Vitamin A : `ವಿಟಮಿನ್-A` ಕೊರತೆಯ ಲಕ್ಷಣಗಳೇನು? ಸಮಸ್ಯೆಗಳು ಯಾವುವು? ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ
ಪ್ರತಿಯೊಬ್ಬರ ದೇಹಕ್ಕೆ ವಿಟಮಿನ್ ಎ ಮಾತ್ರ ಬಹಳ ಮುಖ್ಯವಾಗಿದೆ
ನಾವು ಸೇವಿಸುವಂತ ಆಹಾರದಿಂದ ನಮ್ಮ ದೇಹಕ್ಕೆ ಬೇಕಾಗುವಂತ ಜೀವಸತ್ವಗಳು ದೊರೆಯುತ್ತವೆ. ಈ ಜೀವಸತ್ವಗಳ ಕೊರತೆಯಿಂದ ನಿಮಗೆ ಅರಿವಿಲ್ಲದಂತೆ ಅನೇಕ ರೋಗಗಳು ನಿಮ್ಮ ದೇಹಕ್ಕೆ ದಾಪಿಡುತ್ತವೆ. ಹೀಗಾಗಿ ನಿಮಗೆ ಈ ಒಂದು ಜೀವಸತ್ವದಿಂದ ಉಂಟಾಗುವಂತ ಈ ರೋಗದ ಲಕ್ಷಣಗಳ ಬಗ್ಗೆ ಯಾವತ್ತೂ ನಿರ್ಲಕ್ಷ್ಯ ವಹಿಸಬೇಡಿ.
ಹೌದು, ಯಾವುದೇ ವ್ಯಕ್ತಿಯ ದೇಹಕ್ಕೆ ಎಲ್ಲಾ ರೀತಿಯ ಜೀವಸತ್ವಗಳು, ಖನಿಜಗಳು ಬೇಕಾಗುತ್ತದೆ. ರಾಸಾಯನಿಕವಾಗಿ ಸಾವಯವ ಸಂಯುಕ್ತಗಳಾಗಿರುವಂತ ಆ ಸಂಯುಕ್ತಗಳನ್ನು ವಿಟಮಿನ್ಸ್(Vitamins) ಎಂದು ಕರೆಯುತ್ತಾರೆ. ಅದರಲ್ಲೂ ಪ್ರತಿಯೊಬ್ಬರ ದೇಹಕ್ಕೆ ವಿಟಮಿನ್ ಎ ಮಾತ್ರ ಬಹಳ ಮುಖ್ಯವಾಗಿದೆ.
ಇದನ್ನೂ ಓದಿ : Food Combination For Weight Loss: ತೂಕ ಇಳಿಸಿಕೊಳ್ಳಲು ಈ ಆಹಾರವನ್ನು ಒಟ್ಟಿಗೆ ಸೇವಿಸಿ
ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಪ್ರಮುಖ ಪಾತ್ರವನ್ನು ವಹಿಸೋದಕ್ಕೆ ವಿಟಮಿನ್ ಎ(Vitamin A) ಬಹುಮುಖ್ಯ ಪಾತ್ರ ವಹಿಸಲಿದೆ. ಒಂದು ವೇಳೆ ವಿಟಮಿನ್-ಎ ಕೊರತೆ ನಿಮ್ಮ ದೇಹಕ್ಕೆ ಉಂಟಾದಲ್ಲಿ, ಈ ಕೆಳಗಿನ ರೋಗಗಳ ಕೊಂಪೆ ನಿಮ್ಮ ದೇಹವಾಗಿ ಬಿಡುತ್ತದೆ.
ಇದನ್ನೂ ಓದಿ : Benefits of betel leaf : ನಿಮಗೆ ಗೊತ್ತಾ..? ವೀಳ್ಯದೆಲೆಯ ನಾಲ್ಕು ಮಹತ್ವದ ಆರೋಗ್ಯಕಾರಿ ಗುಣ
ವಿಟಮಿನ್-ಎ ಕೊರತೆಯ ಲಕ್ಷಣಗಳು :
- ಸುಸ್ತಾಗುವಿಕೆ
- ತುಟಿ ಒಡೆಯುವುದು(Breaking the lip)
- ಮೂತ್ರ ಸೋಂಕು
- ಗಾಯ ತ್ವರಿತವಾಗಿ ಗುಣವಾಗದೇ ಇರೋದು..
