ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಿದ್ದರೆ, ನೀವು ಬಿದಿರಿನ ಎಲೆಗಳಿಂದ ಮಾಡಿದ ಚಹಾ ಅಥವಾ ಕಷಾಯವನ್ನು ಸೇವಿಸಬಹುದು. ಇದು ಹೊಟ್ಟೆಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ-Weight Loss Magical Water: ಖಾಲಿ ಹೊಟ್ಟೆ ಒಂದು ಗ್ಲಾಸ್ ಈ ನೀರನ್ನು ಸೇವಿಸಿ, ಕೆಲವೇ ದಿನಗಳಲ್ಲಿ ತೂಕ ಇಳಿಕೆ ಗ್ಯಾರಂಟಿ!

ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ
ಬಿದಿರಿನ ಎಲೆಗಳನ್ನು ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಬಹುದು. ಇದಕ್ಕಾಗಿ, ತಾಜಾ ಬಿದಿರು ಎಲೆಗಳನ್ನು ಪುಡಿಮಾಡಿ. ಈ ಪೇಸ್ಟ್ ಅನ್ನು ಹಚ್ಚುವುದರಿಂದ ಚರ್ಮದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದಲ್ಲದೆ, ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹ ಸಹಾಯ ಮಾಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News