ನಾಲಗೆಗೆ ರುಚಿಕರ, ಆರೋಗ್ಯಕ್ಕೆ ಅತ್ಯಂತ ಹಿತಕರ, ತಿಳಿಯಿರಿ ಆಕ್ರೊಟಿನ ಮಹಿಮೆ

ಆಕ್ರೊಟು ಅಥವಾ ವಾಲ್ನೆಟ್  ಎಂದು ಕರೆಯಲಾಗುವ ಈ ಸೂಪರ್ ಫುಡ್ ಮೆದುಳಿನ ಬೆಳವಣಿಯಗೆಯೊಂದಿಗೆ  ಸದಾ ತಳಕು ಹಾಕಿಕೊಂಡಿದೆ. ಗಟ್ಟಿ ಹೊರಕವಚ ಹೊಂದಿರುವ ವಾಲ್ನಟ್ ಒಳಗೆ ಮೆದುಳಿನಂತೆಯೇ ರಚನೆಯ ತಿರುಳು ಇರುತ್ತದೆ.  ಅದು ತುಂಬಾ ರುಚಿಕರ ಮತ್ತು ಆರೋಗ್ಯಕ್ಕೆ ಅತ್ಯಂತ ಹಿತಕರ.  

Written by - Ranjitha R K | Last Updated : Jun 14, 2021, 03:20 PM IST
  • ವಾಲ್ನಟ್ ನಿಮ್ಮ ಆರೋಗ್ಯಕ್ಕೆ ತುಂಬಾ ಹಿತಕರ
  • ವಾಲ್ನಟ್ ಒಳಗೆ ಮೆದುಳಿನಂತೆಯೇ ರಚನೆಯ ತಿರುಳು ಇರುತ್ತದೆ.
  • ನಿಯಮಿತವಾಗಿ ಆಕ್ರೋಟು ತಿಂದರೆ ಹಸಿವಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ
ನಾಲಗೆಗೆ ರುಚಿಕರ, ಆರೋಗ್ಯಕ್ಕೆ ಅತ್ಯಂತ ಹಿತಕರ, ತಿಳಿಯಿರಿ ಆಕ್ರೊಟಿನ ಮಹಿಮೆ title=
ವಾಲ್ನಟ್ ನಿಮ್ಮ ಆರೋಗ್ಯಕ್ಕೆ ತುಂಬಾ ಹಿತಕರ (file photo zee news)

ನವದೆಹಲಿ : ಆಕ್ರೊಟು ಅಥವಾ ವಾಲ್ನೆಟ್ (wallnut) ಎಂದು ಕರೆಯಲಾಗುವ ಈ ಸೂಪರ್ ಫುಡ್ ಮೆದುಳಿನ ಬೆಳವಣಿಯಗೆಯೊಂದಿಗೆ (brain development) ಸದಾ ತಳಕು ಹಾಕಿಕೊಂಡಿದೆ. ಗಟ್ಟಿ ಹೊರಕವಚ ಹೊಂದಿರುವ ವಾಲ್ನಟ್ ಒಳಗೆ ಮೆದುಳಿನಂತೆಯೇ ರಚನೆಯ ತಿರುಳು ಇರುತ್ತದೆ.  ಅದು ತುಂಬಾ ರುಚಿಕರ ಮತ್ತು ಆರೋಗ್ಯಕ್ಕೆ ಅತ್ಯಂತ ಹಿತಕರ.  ಆಕ್ರೋಟು ಅತಿಮುಖ್ಯವಾದ ಮತ್ತು ಆರೋಗ್ಯಕರವಾದ ಡ್ರೈಫ್ರುಟ್ಸ್ (Healthy dry fruit).  ನಿಯಮಿತವಾಗಿ ಆಕ್ರೋಟು ತಿಂದರೆ ಹಸಿವಿನ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ. ಬಕಾಸುರ ಟೈಪಿನಲ್ಲಿ ಹಸಿವಾಗುತ್ತಿದ್ದರೆ ಆಕ್ರೋಟು ತಿನ್ನಿ. ಹಸಿವು ಕಡಿಮೆ ಆಗುತ್ತದೆ. ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.  ಇದು ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ. 

