Weight Loss tips : ಇತ್ತೀಚಿಗೆ ತೂಕವನ್ನು ಕಳೆದುಕೊಳ್ಳುವುದು ದೊಡ್ಡ ಸವಾಲಾಗಿದೆ. ಬಿಡುವಿಲ್ಲದ ಜೀವನಶೈಲಿ, ತ್ವರಿತ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಅನೇಕ ಜನರಿಗೆ ತಮ್ಮ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆಹಾರವು ಸಹ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಈ ಕಾರಣದಿಂದಾಗಿ, ದೇಹದ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಸರಿಯಾಗಿ ಡಯಟ್ ಮಾಡುತ್ತಿದ್ದರೂ ತೂಕ ಹೆಚ್ಚಾಗುತ್ತಿದ್ದರೆ ಅದಕ್ಕೆ ಕಾರಣ ಇಲ್ಲಿವೆ ನೋಡಿ..


COMMERCIAL BREAK
SCROLL TO CONTINUE READING

ತೂಕ ಹೆಚ್ಚಳ: ತೂಕ ಹೆಚ್ಚಾದಂತೆ ದೇಹದ ಆಕಾರ ಕೆಡತುತ್ತದೆ.. ಈ ಕಾರಣದಿಂದಾಗಿ, ಆತ್ಮವಿಶ್ವಾಸ ಕುಗ್ಗುತ್ತದೆ. ಹೆಚ್ಚಿನ ತೂಕದಿಂದಾಗಿ, ಸಣ್ಣ ಕೆಲಸಗಳನ್ನು ಮಾಡುವಾಗಲೂ ಸುಸ್ತು, ಸ್ವಲ್ಪ ನಡೆದರೂ ಅಥವಾ ಮೆಟ್ಟಿಲುಗಳನ್ನು ಹತ್ತಿದರೂ ಉಸಿರಾಟದ ತೊಂದರೆ, ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. 


ಇದನ್ನೂ ಓದಿ:ಗುಲಾಬಿ, ಮಲ್ಲಿಗೆ, ಕನಕಾಂಬರ..! ಯುವತಿಯರೇ ಯಾವ ಹೂವನ್ನು ಮುಡಿದರೆ ಆರೋಗ್ಯ, ಧನಲಾಭ ಗೊತ್ತೆ..?


ಬೊಜ್ಜು ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತದೊತ್ತಡ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ತೂಕ ಹೆಚ್ಚಾಗುವುದನ್ನು ನಿರ್ಲಕ್ಷಿಸಬಾರದು. ಬದಲಿಗೆ ಸರಿಯಾದ ಸಮಯದಲ್ಲಿ ಅದನ್ನು ನಿಯಂತ್ರಿಸುವುದು ಮುಖ್ಯ.


ದೈಹಿಕ ಚಟುವಟಿಕೆಯ ಕೊರತೆ: ನೀವು ಸರಿಯಾದ ಆಹಾರವನ್ನು ಅನುಸರಿಸಿದರೂ, ದೈಹಿಕ ಚಟುವಟಿಕೆ ಇಲ್ಲದಿದ್ದರೆ, ನಿಮ್ಮ ತೂಕ ಹೆಚ್ಚಾಗುತ್ತದೆ. 8 ಗಂಟೆಗಳ ಕಾಲ ನಿರಂತರವಾಗಿ ಕುಳಿತುಕೊಳ್ಳುವ ಜನರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ನೀವೂ ಸಹ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಕುಳಿತುಕೊಳ್ಳುವವರಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಲಘು ವ್ಯಾಯಾಮ, ಜಾಗಿಂಗ್, ವಾಕಿಂಗ್ ಇತ್ಯಾದಿಗಳನ್ನು ಮಾಡುವುದು ಉತ್ತಮ.  


ಹಾರ್ಮೋನ್ ಸಮತೋಲನ: ನೀವು ಸರಿಯಾದ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸಿದರೂ ಸಹ ನಿಮ್ಮ ತೂಕ ಹೆಚ್ಚಾಗುತ್ತಿದ್ದೇಯೆ..? ಇದಕ್ಕೆ ಹಾರ್ಮೋನ್ ಅಸಮತೋಲನವೂ ಪ್ರಮುಖ ಕಾರಣವಾಗಿರಬಹುದು. ಥೈರಾಯ್ಡ್ ಮಟ್ಟವು ಸಮತೋಲನದಲ್ಲಿಲ್ಲದಿದ್ದರೆ, ಚಯಾಪಚಯವು ನಿಧಾನಗೊಳ್ಳುತ್ತದೆ. ಈ ಕಾರಣದಿಂದಾಗಿ, ನಿಮ್ಮ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. 


ಇದನ್ನೂ ಓದಿ:ಗುಲಾಬಿ, ಮಲ್ಲಿಗೆ, ಕನಕಾಂಬರ..! ಯುವತಿಯರೇ ಯಾವ ಹೂವನ್ನು ಮುಡಿದರೆ ಆರೋಗ್ಯ, ಧನಲಾಭ ಗೊತ್ತೆ..?


ನಿದ್ರೆ: ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ, ವಿಶ್ರಾಂತಿಯೂ ಅಷ್ಟೇ ಮುಖ್ಯ. ಮಲಗುವ ಕ್ರಮ ಚೆನ್ನಾಗಿಲ್ಲದಿದ್ದರೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂದರೆ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಅದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. 7 ರಿಂದ 8 ಗಂಟೆ ನಿದ್ದೆ ಮಾಡಿ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