- ಅತಿಸಾರ ಬೇಧಿ (Loose Motion)
- ಮಕ್ಕಳಲ್ಲಿ ದೈಹಿಕ ಬೆಳವಣಿಗೆಯ ಕೊರತೆ
ಇದನ್ನೂ ಓದಿ : Men Health : ವಿವಾಹಿತ ಪುರುಷರಿಗೆ ಅಗತ್ಯವಾದ 7 ಸ್ಥಳೀಯ ಗಿಡಮೂಲಿಕೆಗಳು : ಇವುಗಳನ್ನು ಸೇವಿಸುವುದರಿಂದ ಅದ್ಭುತ ಲಾಭ!
ವಿಟಮಿನ್-ಎ ಕೊರತೆಯಿಂದ ಉಂಟಾಗುವ ರೋಗಗಳು :
1. ಕುರುಡುತನ(Blindness)
2. ರಕ್ತಹೀನತೆ
3. ರೋಗ ನಿರೋಧಕ ಶಕ್ತಿ ಕಡಿಮೆ ಆಗೋದು(Immunity)
4. ಮೂತ್ರ ನಾಳದ ಸೋಂಕು
5. ಶ್ವಾಸಕೋಶದಲ್ಲಿ ಸೋಂಕು(Infection in the lungs)
ಇದನ್ನೂ ಓದಿ : ಕೆಲವೊಂದು ತರಕಾರಿಗಳನ್ನು ಹಸಿ ಹಸಿ ತಿನ್ನಬೇಕು, ಯಾಕೆ ಗೊತ್ತಾ..?
ಈ ಮೇಲಿನಂತೆ ವಿಟಮಿನ್-ಎ ಕೊರತೆ ಉಂಟಾದಾಗ ರೋಗದ ಲಕ್ಷಣಗಳು, ರೋಗಗಳು(Diseases) ಉಂಟಾಗೋದನ್ನು ತಡೆಯಬೇಕಾದರೆ ನೀವು ತಪ್ಪದೆ ವಿಟಮಿನ್-ಎ ಹೇರಳವಾಗಿ ದೊರೆಯುವಂತ ಆಹಾರ ಪದಾರ್ಥಗಳನ್ನು ತಪ್ಪದೇ ಸೇವಿಸಿ
ಇದನ್ನೂ ಓದಿ : Banana Peel Face Pack: ಮುಖದಲ್ಲಿನ ಕಲೆ ನಿವಾರಣೆಗೆ ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್
ವಿಟಮಿನ್-ಎ ಹೇರಳವಾಗಿ ದೊರೆಯುವಂತ ಆಹಾರಗಳು :
ಮೊಟ್ಟೆ, ಸಿರಿಧಾನ್ಯಗಳು, ಹಸಿರು ಸೊಪ್ಪು, ತರಕಾರಿಗಳು(Vegetables), ಹಳದಿ ಕಾಳುಗಳು
ಕ್ಯಾರೇಟ್, ಮಾವಿನಹಣ್ಣು, ಕಿತ್ತಳೆ,
ಇದನ್ನೂ ಓದಿ : ಮಾರುಕಟ್ಟೆಯಿಂದ ತರುವ ಖಾರದ ಪುಡಿಯಲ್ಲಿ ಕಲಬೆರೆಕೆ ಇದೆಯಾ ಎಂದು ಪತ್ತೆ ಹಚ್ಚುವುದು ಹೇಗೆ?
ಈ ಎಲ್ಲಾ ಆಹಾರ ಧಾನ್ಯಗಳನ್ನು ತಿನ್ನುವ ಮೂಲಕ, ವಿಟಮಿನ್-ಎ ಕೊರತೆಯಿಂದ ದೂರಾಗಿ, ಜೊತೆಗೆ ಈ ರೋಗದ ಲಕ್ಷಣಗಳಿದ್ದರೇ.. ನಿರ್ಲಕ್ಷಿಸಲು ಬೇಡಿ. ನಿಮ್ಮ ರೋಗದ ಲಕ್ಷಣಗಳ ಅನುಸಾರವಾಗಿ, ವೈದ್ಯರನ್ನು ಭೇಟಿಯಾಗಿ, ಚಿಕಿತ್ಸೆ ಪಡೆಯೋದು ಮರೆಯಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.