ರುಚಿಕರ ಆಕ್ರೋಟು ಆರೋಗ್ಯಕ್ಕೆ ಹೇಗೆ ಹಿತಕರ ನೋಡೋಣ. 
1. ವಾಲ್ನಟ್ (Wallnut) ನಿಮ್ಮ ಆರೋಗ್ಯಕ್ಕೆ ತುಂಬಾ ಹಿತಕರ. ನಿಯಮಿತವಾಗಿ ಅಕ್ರೋಟು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಲಾಭ (Health benefits of wallnut) ಇದೆ.
2. ಆಕ್ರೊಟಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ.  ಇವೆಲ್ಲಾ ಮೆದುಳಿನ ಬೆಳವಣಿಗೆಗೆ (Brain development) ಪೂರಕವಾಗುವ ವಿಟಮಿನ್ ಗಳು. ಅಂದರೆ, ಆಕ್ರೋಟು ತಿಂದರೆ ಬುದ್ದಿ ಬೆಳೆಯುತ್ತದೆ ಅಂತಾರೆ.

ಇದನ್ನೂ ಓದಿ : ತೊಂಡೆಕಾಯಿ ಕಡೆಗಣಿಸಬೇಡಿ..! ದುರ್ಬಲ ಹೃದಯದವರಿಗೆ ಇದೇ ರಾಮಬಾಣ..!
 
3. ಆಕ್ರೊಟಿನಲ್ಲಿ ಸಾಕಷ್ಟು ಫೈಬರ್ ಇದೆ. ಹಾಗಾಗಿ ಇದು ಜೀರ್ಣಾಂಗ ವ್ಯೂಹದ (Digestion) ಕೆಲಸಕ್ಕೆ ತುಂಬಾ ನೆರವಾಗುತ್ತದೆ.  ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಜೊತೆಗೆ ಹೊಟ್ಟೆ ಕೂಡಾ ಕ್ಲೀನ್ ಆಗುತ್ತದೆ.
4. ವಾಲ್ನಟ್ಟಿನಲ್ಲಿ ಸಾಕಷ್ಟು ಆಂಟಿಆಕ್ಸಿಡೆಂಟುಗಳಿರುತ್ತವೆ. ಹಾಗಾಗಿ ಹೊಟ್ಟೆಗೆ ಬೆಸ್ಟು
5. ಮೊದಲೇ ಹೇಳಿದಂತೆ ಆಕ್ರೋಟು ಹಸಿವಿನ ಮೇಲೆ ನಿಯಂತ್ರಣ ಹೇರುತ್ತದೆ. ಆಕ್ರೊಟು ತಿಂದರೆ ಹೊಟ್ಟೆ ತುಂಬಿದಂತೆ ಬಾಸವಾಗುತ್ತದೆ.ಹಾಗಾಗಿ ಹಸಿವೆ ಕಡಿಮೆ ಆಗುತ್ತದೆ. ಬೊಜ್ಜು ಬೆಳೆಯುವುದಿಲ್ಲ.
6. ಆಕ್ರೋಟು ರಕ್ತದೊತ್ತಡವನ್ನು (Blood pressure) ನಿಯಂತ್ರಣದಲ್ಲಿಡುತ್ತದೆ.
7. ಅಕ್ರೋಟು ನಿಯಮಿತವಾಗಿ ತಿಂದರೆ ಕೊಲೆಸ್ಟೆರಾಲ್ ಕಡಿಮೆಯಾಗುತ್ತದೆ

ಇದನ್ನೂ ಓದಿ :  Tasty Tea: ಸಾಧಾರಣ ಟೀಯನ್ನು ಆರೋಗ್ಯಕರ , ರುಚಿಕರವಾಗಿಸಲು ಹೀಗೆ ಮಾಡಿ

8. ವಾಲ್ನಟ್ ಪ್ರೊಟೀನಿನ  ಅತಿಮುಖ್ಯ ಮೂಲ. 
9. ಅಕ್ರೋಟಿನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಬಿ6 ದಂಡಿಯಾಗಿ ಸಿಗುತ್ತದೆ.
10. ರಕ್ತದಲ್ಲಿ ಶುಗರ್ ಲೆವೆಲ್ (Controls sugar level) ನಿಯಂತ್ರಣದಲ್ಲಿಡುತ್ತದೆ
11. ಕೇಶ ಸೌಂದರ್ಯಕ್ಕೆ (hair care) ಆಕ್ರೊಟು ಸೇವನೆ ಮುಖ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News