Finger Millet nutrition : ಸಸ್ಯಾಹಾರಿಗಳಿಗೆ ರಾಗಿ ಅತ್ಯುತ್ತಮ ಆಹಾರವಾಗಿದ್ದು, ಇದು ದೇಹಕ್ಕೆ ಹೆಚ್ಚಿನ ಪ್ರೋಟೀನ್ ನೀಡುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ, ತೂಕ ಇಳಿಸಲು ಸಹಾಯ ಮಾಡುತ್ತದೆ. ಅಲ್ಲದೆ, ರಾಗಿಯನ್ನು ತಿನ್ನುವುದರಿಂದ ಬಹುಬೇಗನೇ ಹೊಟ್ಟೆ ಹಸಿಯುವುದಿಲ್ಲ. ಅಲ್ಲದೆ ರಾಗಿ ಅನೇಕ ರೋಗಕ್ಕೆ ರಾಮಬಾಣವಾಗಿದೆ..


COMMERCIAL BREAK
SCROLL TO CONTINUE READING

ಕ್ಯಾಲ್ಸಿಯಂ ವಿಚಾರಕ್ಕೆ ಬಂದಾಗ, ಹಾಲು ಅಥವಾ ಹಾಲಿನ ಉತ್ಪನ್ನಗಳು ಕ್ಯಾಲ್ಸಿಯಂನ ಏಕೈಕ ಮೂಲವೆಂದು ನಂಬಲಾಗಿದೆ. ಆದರೆ ಇದು ಸಂಪೂರ್ಣವಾಗಿ ನಿಜವಲ್ಲ! ಇತರ ಧಾನ್ಯಗಳಿಗೆ ಹೋಲಿಸಿದರೆ ರಾಗಿ ಹಿಟ್ಟು ಕ್ಯಾಲ್ಸಿಯಂನ ಮೂಲಗಳಲ್ಲಿ ಒಂದಾಗಿದೆ. ಕ್ಯಾಲ್ಸಿಯಂ ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಬಿಲ್ಡಿಂಗ್ ಬ್ಲಾಕ್, ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ನಂತಹ ಮೂಳೆ ಸಮಸ್ಯೆಗಳಿಂದ ರಕ್ಷಿಸುತ್ತದೆ.


ಇದನ್ನೂ ಓದಿ:ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಕಡಿಮೆ ಕೊಲೆಸ್ಟ್ರಾಲ್ ...!


ಇದಲ್ಲದೆ, ಮೊಳಕೆಯೊಡೆದ ರಾಗಿಯನ್ನು ತಿನ್ನುವುದರಿಂದ, ಕ್ಯಾಲ್ಸಿಯಂ ಅಂಶವು ಶೇಕಡಾ 20 ರಷ್ಟು ಹೆಚ್ಚಾಗುತ್ತದೆ. ಏಕೆಂದರೆ ಮೊಳಕೆಯೊಡೆದ ರಾಗಿಯಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ. ಆದ್ದರಿಂದ, ರಾಗಿಯು ಮಕ್ಕಳಿಗೆ ಉತ್ತಮ ಆಹಾರದ ಆಯ್ಕೆಯಾಗಿದೆ.


ನೈಸರ್ಗಿಕವಾಗಿ ಕಬ್ಬಿಣದಿಂದ ಸಮೃದ್ಧವಾಗಿರುವ ರಾಗಿ, ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ರಾಗಿಯಲ್ಲಿ ವಿಟಮಿನ್ ಬಿ1 ಅಧಿಕವಾಗಿದ್ದು, ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಅಡೆನೊಸಿನ್ ಟ್ರೈಫಾಸ್ಫೇಟ್ (ಎಟಿಪಿ) ಅನ್ನು ಉತ್ಪಾದಿಸುತ್ತದೆ, ಇದು ದೇಹದಲ್ಲಿ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ:ಈ ಹೂವನ್ನು ತಿಂದರೆ ಯೂರಿಕ್ ಆಸಿಡ್, ಕಿಡ್ನಿ ಸಮಸ್ಯೆ ದೂರವಾಗುತ್ತದೆ..!


ರಾಗಿಯಲ್ಲಿ ನಾರಿನಂಶ ಹೇರಳವಾಗಿದ್ದು ಹಸಿವನ್ನು ಕಡಿಮೆ ಮಾಡುತ್ತದೆ ಹಾಗೂ ಆಹಾರದ ಚಲನೆಯನ್ನು ಸುಗಮಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಗೋಧಿ ಮತ್ತು ಇತರ ಹಿಟ್ಟುಗಳಿಗೆ ಹೋಲಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ವೇಗವಾಗಿ ಸ್ಥಿರಗೊಳಿಸುತ್ತದೆ. 


ರಾಗಿಯು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತದೆ. ತಲೆನೋವು, ನಿದ್ರಾಹೀನತೆ ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ಸಹಾಯ ಮಾಡುವ ಅಮೈನೋ ಆಮ್ಲಗಳ ಸಮೃದ್ಧ ಮೂಲವಾಗಿರುವುದರಿಂದ, ಇದು ವಿಶ್ರಾಂತಿ ಪಡೆಯಲು ದೇಹಕ್ಕೆ ನೈಸರ್ಗಿಕವಾಗಿ ಸಹಾಯ ಮಾಡುತ್ತದೆ.


ಇದನ್ನೂ ಓದಿ:ಲಿವರ್ ಆರೋಗ್ಯ ಕಾಪಾಡಲು ಈ 5 ಆಹಾರಗಳನ್ನು ಸೇವಿಸಿ


ರಾಗಿಯ ಅನೇಕ ಆರೋಗ್ಯ ಪ್ರಯೋಜನಗಳು : ಶಿಶುಗಳು ಮತ್ತು ಶುಶ್ರೂಷಾ ತಾಯಂದಿರಿಗೆ ಇದು ಉತ್ತಮ ಆಹಾರ. ಏಕೆಂದರೆ ರಾಗಿ ಅವರ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಾಯಂದಿರಲ್ಲಿ ಹಾಲಿನ ಉತ್ಪಾದನೆಯನ್ನು ಉತ್ತೇಜಿಸುವುದರಿಂದ ಹಿಡಿದು ಗರ್ಭಿಣಿ ಮಹಿಳೆಯರಲ್ಲಿ ಹಾರ್ಮೋನುಗಳ ಪ್ರಕ್ರಿಯೆಗಳನ್ನು ಸಮತೋಲನಗೊಳಿಸುವವರೆಗೆ, ರಾಗಿಯ ಸಹಾಯಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.