Right Way To Drink Water - ಜಲವೇ ಜೀವನ ಎಂಬ ಮಾತನ್ನು ನಾವು ಚಿಕ್ಕಂದಿನಿಂದಲೂ ಕೇಳುತ್ತ ಬಂದಿದ್ದೇವೆ. ನಮ್ಮ ಶರೀರದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ, ನಮ್ಮ ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು (Water) ಇರಬೇಕು. ಅದರಲ್ಲೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಶರೀರದಿಂದ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ಮೂಲಕ ನೀರಿನ ವಿಸರ್ಜನೆಯಾಗುವ ಕಾರಣ ಡಿಹೈಡ್ರೆಶನ್ (Dehyderation) ಸಮಸ್ಯೆ ಎದುರಾಗುತ್ತದೆ. ಇದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಶರೀರದಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳ ಸೋಂಕು ಹರಡಿದಾಗಲೂ ಕೂಡ ವೈದ್ಯರು ನೀರಿನ ಸೇವನೆ ಹೆಚ್ಚಿಸುವಂತೆ ಸಲಹೆ ನೀಡುತ್ತಾರೆ. ಆದರೆ, ನೀರು ಕುಡಿಯುವುದಕ್ಕೂ ಸರಿಯಾದ ಹಾಗೂ ತಪ್ಪಾದ ವಿಧಾನಗಳಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಕುರಿತು ನೀವು ಮನೆಯ ಹಿರಿಯರು ಹೇಳುವ ಮಾತನ್ನು ಹಲವು ಬಾರಿ ಕೇಳಿರಬಹುದು. ಇಲ್ಲಿ ನೀಡಲಾಗಿರುವ ಕೆಲ ಸಲಹೆಗಳು ನಿಮಗೆ ಲಾಭ ನೀಡಲಿವೆ.


COMMERCIAL BREAK
SCROLL TO CONTINUE READING

ಕೆಳಗೆ ಕುಳಿತು ನೀರನ್ನು ಕುಡಿಯಿರಿ (Drink Water In Sitting Posture)
ಈ ಕುರಿತು ಇದುವರೆಗೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ಆದರೆ ಆಯುರ್ವೇದದ ಪ್ರಕಾರ ನಿಂತು ನೀರು ಕುಡಿಯುವುದರಿಂದ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ನಾವು ನಿಂತು ನೀರನ್ನು ಕುಡಿಯುವಾಗ ದೇಹದಲ್ಲಿನ ದ್ರವದ ಸಮತೋಲನ ಹದಗೆಡುತ್ತದೆ ಎಂದು ಹೇಳಲಾಗುತ್ತದೆ. ಇದು ದೇಹದಲ್ಲಿ ಕೀಲುನೋವಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೂ ಕೂಡ, ವೈದ್ಯರು ಈ ವಾದವನ್ನು ಒಪ್ಪುವುದಿಲ್ಲ.


ಇದನ್ನೂ ಓದಿ-Benefits Milk-jaggery : ಚೆನ್ನಾಗಿ ನಿದ್ರೆ ಬರಲು ಸೇವಿಸಿ ಹಾಲು-ಬೆಲ್ಲ! ಇಲ್ಲಿದೆ ಅದರ ಪ್ರಯೋಜನಗಳು!


