Bad Cholesterol: ಅಡುಗೆ ಮನೆಯಲ್ಲಿರುವ ಈ 2 ಸಿಹಿ-ಹುಳಿ ಪದಾರ್ಥ ಬಳಸಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಗೆ ಬ್ರೇಕ್ ಹಾಕಿ!

Bad Cholesterol Control Tips: ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಕೇವಲ ದುಬಾರಿ ಔಷಧಿಗಳಲ್ಲದೆ ನಿಮ್ಮ ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ರುಚಿಕರವಾದ ವಸ್ತುಗಳು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಬಲ್ಲವು, ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ. (Health News In Kannada)  

Written by - Nitin Tabib | Last Updated : Feb 22, 2024, 03:23 PM IST
  • ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ,
  • ಜೇನುತುಪ್ಪ ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ಬೆರೆಸಿ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ ಡಿಎಲ್ ಶೇಖರಣೆಯಾಗುವುದನ್ನು ತಡೆಯಲು ತುಂಬಾ ಸಹಕಾರಿಯಾಗುತ್ತದೆ.
  • ಜೇನುತುಪ್ಪದಲ್ಲಿರುವ ವಿಶೇಷ ಅಂಶಗಳು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಹೀರಿಕೊಳ್ಳುತ್ತವೆ,
  • ಆದರೆ ಒಣದ್ರಾಕ್ಷಿ ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ವಿಶೇಷ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ,
Bad Cholesterol: ಅಡುಗೆ ಮನೆಯಲ್ಲಿರುವ ಈ 2 ಸಿಹಿ-ಹುಳಿ ಪದಾರ್ಥ ಬಳಸಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಗೆ ಬ್ರೇಕ್ ಹಾಕಿ! title=

LDL Cholesterol Control Remedies: ದೇಹದಲ್ಲಿ ಹೆಚ್ಚಾಗುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಸಣ್ಣಪುಟ್ಟ ವಿಷಯಗಳ ಕಾಳಜಿವಹಿಸುವುದು ತುಂಬಾ ಮುಖ್ಯ. ಇತ್ತೀಚಿನ ದಿನಗಳಲ್ಲಿ ಕಾಯಿಲೆಗಳ ಅಪಾಯ ಹೆಚ್ಚಾಗಿದ್ದು, ಇದರಿಂದ ಜನರು ಪದೇ ಪದೇ ಔಷಧಿ ಸೇವಿಸುವ ಅಭ್ಯಾಸಕ್ಕೆ ಬಂದಿದ್ದಾರೆ. ಪದೇ ಪದೇ ಔಷಧಿಗಳನ್ನು ಸೇವಿಸುವುದು ಉತ್ತಮ ಆಯ್ಕೆಯಲ್ಲ ಮತ್ತು ವಿಶೇಷವಾಗಿ ಅಧಿಕ ಕೊಲೆಸ್ಟ್ರಾಲ್‌ನಂತಹ ಕಾಯಿಲೆ ಸಂದರ್ಭಗಳಲ್ಲಿ, ಈ ಕೆಲಸ ಮರೆತೂ ಕೂಡ ಮಾಡುವುದು ಉಚಿತವಲ್ಲ. ವಾತವಾದಲ್ಲಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಔಷಧಿಗಳಿದ್ದು, ಅವುಗಳ ಸಹಾಯದಿಂದ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಆದರೆ ಔಷಧಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನೀವು ಬಯಸುತ್ತಿದ್ದಾರೆ, ಇದು ತುಂಬಾ ಒಳ್ಳೆಯ ಸಂಗತಿ ಎಂದರೆ ತಪ್ಪಲ್ಲ, ಇದಕ್ಕಾಗಿ ನೀವು ಕೆಲವು ಮನೆಮದ್ದುಗಳನ್ನು ಸಹ ಅಳವಡಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿಯೇ ಇಂತಹ ಅನೇಕ ಪರಿಹಾರಗಳು ಲಭ್ಯವಿದ್ದು, ಅವುಗಳ ಸಹಾಯದಿಂದ ನೀವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇಂದು ನಾವು ಈ ಪರಿಹಾರಗಳಲ್ಲಿ ಒಂದರ ಕುರಿತು ಮಾಹಿಯನ್ನು ನೀಡುತ್ತಿದ್ದೇವೆ, ಈ ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಇದ್ದೇ ಇರುತ್ತದೆ ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯಲು ಅವು ಸಾಕಷ್ಟು ಸಹಾಯ ಮಾಡುತ್ತವೆ.(Health News In Kannada)

