Water-Ajwain Water Benefits: ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಮತ್ತು ಅಜೀವಾನದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅಜೀವಾನ-ಮೆಂತ್ಯ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಸಮಸ್ಯೆ ದೂರ

Last Updated : Apr 11, 2021, 01:25 PM IST
  • ತೂಕ ಇಳಿಸಿಕೊಳ್ಳಲು ಅಜೀವಾನ-ಮೆಂತ್ಯ ನೀರು
  • ರೋಗನಿರೋಧಕ ಶಕ್ತಿ ಹೆಚ್ಚಿಸಲು ಅಜೀವಾನ-ಮೆಂತ್ಯ ನೀರು
  • ಕಾಂತಿಯುತ ಚರ್ಮಕ್ಕೆ ಬಳಸಿ ಅಜೀವಾನ-ಮೆಂತ್ಯ ನೀರು
Water-Ajwain Water Benefits: ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಮತ್ತು ಅಜೀವಾನದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ? title=

ಭಾರತದಲ್ಲಿ ಮೆಂತ್ಯ ಮತ್ತು ಅಜೀವಾನ ಬಳಸದ ಯಾವ ಮನೆಯು ಇಲ್ಲ. ಇವೆರಡನ್ನೂ ಅಡುಗೆಮನೆಯಲ್ಲಿ ಮಸಾಲೆಗಳಾಗಿ ಬಳಸಲಾಗುತ್ತದೆ. ಮೆಂತ್ಯ ಮತ್ತು ಅಜೀವಾನ ಅನೇಕ ಆಯುರ್ವೇದ ಗುಣಗಳನ್ನು ಹೊಂದಿದೆ. ಆದರೆ ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯಕ್ಕೆ  ತುಂಬಾ ಪ್ರಯೋಜನಗಳಿವೆ.

ನೀವು ನಿಮ್ಮ ದೇಹ ತೂಕ ಇಳಿಸಿಕೊಳ್ಳಲು ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಲು ಬಯಸಿದರೆ, ಅಜೀವಾನ-ಮೆಂತ್ಯ ನೀರ(Water-Ajwain Water Benefits)ನ್ನು ಸೇವಿಸುವುದು ಸೂಕ್ತ ಪರಿಹಾರವಾಗಿದೆ. ಈ ಪಾನೀಯವು ನಮ್ಮ ದೇಹಕ್ಕೆ ಉತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 

ಇದನ್ನೂ ಓದಿ :Summer Food: ಪುರುಷರೇ ಬೇಸಿಗೆಯಲ್ಲಿ ತಪ್ಪದೆ ಸೇವಿಸಿ ಈ ಒಣ ಹಣ್ಣು; ಪಡೆಯಿರಿ ಅದ್ಭುತ ಪ್ರಯೋಜನ!

ಅಜೀವಾನ-ಮೆಂತ್ಯ ನೀರನ್ನು ತಯಾರಿಸುವುದು ಹೇಗೆ? ಅಜೀವಾನ- ಮತ್ತು ಮೆಂತ್ಯವನ್ನು ರಾತ್ರಿ(Night) ನೀರಿನಲ್ಲಿ ನೆನೆಸಿ ನಂತರ ಬೆಳಿಗ್ಗೆ ಎದ್ದು ಅದನ್ನ ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಇದನ್ನೂ ಓದಿ : Home Remedies For Good Sleep: ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ನಿಮ್ಮ ಅಡುಗೆಮನೆಯಲ್ಲಿಯೇ ಇದೆ ಪರಿಹಾರ

1. ತೂಕ ಇಳಿಸಿಕೊಳ್ಳಲು ಅಜೀವಾನ-ಮೆಂತ್ಯ ನೀರು : 
ಅಜೀವಾನ-ಮೆಂತ್ಯ ನೀರು ದೇಹ  ತೂಕ ಇಳಿಸಿಕೊಳ್ಳಲು ಮನೆ(Home)ಮದ್ದು. ಜನರು ಇದನ್ನು ಹಳೆ ಕಾಲದಿಂದಲೂ ಬಳಸುತ್ತಿದ್ದಾರೆ. ಅಜೀವಾನ ಮತ್ತು ಮೆಂತ್ಯ ಎರಡೂ ರೋಗ ನಿರೋಧಕ ಗುಣಗಳನ್ನು ಹೊಂದಿವೆ, ಇದು ಚಯಾಪಚಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ. ಇದಲ್ಲದೆ, ಈ ಪಾನೀಯವು ಫ್ಯಾಟ್ ಬರ್ನ್ ಮಾಡುವ ಗುಣಗಳನ್ನು ಸಹ ಹೊಂದಿದೆ, ಇದು ದೇಹದ ಹೆಚ್ಚುವರಿ ಕೊಬ್ಬನ್ನು ಬಹಳ ಸುಲಭವಾಗಿ ಕಡಿಮೆ ಮಾಡುತ್ತದೆ. ನೀವು ಕೂಡ ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಬೆಳಿಗ್ಗೆ ಈ ನೀರನ್ನು ಕುಡಿಯಿರಿ.

