Best time to drink water : ನೀರಿಲ್ಲದೆ ಜೀವನ ಸಾಧ್ಯವಿಲ್ಲ ಎಂದು ನೀವು ತಿಳಿದಿರಬೇಕು. ಆರೋಗ್ಯವಾಗಿರಲು, ನಿಯಮಿತವಾಗಿ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಆದರೆ ನೀರು ಕುಡಿಯಲು ಸರಿಯಾದ ಸಮಯ ಮತ್ತು ಸರಿಯಾದ ವಿಧಾನದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಗಂಟಲು ಒಣಗಲು ಪ್ರಾರಂಭಿಸಿದಾಗ ಮಾತ್ರ ಹೆಚ್ಚಿನ ಜನರು ನೀರು ಕುಡಿಯುತ್ತಾರೆ. ಆದರೆ, ವಾಸ್ತವವಾಗಿ ದೇಹಕ್ಕೆ ನೀರಿನ ಅಗತ್ಯವಿದ್ದಾಗ ಮಾತ್ರ ಕುಡಿಯಬೇಕು ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. 


COMMERCIAL BREAK
SCROLL TO CONTINUE READING

ಬೆಳಿಗ್ಗೆ ಖಾಲಿ ಹೊಟ್ಟೆ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಬೆಳಿಗ್ಗೆ ನಿಯಮಿತವಾಗಿ ನೀರು ಕುಡಿಯಿರಿ. ರಾತ್ರಿಯ ಉಪವಾಸದ ನಂತರ ದೇಹಕ್ಕೆ ಶಕ್ತಿಯ ಅಗತ್ಯವಿರುವಾಗ ಒಂದು ಲೋಟ ನೀರು ಕುಡಿಯುವುದು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. 


ಊಟಕ್ಕೆ ಮೊದಲು : ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ಜಿಐ ಟ್ರಾಕ್ಟ್ ಅನ್ನು ತೆರವುಗೊಳಿಸುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ರೀತಿ ನೀರು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಊಟಕ್ಕೆ 30 ನಿಮಿಷಗಳ ಮೊದಲು 500 ಮಿಲಿ ನೀರನ್ನು ಕುಡಿಯುವುದರಿಂದ 12 ವಾರಗಳಲ್ಲಿ ಮೂರು ಕೆಜಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಅಧ್ಯಯನವು ಸಾಬೀತಾಗಿದೆ. 


ಇದನ್ನೂ ಓದಿ: ಅಡುಗೆ ಮನೆಯಲ್ಲಿರುವ ಈ 2 ಸಿಹಿ-ಹುಳಿ ಪದಾರ್ಥ ಬಳಸಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಗೆ ಬ್ರೇಕ್ ಹಾಕಿ!


ಮಲಗುವ ಮೊದಲು : ರಾತ್ರಿ ಮಲಗುವ ಮುನ್ನ ದೇಹವನ್ನು ಹೈಡ್ರೇಟ್ ಮಾಡಲು ನೀರು ಕುಡಿಯಿರಿ. ಮಲಗುವ ಮುನ್ನ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶ ಹೊರಹೋಗುತ್ತದೆ ಅಲ್ಲದೆ, ರಕ್ತ ಸಂಚಾರವೂ ಹೆಚ್ಚುತ್ತದೆ. ಇದು ಹೃದಯಾಘಾತದ ಅಪಾಯವನ್ನೂ ಕಡಿಮೆ ಮಾಡುತ್ತದೆ.


ಸ್ನಾನ ಮಾಡುವ ಮೊದಲು : ಸ್ನಾನ ಮಾಡುವ ಮೊದಲು ಬೆಚ್ಚಗಿನ ನೀರನ್ನು ಕುಡಿಯುವುದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸ್ನಾನ ಮಾಡುವ ಮೊದಲು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ ಹಾಗೂ ರಕ್ತ ಪರಿಚಲನೆ ಸುಧಾರಿಸುತ್ತದೆ. ಅಲ್ಲದೆ, ವ್ಯಾಯಾಮದ ಮೊದಲು ಮತ್ತು ನಂತರ ನಿಯಮಿತವಾಗಿ ನೀರನ್ನು ಕುಡಿಯಿರಿ.


(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.