ಗ್ಲಾಸ್ ಮೂಲಕ ನೀರನ್ನು ಸೇವಿಸಿ (Drink Water Through Glass)
ಆಗಾಗ್ಗೆ ಜನರು ಬಾಟಲಿಯಿಂದ ನೇರವಾಗಿ ನೀರನ್ನು (Water) ಕುಡಿಯುತ್ತಾರೆ. ಮನೆಯ ಹಿರಿಯರು ಸಹ ಈ ಬಗ್ಗೆ ಎಚ್ಚರಿಕೆ ಕೂಡ ನೀಡುತ್ತಾರೆ. ಆದರೆ ಅವರ ಸಲಹೆಯ ಕಡೆಗೆ ಯಾರೂ ಗಮನ ಕೊಡುವುದಿಲ್ಲ. ಬಾಟಲಿಯಿಂದ ನೀರು ಕುಡಿಯುವುದು ಸರಿಯಲ್ಲ. ನಾವು ಯಾವಾಗಲೂ ಗ್ಲಾಸ್ ನಲ್ಲಿ ನೀರನ್ನು ಸುರಿದು ಗುಟುಕಿನ ಪದ್ಧತಿಯಲ್ಲಿ ನೀರನ್ನು ಕುಡಿಯಬೇಕು. ಇದಕ್ಕೆ ಒಂದು ಕಾರಣವೆಂದರೆ, ನಾವು ಬಾಟಲಿಯಿಂದ ನೇರವಾಗಿ ನೀರನ್ನು ಕುಡಿಯುವಾಗ, ಒಂದು ಅಥವಾ ಎರಡು ಸಿಪ್‌ಗಳಲ್ಲಿ, ಆ ಸಮಯಕ್ಕೆ ಗಂಟಲು ತೇವಗೊಳ್ಳುತ್ತದೆ ಮತ್ತು ನಾವು ಕಡಿಮೆ ನೀರು ಕುಡಿಯುತ್ತೇವೆ. ನೀವು ಗ್ಲಾಸ್ ನಲ್ಲಿ ನೀರನ್ನು ಕುಡಿಯುತ್ತಿದ್ದರೆ, ನೀವು ಸಂಪೂರ್ಣ ಗ್ಲಾಸ್ ಅನ್ನು ಮುಗಿಸುವ ಕಾರಣ ಹೆಚ್ಚು ನೀರು ದೇಹವನ್ನು ತಲುಪುತ್ತದೆ. ಒಂದು ಸಣ್ಣ ಸಿಪ್ ನೀರನ್ನು ತೆಗೆದುಕೊಂಡು ಅದನ್ನು ನುಂಗಿ ನಂತರ ಉಸಿರಾಡಿ. ಆಯುರ್ವೇದದಲ್ಲಿ, ನೀರನ್ನು ಕುಡಿಯಲು ಇದು ಸರಿಯಾದ ಮಾರ್ಗವೆಂದು ಸೂಚಿಸಲಾಗಿದೆ.


ಇದನ್ನೂ ಓದಿ- ಬೇಡಿಕೆ ದುಪ್ಪಟ್ಟು, ಬೆಲೆ ನಾಲ್ಕುಪಟ್ಟು: ನಿಮ್ಮ ಬಜೆಟಿನಲ್ಲೇ ಹೆಲ್ತ್ ಕಾಪಾಡಿ.


ಅತಿ ತಂಪಾದ ನೀರು ಸೇವನೆ ಉಚಿತವಲ್ಲ (Cold Water Is Harmful)
ತುಂಬಾ ತಣ್ಣೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಉಗುರು ಬೆಚ್ಚನೆ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನೀರು ತುಂಬಾ ತಂಪಾಗಿರಬಾರದು, ಹೆಚ್ಚು ಬಿಸಿಯಾಗಿರಬಾರದು, ಆದರೆ ಕೋಣೆಯ ಉಷ್ಣಾಂಶದಷ್ಟು ಇರಬೇಕು. ನಿಮಗೆ ಬಾಯಾರಿಕೆಯಾದಾಗ ನೀರು ಕುಡಿಯಿರಿ. ಪ್ರತಿದಿನ ಎರಡೂವರೆ ಮೂರು ಲೀಟರ್ ನೀರು ಕುಡಿಯುವ ಗುರಿ ಹೊಂದಿರಿ.


ಇದನ್ನೂ ಓದಿ-Covid Positive Diet: ಕರೋನಾ ರೋಗಿಗಳು ಏನು ತಿನ್ನಬೇಕು? ಇಲ್ಲಿದೆ ಲಿಸ್ಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.