ಈ ಎರಡು ಹುಳಿ ಮತ್ತು ಸಿಹಿ ಪದಾರ್ಥಗಳಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು
ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ, ಜೇನುತುಪ್ಪ ಮತ್ತು ಒಣದ್ರಾಕ್ಷಿಗಳನ್ನು ಒಟ್ಟಿಗೆ ಬೆರೆಸಿ ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ ಡಿಎಲ್ ಶೇಖರಣೆಯಾಗುವುದನ್ನು ತಡೆಯಲು ತುಂಬಾ ಸಹಕಾರಿಯಾಗುತ್ತದೆ. ಜೇನುತುಪ್ಪದಲ್ಲಿರುವ ವಿಶೇಷ ಅಂಶಗಳು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಹೀರಿಕೊಳ್ಳುತ್ತವೆ, ಆದರೆ ಒಣದ್ರಾಕ್ಷಿ ಫೈಬರ್ ಮತ್ತು ಪೊಟ್ಯಾಸಿಯಮ್‌ನಂತಹ ವಿಶೇಷ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇವುಗಳ ಸೇವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸರಿಯಾದ ವಿಧಾನ ಮತ್ತು ಸೇವನೆಯ ಸಮಯ
ನೀವು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಬಯಸುತ್ತಿದ್ದರೆ, ಜೇನುತುಪ್ಪ ಮತ್ತು ಒಣದ್ರಾಕ್ಷಿಯನ್ನು ಸರಿಯಾದ ಸರಿಯಾದ ವಿಧಾನದಲ್ಲಿ ಸೇವಿಸುವುದು ತುಂಬಾ ಮುಖ್ಯ. ಇದಕ್ಕಾಗಿ ರಾತ್ರಿಯಲ್ಲಿ, ಒಂದು ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಕನಿಷ್ಠ 5 ರಿಂದ 7 ಒಣದ್ರಾಕ್ಷಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಮಿಶ್ರಣ ಮಾಡಿ ಹಾಗೆಯೇ ಇರಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರಿನಲ್ಲಿ ಹಾಕಿ ಸೇವಿಸಿ. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ನೀವು ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಸೇವಿಸಬಹುದು, ಆದರೆ ಚಳಿಗಾಲದಲ್ಲಿ ಇದನ್ನು ಪ್ರತಿದಿನ ಸೇವಿಸಬಹುದು.

ಇದನ್ನೂ ಓದಿ-Desi Ghee Benefits: ತೂಕ ಹೆಚ್ಚಳ ಅಲ್ಲ ಶರೀರವನ್ನು ಆಂತರಿಕವಾಗಿ ಗಟ್ಟಿಗೊಳಿಸುತ್ತೆ ದೇಸಿ ತುಪ್ಪ!

ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಹಲವಾರು ಮನೆಮದ್ದುಗಳಿವೆ ಮತ್ತು ಜೇನುತುಪ್ಪ ಮತ್ತು ಒಣದ್ರಾಕ್ಷಿಗಳೊಂದಿಗೆ ಈ ಪಾಕವಿಧಾನವು ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಕೊಲೆಸ್ಟ್ರಾಲ್ ಒಂದು ಗಂಭೀರ ಕಾಯಿಲೆಯಾಗಿದೆ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯವಾಗಿದೆ ಏಕೆಂದರೆ ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಅದು ನಂತರ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಮಾರಣಾಂತಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಮಿತಿಮೀರಿದ ಸಂದರ್ಭಗಳಲ್ಲಿ ವೈದ್ಯರನ್ನು ಸೂಕ್ತಕಾಲಕ್ಕೆ ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ. 

ಇದನ್ನೂ ಓದಿ-High Cholesterol ಕಡಿಮೆ ಮಾಡಲು ನಿಯಮಿತವಾಗಿ ಖಾಲಿ ಹೊಟ್ಟೆ ಈ ನೀರು ಸೇವಿಸಿ, ಸಿಗುತ್ತವೆ ಇತರ ಹಲವು ಲಾಭಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News