food for rainy days: ಆರೋಗ್ಯ ಚೆನ್ನಾಗಿರಬೇಕಾದರೆ ಮಳೆಗಾಲದಲ್ಲಿ ತಿಂಡಿ ತಿನಿಸು ಹೀಗಿರಬೇಕು
food for rainy days: ಹೇಳಿಕೇಳಿ ಮಳೆಗಾಲ ಬಂದಿದೆ. ಮಳೆಗಾಲ ಎಲ್ಲರಿಗೂ ಇಷ್ಟ. ಆದರೇನು ಮಾಡುವುದು. ಮಳೆಗಾಲ ರೋಗಗಳಿಗೆ ಆಹ್ವಾನ ನೀಡುತ್ತಲೇ ಕಾಲಿಡುತ್ತದೆ.
ನವದೆಹಲಿ : ಹೇಳಿಕೇಳಿ ಮಳೆಗಾಲ ಬಂದಿದೆ. ಮಳೆಗಾಲ (Rainy) ಎಲ್ಲರಿಗೂ ಇಷ್ಟ. ಆದರೇನು ಮಾಡುವುದು. ಮಳೆಗಾಲ ರೋಗಗಳಿಗೆ ಆಹ್ವಾನ ನೀಡುತ್ತಲೇ ಕಾಲಿಡುತ್ತದೆ. ಹೀಗಿರುವಾಗ ಕರೋನಾ ಮತ್ತು ಮಳೆಗಾಲ ಒಟ್ಟಿಗೆ ಆರ್ಭಟಿಸುತ್ತಿರುವಾಗ ನಮ್ಮ ಇಮ್ಯೂನಿಟಿ (Immunity booster) ಹೆಚ್ಚಿಸಿಕೊಳ್ಳುವುದು ಹೇಗೆ..? ಇಲ್ಲಿದೆ ಟಿಪ್ಸ್.
1. ಏಕದಳ ಧಾನ್ಯಗಳನ್ನು ಹೆಚ್ಚಿಗೆ ತಿನ್ನಿ
ಯಾಕೆಂದರೆ, ಜೋಳ, ಮೆಕ್ಕೆಜೋಳ, ಹೆಸರು ಕಾಳು (Green gram) ಮೊದಲಾದ ಧಾನ್ಯಗಳಲ್ಲಿ ಪ್ರೊಟೀನ್, ಮೆಗ್ನೇಶಿಯಂ ಸಾಕಷ್ಟು ಪ್ರಮಾಣದಲ್ಲಿರುತ್ತವೆ. ಫೈಬರ್ (fiber) ಕೂಡಾ ಬೇಕಾದಷ್ಟಿವೆ. ಹಾಗಾಗಿ ಮಳೆಗಾಲದಲ್ಲಿ ಇಮ್ಯೂನಿಟಿಗಾಗಿ (Immunity) ಏಕದಳ ಧಾನ್ಯಗಳನ್ನು ಹೆಚ್ಚಿಗೆ ತಿನ್ನಿ.
ಇದನ್ನೂ ಓದಿ : Office Time Foods : ಆಫೀಸ್ ನಲ್ಲಿ ಕೆಲಸ ಮಾಡುವಾಗ ತಪ್ಪದೆ ಈ ಆಹಾರ ಸೇವಿಸಿ : ರುಚಿಯೂ ಹೆಚ್ಚು, ತೂಕವೂ ಇಳಿಯುತ್ತೆ!
2. ಊಟದಲ್ಲಿ ತರಕಾರಿ ಹೆಚ್ಚಿಗೆ ಇರಲಿ
ಮಳೆಗಾಲದಲ್ಲಿ ತರಕಾರಿ (Vegetables for rainy) ಹೆಚ್ಚಿಗೆ ತಿನ್ನಬೇಕು ಯಾಕೆಂದರೆ, ಅದ್ರಿಂದ ಇಮ್ಯೂನಿಟಿ ಹೆಚ್ಚುತ್ತದೆ. ಬೆಂಡೆ, ಬೀನ್ಸ್, ಹೀರೆಕಾಯಿ, ಮೊದಲಾದ ತರಕಾರಿಗಳನ್ನು ಹೆಚ್ಚಿಗೆ ತಿನ್ನಿ. ಹಾಗಲಕಾಯಿ, ಮೂಲಂಗಿ, ಮೆಂತೆ ಸೊಪ್ಪು ಕೂಡಾ ತಿಂದರೆ ಒಳ್ಳೆಯದು.