ಇದನ್ನೂ ಓದಿ : Food Storage Tips: ಬೇಸಿಗೆಯಲ್ಲಿ ಈ ವಸ್ತುಗಳನ್ನು ಫ್ರಿಜ್‌ನಲ್ಲಿ ದೀರ್ಘಕಾಲ ಇಡಬೇಡಿ
 
2. ಮಧುಮೇಹವನ್ನು ನಿಯಂತ್ರಿಸಲು ಅಜೀವಾನ-ಮೆಂತ್ಯ ನೀರು:
ನಿಮಗೆ ಮಧುಮೇಹ(Diabetes) ಇದೆಯಾ ಹಾಗಿದ್ರೆ, ನೀವು ಅಜೀವಾನ-ಮೆಂತ್ಯ ನೀರನ್ನು ನಿಮ್ಮ ಚಿಕಿತ್ಸೆಗಾಗಿ ಬಳಸಿಕೊಳ್ಳಬಹುದು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿದಿನ ಬೆಳಿಗ್ಗೆ ಎದ್ದ ನಂತರ ನೀವು ಅಜೀವಾನ-ಮೆಂತ್ಯ ನೀರನ್ನು ಸೇವಿಸಬೇಕು. ನಂತ್ರ ಅದರ ಫಲಿತಾಂಶ ನೋಡಿ.

ಇದನ್ನೂ ಓದಿ : Vinegar Onion Benefits: ಈರುಳ್ಳಿ ತಿನ್ನುವ ಮೊದಲು ಈ ಕೆಲಸ ಮಾಡಿ; ಈ 10 ಅದ್ಭುತ ಪ್ರಯೋಜನ ಪಡೆಯಿರಿ!

3. ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಅಜೀವಾನ-ಮೆಂತ್ಯ ನೀರು : 
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಅಜೀವಾನ-ಮೆಂತ್ಯ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಸಮಸ್ಯೆ(Digestion Problem)ಯನ್ನು ದೂರ ಮಾಡಬಹುದು. ಈ  ನೀರಿನಲ್ಲಿ ಫೈಬರ್, ಮೆಗ್ನೀಸಿಯಮ್, ಮ್ಯಾಂಗನೀಸ್ ನಂತಹ ಅನೇಕ ಪೋಷಕಾಂಶಗಳಿವೆ, ಇದು ಆಮ್ಲೀಯತೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್

4. ಕಾಂತಿಯುತ ಚರ್ಮಕ್ಕೆ ಬಳಸಿ ಅಜೀವಾನ-ಮೆಂತ್ಯ ನೀರು:  
ಅಜೀವಾನ-ಮೆಂತ್ಯ ನೀರು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ನೀರ ಬಳಕೆಯಿಂದ ನಿಮ್ಮ ರಕ್ತ(Blood)ವು  ಶುದ್ಧೀಕರಿಸಲಾಗುತ್ತದೆ. ಅಲ್ಲದೆ, ರಕ್ತ ಪರಿಚಲನೆ ಉತ್ತಮವಾಗುತ್ತದೆ. ಇದರ ದೈನಂದಿನ ಸೇವನೆಯಿಂದ ಚರ್ಮದ ಮೇಲೆ ಆಗುವ ಗುಳ್ಳೆಗಳು, ಸೂಕ್ಷ್ಮ ರೇಖೆಗಳು, ಸುಕ್ಕುಗಳಂತಹ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Watermelon: ಆಲ್ಕೋಹಾಲ್ ಸೇವಿಸುವವರೇ ಕಲ್ಲಂಗಡಿ ತಿನ್ನುವ ಮೊದಲು ಇರಲಿ ಎಚ್ಚರ

5. ರೋಗನಿರೋಧಕ ಶಕ್ತಿ ಹೆಚ್ಚಿಸಲು ಅಜೀವಾನ-ಮೆಂತ್ಯ ನೀರು : 
ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಕರೋನಾ(Corona) ಯುಗದಲ್ಲಿ ಇದಕ್ಕಿಂತ ಉತ್ತಮವಾದ ಪಾನೀಯವಿಲ್ಲ. ಈ ಪಾನೀಯವು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ಅನೇಕ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಶೀತಗಳು, ಜ್ವರ ಮತ್ತು ಸೈನಸ್ ಸಮಸ್ಯೆಗಳನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News