3. ಹಣ್ಣು ಬೇಕಾದಷ್ಟು ತಿನ್ನಿ.
ನಿಮ್ಮ ದೈನಂದಿನ ಡಯಟ್ ನಲ್ಲಿ (diet) ಬಾಳೆಹಣ್ಣು, ಸೇಬು, ದಾಳಿಂಬೆ, ಪಪೀತಾ, ನೆಲ್ಲಿಕಾಯಿ (amla) ಸಾಕಷ್ಟು ಇರಲಿ. ಇದರಲ್ಲಿರುವ ಪೋಷಕಾಂಶಗಳು ನಿಮಗೆ ಶಕ್ತಿನೀಡುತ್ತದೆಯಲ್ಲದೆ, ದೇಹದಲ್ಲಿರುವ ಹಾನಿಕಾರಕ ಅಂಶಗಳನ್ನು ಹೊರಗೆ ಹಾಕುತ್ತದೆ. ಜೊತೆಗೆ ಇಮ್ಯುನಿಟಿ ಹೆಚ್ಚಿಸುತ್ತದೆ.
ಇದನ್ನೂ ಓದಿ : Raw Milk Skin Care Tips: ಹಸಿ ಹಾಲನ್ನು ಈ ರೀತಿ ಬಳಸಿ ಸುಂದರ ತ್ವಚೆ ನಿಮ್ಮದಾಗಿಸಿ
4. ಅರಸಿಣ ಹಾಕಿದ ಹಾಲು ಕುಡಿಯಿರಿ
ಅರಸಿಣ ಪ್ರಾಕೃತಿಕ ಆಂಟಿಸೆಪ್ಟಿಕ್ ಮತ್ತು ಆಂಟಿಬಯೋಟಿಕ್ ಏಜೆಂಟ್ ಆಗಿದೆ. ಹಳದಿಯುಕ್ತ ಹಾಲು (turmeric milk) ಕೆಮ್ಮು, ಜ್ವರ ಮುಂತಾದ ಕಾಯಿಲೆಗಳಿಗೆ ಪ್ರಭಾವಿಯಾಗಿದೆ. ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ. ಮಳೆಗಾಲದಲ್ಲಿ ಅರ್ಧ ಚಮಚ ಹಲ್ದಿ ಮತ್ತು ಒಂದು ಚಮಚ ಜೇನು (Honey)ಕುಡಿಯಿರಿ.
5. ಶುಂಠಿ ಚಹಾ ಕುಡಿಯಿರಿ.
ಮಳೆಗಾಲದಲ್ಲಿ ಚಹಾ (tea)ಕುಡಿಯುವ ಆನಂದವೇ ಬೇರೆ. ಆದಷ್ಟೂ ಶುಂಠಿ ಹಾಕಿದ ಟೀ (Ginger tea) ಕುಡಿಯಿರಿ. ಅದಕ್ಕೆ ಜೇನು ಹಾಕಿದರೆ ಇನ್ನೂ ಒಳ್ಳೆಯದು. ಶುಂಠಿ ಚಹಾ ಖಂಡಿತವಾಗಿ ರೋಗನಿರೋಧಕ ಶಕ್ತಿ (immunity) ಬೆಳೆಸುತ್ತದೆ.
ಇದನ್ನೂ ಓದಿ : ನಾಲಗೆಗೆ ರುಚಿಕರ, ಆರೋಗ್ಯಕ್ಕೆ ಅತ್ಯಂತ ಹಿತಕರ, ತಿಳಿಯಿರಿ ಆಕ್ರೊಟಿನ ಮಹಿಮೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.